ರೈತರ ಟ್ರೈಲರ್ ಮತ್ತು ತೇಗದ ಮರ ಕಳ್ಳತನ ಮಾಡುತ್ತಿದ್ದ ಆರೋಪಿತರ ಬಂಧನ
ದಿನಾಂಕ:-13-04-2023 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ಪಿರಾದಿಯು ತನ್ನ ಜಮೀನಿನಲ್ಲಿ ಕೆಲಸವನ್ನು ಮುಗಿಸಿ, ನಿಲ್ಲಿಸಿದ್ದ 1,20,000/- ಬೆಲೆಯ ಟ್ರಾಕ್ಟರ್ ಟ್ರೈಲರ್‌ನ್ನು, ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರನ್ನು ಪಡೆದು ಮಲೇಬೆನ್ನೂರು ಪೊಲೀಸ್ ಠಾಣಾ ಗುನ್ನೆ ನಂ: 174/2023 ಕಲಂ: 379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಈ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ ಐ.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ್ ಎಂ ಸಂತೋಷ ಮತ್ತು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಿ.ಎಸ್ ಬಸವರಾಜ್ ರವರ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ಮತ್ತು ಪಿ.ಎಸ್.ಐ ಮಲೇಬೆನ್ನೂರು ರವರ ನೇತೃತ್ವದಲ್ಲಿ ಆರೋಪಿತರ ಪತ್ತೆಗಾಗಿ ತಂಡವನ್ನು ರಚಿಸಲಾಗಿರುತ್ತದೆ.
ದಿನಾಂಕ:-07/11/2023 ರಂದು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ
ಮತ್ತು ಸಿಬ್ಬಂದಿಯವರು 05 ಆರೋಪಿತರ ಪೈಕಿ 1) ಮನೋಜ್, 23 ವರ್ಷ, ಡ್ರೈವರ್ ಕೆಲಸ ವಾಸ ಕೊಮ್ಮನಹಳ್
ಗ್ರಾಮ ಶಿವಮೊಗ್ಗ ತಾಜಿ॥ 2) ಮಧು, 21 ವರ್ಷ, ಡ್ರೈವರ್ ಕೆಲಸ ವಾಸ ಕೊಮ್ಮನಹಾಳ ಗ್ರಾಮ ಶಿವಮೊಗ್ಗ ತಾಂಚಿ
ರವರನ್ನು ಬಂಧಿಸಿ ಸದರಿಯವರಿಂದ ಮಲೇಬೆನ್ನೂರು ಪೊಲೀಸ್ ಠಾಣೆಯ 12 ಟ್ರೈಲರ್ ಕಳ್ಳತನ ಪ್ರಕರಣಗಳು,
ಮತ್ತು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ 01 ಟ್ರೈಲರ್ ಕಳ್ಳತನ ಪ್ರಕರಣ, ನ್ಯಾಮತಿ ಪೊಲೀಸ್ ಠಾಣೆಯ
02 ಟ್ರೈಲರ್ ಕಳ್ಳತನ ಪ್ರಕರಣಗಳು ಹಾಗೂ ಹೊನ್ನಾಳಿ ಪೊಲೀಸ್ ಠಾಣೆಯ 02 ಟ್ರೈಲರ್ ಕಳ್ಳತನ ಪ್ರಕರಣಗಳನ್ನು
ಪತ್ತೆ ಮಾಡಿ, 14,000,00/- ರೂ ಬೆಲೆಯ ಒಟ್ಟು 07 ಟ್ರೈಲಗಳು ವಶಪಡಿಸಿಕೊಂಡಿದ್ದು, ಅಲ್ಲದೇ ನ್ಯಾಮತಿ
ಪೊಲೀಸ್ ಠಾಣೆಯ 01 ತೇಗದ ಮರ ಕಳ್ಳತನ ಪ್ರಕರಣವನ್ನು ಭೇದಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ 35,000/- ರೂ
ನಗದು ಹಣವನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಸದರಿ ಟ್ರೈಲರ್ ಮತ್ತು ತೇಗದ ಮರದ ಕಳ್ಳತನ ಪ್ರಕರಣಗಳನ್ನು ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಶ್ರೀ ಪ್ರಭು ಡಿ ಕೆಳಗಿನ ಮನಿ, ಸಿಬ್ಬಂದಿಯವರಾದ ಭೈರೋಜ್ ಖಾನ್, ವೆಂಕಟರಮಣ, ಲಕ್ಷ್ಮಣ, ರಾಜಶೇಖರ್, ಸಂತೋಷಕುಮಾರ್, ಪ್ರದೀಪ್, ಹನುಮಂತ ರೆಡ್ಡಿ, ರಂಗಪ್ಪ, ಶ್ರೀ ರಾಘವೇಂದ್ರ, ಶ್ರೀ ಶಾಂತರಾಜ್, ಶಿವಕುಮಾರ್, ರಾಜಪ್ಪ ರವರ ತಂಡವು ಭೇದಿಸುವಲ್ಲಿ ಯಶಸ್ವಿಯಾದ ಮೇಲ್ಕಂಡ : ಅಧಿಕಾರಿ, ಸಿಬ್ಬಂದಿಗಳನ್ನು ಶ್ರೀಮತಿ ಉಮಾಪ್ರಶಾಂತ್, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕಕರು ದಾವಣಗೆರೆ ಜಿಲ್ಲೆ ರವರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.