ದಾವಣಗೆರೆ:ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಲ್ಲೂರು ಭದ್ರ ಉಪ ನಾಲೆಯಲ್ಲಿ ದಿನಾಂಕ:22.11.2024 ರಂದು ಅಪರಿಚಿತ ವ್ಯಕ್ತಿಯ ಶವ ಅನುಮಾನಸ್ಪಾದ ರೀತಿಯಲ್ಲಿ ದೊರೆತಿದ್ದು, ಮೃತ ದೇಹವನ್ನು ದಾವಣಗೆರೆ ತಾಲ್ಲೂಕು ಗೋಪನಾಳ್ ಗ್ರಾಮದ ವಾಸಿ ಸಿದ್ದಲಿಂಗಪ್ಪ ತಂದೆ ಸಿದ್ದಪ್ಪ ಸುಮಾರು 55 ವರ್ಷ ನಾಯಕರ ಜನಾಂಗ, ಬೋರ್ ಪಾಯಿಂಟ್ ಮಾಡುವ ಕೆಲಸ ಅಂತ ಮೃತನ ಸೊಸೆಯಾದ ದೊಡ್ಡಮ್ಮ ಕೋಂ ಸುರೇಶರವರು ಬಂದು ಗುರುತಿಸಿದ್ದು, ದೊಡ್ಡಮ್ಮ ಇವರು ನನ್ನ ಮಾವ ಸಿದ್ದಲಿಂಗಪ್ಪನ ಸಾವು ಕೊಲೆಯಾಗಿರುವ ಬಗ್ಗೆ ಅನುಮಾನವನ್ನು ವ್ಯಕ್ತ ಪಡಿಸಿ ಮೃತನ ಸೊಸೆಯಾದ ದೊಡ್ಡಮ್ಮ ಕೋಂ ಸುರೇಶರವರು ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ ನಂ: 508/2024 ಕಲಂ:103(1), 238, 3(5) ಬಿ.ಎನ್.ಎಸ್ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಈ ಪ್ರಕರಣವನ್ನು ಪತ್ತೆ ಮಾಡಲು ದಾವಣಗೆರೆ ಜಿಲ್ಲೆಯ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ ವಿಜಯಕುಮಾರ್ ರವರ ಮತ್ತು ಶ್ರೀ ಮಂಜುನಾಥ ರವರ ಮಾರ್ಗದರ್ಶನದಲ್ಲಿ, ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ಸ್ಯಾಮ್ ವರ್ಗೀಸ್‌ರವರ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರನ್ನು ಒಳಗೊಂಡ ತಂಡಗಳನ್ನು ರಚನೆ ಮಾಡಿದ್ದು, ಈ ತಂಡವು ದಿನಾಂಕ:23.11.2024 ರಂದು ಪ್ರಕರಣದ ಎ1 ಆರೋಪಿ ಸತೀಶ ತಂದೆ ಶಿವಮೂರ್ತೆಪ್ಪ ವಾಸ:-ಗೋಪನಾಳ್ ಗ್ರಾಮ, ದಾವಣಗೆರೆ ತಾಲ್ಲೂಕು ಇವನನ್ನು ಮತ್ತು ದಿ:24.11.2024 ರಂದು ಪ್ರಕರಣದ ಎ2 ಆರೋಪಿ ಪ್ರಭು @ ಮಾಸ್ತಿ ತಂದೆ ರಾಜಪ್ಪ, ವಾಸ:- ಲಿಂಗದಹಳ್ಳಿ ಗ್ರಾಮ, ದಾವಣಗೆರೆ ತಾಲ್ಲೂಕು ಮತ್ತು ಎ3 ಆರೋಪಿ ಪ್ರಶಾಂತ್ ನಾಯ್ಕ @ ಪಿಲ್ಲಿ ತಂದೆ ಶಂಕರ್ ನಾಯ್ಕ ವಾಸ:- ಆಶಾ ವೈನ್ಸ್ ಮುಂಭಾಗ, ನಿಟ್ಟುವಳ್ಳಿ ದಾವಣಗೆರೆ ನಗರ ಇವರನ್ನು ಮತ್ತು ದಿ:30.11.2024 ರಂದು ಪ್ರಕರಣದ ಎ4 ಆರೋಪಿತೆ ಶ್ರೀಮತಿ ಸುಜಾತ ಕೋಂ ಸತೀಶ ವಾಸ:- ಗೋಪನಾಳ್ ಗ್ರಾಮ, ದಾವಣಗೆರೆ ತಾಲ್ಲೂಕು, ಎ5 ಆರೋಪಿ ಶಿವಮೂರ್ತೆಪ್ಪ ತಂದೆ ಸಿದ್ದಪ್ಪ ವಾಸ:- ಗೋಪನಾಳ್ ಗ್ರಾಮ ದಾವಣಗೆರೆ ತಾಲ್ಲೂಕು ಇವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದ್ದು, ಎಂ,ಎ4,ಎ ಆರೋಪಿತರು ಆಸ್ತಿ ಹಾಗೂ ಜಾಗದ ವಿಚಾರವಾಗಿ ಸಿದ್ದಲಿಂಗಪ್ಪನನ್ನು ಕೊಲೆ ಮಾಡಿಸಲು ಸಂಚು ರೂಪಿಸಿ, ಎ2, ಎ3 ಆರೋಪಿತರು ಸಿದ್ದಲಿಂಗಪ್ಪನನ್ನು ಕೊಲೆ ಮಾಡಲು 01 ಲಕ್ಷ ರೂಪಾಯಿಗೆ ಸುಪಾರಿ ಪಡೆದು ದಿನಾಂಕ: 21-11-2024 ರಂದು ಸಂಜೆ ಸಮಯದಲ್ಲಿ ಸಿದ್ದಲಿಂಗಪ್ಪನ್ನು ಬೋರ್ ಪಾಯಿಂಟ್ ಮಾಡಿಸಬೇಕಾಗಿದೆ ಎಂದು ತೊಗಲೇರಿ ಕ್ರಾಸ್ ನಿಂದ ಆಟೋದಲ್ಲಿ ಚನ್ನಗಿರಿ ತಾಲ್ಲೂಕು ಹೊನ್ನೆಬಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಪೂರ್ವ ನಿಯೋಜನೆಯಂತೆ ಸದರಿ ಸಿದ್ದಲಿಂಗಪ್ಪನನ್ನು ಆರೋಪಿತರು ಟವೆಲ್ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಸಿದ್ದಲಿಂಗಪ್ಪನ ಶವವನ್ನು ನಲ್ಲೂರು ಸಮೀಪದ ಭದ್ರ ಚಾನಲ್ ಗೆ ತಂದು ಶವಕ್ಕೆ ಕಲ್ಲು ಕಟ್ಟಿ ನೀರಿಗೆ ಹಾಕಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿರುತ್ತದೆ.
ಸದರಿ ಪ್ರಕರಣದ ಆರೋಪಿತರನ್ನು ಪತ್ತೆ ಮಾಡುವಲ್ಲಿ ಚನ್ನಗಿರಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ ಇವರು ಪ್ರಶಂಸನೆ ವ್ಯಕ್ತ ಪಡಿಸಿರುತ್ತಾರೆ.