ದಾವಣಗೆರೆ ಡಿಸೆಂಬರ್ 12:ದಾವಣಗೆರೆ ಎಪಿಎಂಸಿಯಲ್ಲಿ ಈಗಾಗಲೇ ಇ ಟೆಂಡರ್ ಪ್ರಕ್ರಿಯೆ ಖರೀದಿ ಕೇಂದ್ರದಲ್ಲಿ ನಡೆಯುತ್ತಿದ್ದು
ರೈತರ ಭತ್ತ ಮತ್ತು ಇತರೆ ಧಾನ್ಯಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿದ್ದು ಆದರೆ
ಮಧ್ಯವರ್ತಿ ವರ್ತಕರ ಕೊಳ್ಳುವ ಏಜೆಂಟರ ಹಾವಳಿ ಹೆಚ್ಚಾಗುತ್ತಿದ್ದು ಅವರಿಗೂ ಕೂಡ ಈ ಟೆಂಡರ್ ಪದ್ಧತಿ ಅಳವಡಿಸುವಂತೆ ಭಾರತೀಯ ರೈತ ಒಕ್ಕೂಟದ ಬೆಳವನೂರು ನಾಗೇಶ್ವರರಾವ್ ಹಾಗೂ ಕೊಳೆನಹಳ್ಳಿ ಸತೀಶ್ ಆಗ್ರಹಪಡಿಸಿದರು.
ಅವರಿಂದು ರೈತರು ಕೂಡ ಹಾಗಿರುವ ಬೆಳವನೂರಿನ ನಾಗೇಶ್ವರರಾವ್ ಅವರ ತೋಟದ ಮನೆಯಲ್ಲಿ ಪತ್ರಿಕೆ ಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು
ಎಪಿಎಂಸಿ ವರದಗಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಕೂಡ
ಭಕ್ತ ಖರೀದಿ ಬರದಿಂದ ಸಾಗುತ್ತಿದೆ, ಆದರೆ ಭತ್ತ ಖರೀದಿಸುವ ಮಾಲೀಕರ ಪರವಾಗಿ ಏಜೆಂಟರುಗಳು ಭತ್ತ ಖರೀದಿಸಿ ಹಣವನ್ನ ವಿಳಂಬವಾಗಿ ಪಾಸ್ ಪಾವತಿ ಮಾಡುವುದು, ರೈತರ ಬತ್ತಕ್ಕೆ ಡಿಸ್ಕೌಂಟ್ ನಲ್ಲಿ ಬತ್ತ ಖರೀದಿ
ಪ್ರತಿ ಚೀಲಕ್ಕೆ 2 ಕೆ.ಜಿ ಸೂಟ್ ತೆಗೆಯುವುದು, ಭತ್ತದ ರಾಶಿಯಲ್ಲಿ ಶಾಂಪೂ ತೆಗೆಯುವುದು ಮತ್ತು ಅಮಲರಿಗೆ ತಲಗಾಳು ಇಂತಹ ರೈತರನ್ನು ಶೋಷಣೆ ಮಾಡುವ
ಪ್ರಕ್ರಿಯೆ ಕೂಡಲೇ ನಿಲ್ಲಬೇಕು ಎಂದು ಆಗ್ರಹ ಪಡಿಸಿದರು.
ಖರೀದಿದಾರರು 12 ಗಂಟೆ ಒಳಗೆ ಸ್ಯಾಂಪಲ್ ಪಡೆದು
12 ಗಂಟೆ ಒಳಗೆ ಟೆಂಡರ್ ಹಾಕಬೇಕು, ಮಧ್ಯಾಹ್ನ 1:00ಗೆ ಟೆಂಡರ್ ತೆರೆದು ಸಂಜೆ 6:00 ಒಳಗೆ ಭತ್ತವನ್ನು ರೋಡ್ ಮಾಡಿ ಸಂಜೆ ಪೇಮೆಂಟ್ ಪೇಮೆಂಟ್ ಪ್ರಕಾರ ಆನ್ಲೈನ್ ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣ ಪಾವತಿಸಬೇಕು ಎಂದು ಎಂದು ನಾಗೇಶ್ವರರಾವ್ ಹಾಗೂ ಕೊಳಹಳ್ಳಿ ಸತೀಶ್ ಒತ್ತಾಯಿಸಿದರು.
ಹಳ್ಳಿಗಳಲ್ಲಿ ಇರುವ ಭತ್ತದ ರಾಶಿ ಸಮೇತ ಈ ಟೆಂಡರ್ ಮಾಡುವುದರಿಂದ ಎಪಿಎಂಸಿಗೆ ತರುವ ಸಾಗಾಣಿಕೆ ವೆಚ್ಚವು ಕೂಡ ಕಡಿಮೆಯಾಗುತ್ತದೆ ಎಪಿಎಫ್‌ಸಿಗೂ ಕೂಡ ಶುಲ್ಕ ಆದಾಯ ಬರುತ್ತದೆ ರೈತರಿಗೂ ಕೂಡ ಶ್ರಮ ವ್ಯಯ ಹಾಗೂ ಹಮಾರರ ಖರ್ಚು ಕೂಡ ಉಳಿತಾಯವಾಗುವುದು ಎಂದರು.
ಈ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಎಚ್ ಎಂ ಸಿ ರಾಣಿಯವರು ಕೂಡಲೇ ಜಿಲ್ಲಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ
ಹಳ್ಳಿಗಳಲ್ಲಿ ಖರೀದಿಸುವ ಈ ಟೆಂಡರ್ ಪದ್ಧತಿ ಜಾರಿ ಮಾಡಬೇಕೆಂದು ಅಗ್ರಪಡಿಸಿ
ಸರ್ಕಾರ ಕಬ್ಬು ಖರೀದಿ ಸಕ್ಕರೆ ಕಾರ್ಖಾನೆಗಳಲ್ಲಿ ನಡೆಯುವ ತೂಕದಲ್ಲಿರುವ ವ್ಯತ್ಯಾಸ ಸರಿಪಡಿಸಲು ಪ್ರತಿ ಸಕ್ಕರೆ ಕಾರ್ಖಾನೆ ಸಮೀಪ 11 ಕೋಟಿ ವೆಚ್ಚದಲ್ಲಿ ವೇಮೆಂಟ್ ವೇ ಬ್ರಿಡ್ಜ್ ಆರಂಭಿಸುವುದಾಗಿ ಆಶ್ವಾಸನೆ ನೀಡಿದ್ದು ಸ್ವಾಗತ
ಅದರಂತೆ ಪ್ರತಿ ಎಪಿಎಂಸಿ ಆವರಣದಲ್ಲಿ ಕೂಡಲೇ ವಿ ಬ್ರಿಡ್ಜ್ ಗಳನ್ನು ಸ್ಥಾಪಿಸಿ ರೈತರಿಗೆ ತೂಕದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು
ಈ ಸಂದರ್ಭದಲ್ಲಿ ಮನವಿ ಮಾಡಿದರು.
ರೈತ ಮುಖಂಡರಾದ ಮಹೇಶಪ್ಪ, ಕುಂದುವಾಡದ ಜುಮ್ಮಿ ಹನುಮಂತಪ್ಪ, 6ನೇ ಕಲ್ಲು ವಿಜಯ್ ಕುಮಾರ್
ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.

