ದಾವಣಗೆರೆ: ದಾವಣಗೆರೆ ಕುರುಬ ಸಮಾಜದ ವತಿಯಿಂದ ಜ.೫ರಂದು ಬೆಳಗ್ಗೆ ೧೧.೩೦ಕ್ಕೆ ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಮಟ್ಟದ ೫೩೭ನೇ ದಾಸಶ್ರೇಷ್ಠ ಶ್ರೀಕನಕದಾಸರ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎಸ್.ರಾಮಪ್ಪ ತಿಳಿಸಿದರು.
ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೫ರಂದು ನಡೆಯಲಿರುವ ಕನಕದಾಸರ ಜಯಂತ್ಯೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮ್ಯ ಆಗಮಿಸಲಿದ್ದಾರೆ.
ಅವರೊಂದಿಗೆ ಭೈರತಿ ಸುರೇಶ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮ್ಮದ್, ಹೆಚ್.ಸಿಮಹಾದೇವಪ್ಪ ಆಗಮಿಸಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್, ಮಾಜಿ ಸಂಸದ ಜಿ.ಎಂಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲಾ ಮಠದ ಪೂಜ್ಯರುಗಳು ಸಾನಿಧ್ಯ ವಹಿಸಲಿದ್ದಾರೆ. ಸುಮಾರು ೪೫ ರಿಂದ ೫೦ ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಪಕ್ಷಾತೀತವಾಗಿ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಕನಕದಾಸರು ಈ ನಾಡು ಕಂಡ ಮಹಾನ್ ಸಂತರು, ಚಿಂತಕರು, ತತ್ವಜ್ಞಾನಿಗಳು, ಸಮಾಜ ಸುಧಾರಕರು ಅವರ ಜಯಂತ್ಯೋತ್ಸವವನ್ನು ಜ.೫ ರಂದು ಆಯೋಜಿಸಲಾಗಿದೆ.ಅದಕ್ಕೂ ಮುನ್ನ ಜ.೪ರಂದು ಬೆಳಗ್ಗೆ ೯.೩೦ಕ್ಕೆ ದಾವಣಗೆರೆಯ ಎಸ್‌ಎಸ್ ಹೈಟೆಕ್ ಆಸ್ಪತ್ರೆ ರಸ್ತೆಯ ಬೀರೇಶ್ವರ ಬಡಾವಣೆಯ ಶ್ರೀಕಾಳಿದಾಸ ವೃತ್ತದಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಜ.೫ರಂದು ಬೆಳಗ್ಗೆ ೯.೩೦ಕ್ಕೆ ನಗರದೇವತೆ ಶ್ರೀ ದುರ್ಗಾಂಭಿಕಾ ದೇವಸ್ಥಾನದಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ವೇದಿಕೆ ಕಾರ್ಯಕ್ರಮ ಬೆಳಗ್ಗೆ ೧೧.೩೦ ಜರುಗಲಿದೆ.ನಂತರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಅನ್ನಸಂತರ್ಪಣೆ ನಡೆಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಜೆಎನ್ ಶ್ರೀನಿವಾಸ್ ಎಸ್ ರಾಮಪ್ಪನವರು ಮಾಜಿ ಶಾಸಕರು ಶ್ರೀಯುತ ಸಕ್ರಿ ಸಾಹೇಬರು, ಮುರುಗಣ್ಣನವರು, ಮಾಜಿ ಮೇಯರ್ ಗೋಣೆಪ್ಪನವರು, ಕುರುಬರ ಕೆರೆ ಜಯಣ್ಣನವರು, ಬಿ ಲಿಂಗರಾಜ್ ರವರು, ಇಟಿಗುಡಿ ಮಂಜುನಾಥ್‌ರವರು , ಎಸ್ ಟಿ ಅರವಿಂದ್ ರವರ, ಓಮಣ್ಣ ಬಿಳಿಚೋಡ್,ಎಸ್ ಎಸ್ ಗಿರೀಶ್ ರವರು, ಞರೇವಣ್ಣನವರು, ಮಾಯಕೊಂಡ ಮಲ್ಲಿಕಾರ್ಜುನಪ್ಪ, ಕುಂದವಾಡ ಪ್ರಕಾಶ್, ಮಂಜು ಕೊಗ್ಗನೂರು ವಿನಯ್ ಜೋಗಪ್ಪರ, ಬಿಬಿ ಮಲ್ಲೇಶ್, ಚನ್ನವೀರಯ್ಯ, ಪುರಂದರ ಲೋಕಿಕೆರೆ, ಗಣೇಶ್ ದಳವಾಯಿ, ಶಿವಾನಂದ ದಳವಾಯಿ, ಪರಶುರಾಮಪ್ಪ, ಬಸವರಾಜಪ್ಪ ಹದಡಿ, ಇನ್ನು ಅನೇಕ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು