Saturday, December 21, 2024
Homeಬರಹಮಂಡ್ಯದಲ್ಲಿ ನಡೆಯುತ್ತಿರು ೮೭,ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೊದಲದಿನದ ಅಂಕು-ಡೊಂಕುಗಳ ಮಧ್ಯ ಗುರುತಿಸದೇ ಹೋದ...

ಮಂಡ್ಯದಲ್ಲಿ ನಡೆಯುತ್ತಿರು ೮೭,ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೊದಲದಿನದ ಅಂಕು-ಡೊಂಕುಗಳ ಮಧ್ಯ ಗುರುತಿಸದೇ ಹೋದ ನೈಜ ಮಂಡ್ಯದಗಂಡು ಅಟೋಚಾಲಕ?


ಮಂಡ್ಯ:ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾನು ಸಾಕಷ್ಟು ಬಾರಿ ಅಂದರೆ ಬಾಗಲಕೋಟೆ,ತುಮಕೂರು,ಕಲಬುರಗಿ ಗಳಲ್ಲಿನಡೆದಾಗಲೂ ಹೋಗಿದ್ದೆ.ಆದರೆ ಆಗ ನಾನು ನೋಂದಣಿಮಾಡಿಸುತ್ತಿರಲಿಲ್ಲಾ.ನನ್ನಪಾಡಿಗೆ ನಾನು ಹೋಗಿ ಸಮ್ಮೇಳನದ ಸೊಬಗು ಅನುಭವಿಸಿಬರುತಿದ್ದೆ.ವಸತಿ,ಊಟ, ಕಿಟ್ ಇದ್ಯಾವುದರ ಕಡೆಗೂ ನಾನು ಆಶಿಸದೆ ಹೋಗಿಬರುತಿದ್ದೆ.ಆದರೆ ಈ ಬಾರಿ ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲಭಾರತ ೮೭,ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲದಿನದ ನನ್ನ ಅನುಭವದ ಕುರಿತು ಬರೆಯುತಿದ್ದೇನೆ.
ನಾನು೨೦೧೬,ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದೆ.ಆದರೆ ನನಗೆ ಯಾವುದೇ ಗುರುತಿನಚೀಟಿ ನನಗೆ ಸಾಹಿತ್ಯಪರಿಷತ್ತಿನಿಂದ ಬಂದಿರಲಿಲ್ಲಾ.ತದನಂತರ ಒಂದು ದಿವಸ ಮೋಬೈಲ್ ನೋಡುತ್ತಿರುವಾಗ ಕನ್ನಡಸಾಹಿತ್ಯಪರಿಷತ್ತಿನ ಆ್ಯಪ್ ಕಂಡಿತು ಅದನ್ನು ನೋಡುತ್ತಿರುವಾಗ ಕನ್ನಡ ಸಾಹಿತ್ಯಪರಿಷತ್ತಿನ ಸ್ಮಾರ್ಟ್ ಗುರುತಿನಚೀಟಿ ಪಡೆಯಲು ಒಂದು ಆಪ್ಸನ್ ಇತ್ತು.ತಕ್ಷಣ ನಾನು ಅದನ್ನು ತೆರೆದು ನೋಡಿದಾಗ ಅದಕ್ಕೆ ಬೇಕಾದ ದಾಖಲಾತಿಯನ್ನು ಭರ್ತಿಮಾಡಿಕಳಿಸಿದೆ.ನನಗೆ ಅತಿಸಂತೋಷಯಾಕಾಯ್ತಂದರೆ ದಿನಾಂಕ:೦೧-೧೧-೨೦೨೪,ಕನ್ನಡ ರಾಜ್ಯೋತ್ಸವ ದಿವಸ ನನಗೆ ದಾವಣಗೆರೆ ವಿದ್ಯಾನಗರ ಅಂಚೆಕಚೇರಿಯ ಪೋಸ್ಟ್ ಮ್ಯಾನ್ ಮುಖಾಂತರ ಒಂದು ಕವರ್ ತಲುಪಿತು.ಅದನ್ನು ತೆರೆದು ನೋಡಿದಾಗ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬಂದ ಸ್ಮಾರ್ಟ್ ಗುರುತಿನ ಚೀಟಿಯಾಗಿತ್ತು ಅದು ಕನ್ನಡರಾಜ್ಯೋತ್ಸವದ ದಿನದಂದೇ ತಲುಪಿದ್ದು ಕಾಕತಾಳೀಯವಾಗಿತ್ತು.
೮೭,ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವ ಕುರಿತು ಅದೇ ಆನಲೈನ್ ನಲ್ಲಿ ನೋಂದಣಿ ಗಮನಿಸ್ತಾ ಇದ್ದೆ.ಆದರೆ ಅನ್ ಲೈನಲ್ಲಿ ನೋಂದಣಿ ಹಣ ಆರುನೂರು ರೂಪಾಯಿಯಂತಿತ್ತು ನನ್ನ ಬ್ಯಾಂಕ್ ಅಕೌಂಟಲ್ಲಿ ಪರಿಶೀಲಿಸಿದಾಗ ಕೇವಲ ಇಪ್ಪತ್ತು ರೂಪಾಯಿ ಮಾತ್ರ ಅಕೌಂಟಲ್ಲಿ ಇತ್ತು.ಇದು ಯಾರೂ ನಂಬಲಾಗದ ವಿಷಯ ಇನ್ನೂ ಅದೆ ವಿಷಯ ನೋಡುತ್ತಿರುವಾಗಲೇ ತಾಯಿ ಭವನೇಶ್ವರಿಯ ಕೃಪೆಯಿಂದಲೋ ಏನೋ ಗೊತ್ತಿಲ್ಲಾ ೫೦೦೦,ರೂಗಳುನನ್ನ ಅಕೌಂಟಿಗೆ ಜಮಾ ಆದ ಮೆಸೇಜ್ ಬಂತು.ತಕ್ಷಣ ಅಕೌಂಟ್ ಪರಿಶೀಲಿಸಿದಾಗ ನನ್ನ ಮಗ ನನಗೆ ಐದುಸಾವಿರ ನನಗೆ ಖರ್ಚಿಗೆ ಅಂತ ಹಾಕಿದ್ದು ನನಗೆ ಅತ್ಯಂತ ಸಂತಸ ಮತ್ತು ಆಶ್ಚರ್ಯ ಎರಡೂ ಒಟ್ಟಿಗೇ ಆಯ್ತು.ಕಾರಣ ನಾನು ನನ್ನ ಮಗನಿಗೆ ಹಣ ಕೇಳಿರಲೇ ಇಲ್ಲಾ.ಆತನೂ ನನಗೆ ಹಣ ಹಾಕುವುದಾಗಿ ಹೇಳಿಯೂ ಹಾಕಿರಲಿಲ್ಲಾ.ಇದೊಂದು ಅತ್ಯಂತ ಸೋಜಿಗದ ವಿಷಯವಾಗಿತ್ತು.ತಕ್ಷಣವೇನಾನು ಯುಪಿಐಮೂಲಕ ಆರುನೂರು ರೂಪಾಯಿಗಳನ್ನು ಪ್ರತಿನಿಧಿಶುಲ್ಕ ಜಮಾಮಾಡಿ ಡಿಸೆಂಬರ್ ೨೦,೨೧,೨೨,ರಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲಭಾರತ ೮೭,ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಿನಿಧಿಯಾಗಿ ನೋಂದಣಿಮಾಡಿಸಿದೆ.ಸ್ವಲ್ಪ ಸಮಯದ ನಂತರ ನನಗೆ ವಾಟ್ಸಪ್ ಮುಖಾಂತರ ಮೆಸೆಜ್ ಬಂದು ನೋಂದಣಿ ಖಾತ್ರಿಪಡಿಸಿತು.
ನಾನು ದಿನಾಂಕ: ೧೮-೧೧-೨೦೨೪ರಂದು ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿರು ನನ್ನ ಮಗಳ ಮನೆಗೆ ಬಂದೆ.ಅಲ್ಲಿಂದ ಮಂಡ್ಯ ಹತ್ತಿರ ಇರುವುದರಿಂದ ನಾನು ದಿನಾಂಕ:೨೦-೧೧-೨೦೨೪ರಂದು ಮುಂಜಾನೆ ಎಂಟು ಗಂಟೆಗೆ ಕೆಂಗೇರಿ ರೈಲುನಿಲ್ದಾಣಕ್ಕೆ ಹೋದೆ.ಆದರೆ ಆಸಮಯದಲ್ಲಿ ಮಂಡ್ಯಕಡೆಗೆ ಹೋಗುವ ರೈಲು ಇರಲಿಲ್ಲಾ ಹಾಗೆ ನಡೆಯುತ್ತ ಕೆಂಗೇರಿ ಪೊಲೀಸ್ ಸ್ಟೇಷನ್ ವರೆಗೆ ಹೋಗಿ ಅಲ್ಲಿಂದ ಮೈಸೂರು ಬಸ್ ಹತ್ತಿ ಹೋಗುವಷ್ಟರಲ್ಲಿ ನಮ್ಮ ಹಿರಿಯ ಪತ್ರಕರ್ತರಾದ ಶ್ರೀ ಡಿಎಲ್.ಹರೀಶ್ ರವರು “87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ದೊರೆತಿದೆ
ಸಮ್ಮೇಳನದ ವೇದಿಕೆ ಆವರಣದಲ್ಲಿ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಎನ್ ಚಲುವರಾಯಸ್ವಾಮಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರೆ,
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ ಮಹೇಶ್ ಜೋಶಿ ಪರಿಷತ್ತಿನ ಧ್ವಜ ಹಾಗೂ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಮೀರಾ ಶಿವಲಿಂಗಯ್ಯ
ನಾಡ ಧ್ವಜಾರೋಹಣ ಮಾಡಿದರು
ಸಮ್ಮೇಳನದ ಸೃವಾಧ್ಯಕ್ಷರಾದ ಗೊ.ರು. ಚನ್ನಬಸಪ್ಪ ,ಚೆಸ್ಕಾಂ ಅಧ್ಯಕ್ಷರಾದ ರಮೇಶ್ ಬಂಡಿ ಸಿದ್ದೇಗೌಡ , ಶಾಕರಾದ ದಿನೇಶ್ ಗೂಳಿಗೌಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು” ಎಂದು ಸುದ್ದಿಯನ್ನು ಮತ್ತು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
ಚಾಲನೆ ನೀಡಿದರು.
ಆದಿ ಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ, ಪುರುಶೋತ್ತಮಾನಂದ ಸ್ವಾಮೀಜಿ , ಚೆಸ್ಕಾಂ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ ,
ಶಾಸಕರಾದ ನರೇಂದ್ರಸ್ವಾಮಿ,
ರವಿ ಕುಮಾರ್ ,ಮಧು ಮಾದೇಗೌಡ,
ದಿನೇಶ್ ಗೂಳಿಗೌಡ ,ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಷಿ ಮತ್ತಿತರರು ಉಪಸ್ಥಿತರಿದ್ದರು”ಎಂದು ಸುದ್ದಿಯನ್ನು ನನಗೆ ಕಳಿದರು ನಾನು ತಕ್ಷಣವೇ ನನ್ನ ಮೋಬೈಲ್ ಮುಖಾಂತರ ನನ್ನ ಪತ್ರಿಕೆಗಳ ವೆಬ್ ಸೈಟ್ ಗಳಾದ ಸಹಾಯವಾಣಿ ಹಾಗೂ ಪವಿತ್ರಪ್ರಜಾ ವೆಬ್ ಸೇಟ್ ಗಳಿಗೆ ಅಪ್ ಲೋಡ್ ಮಾಡಿದೆ.
ನಾನು ಬಸ್ ಮುಖಾಂತರ ಮಂಡ್ತ ತಲುಪುವ ವೇಳೆಗೆ ಸಮ್ಮೇಳನದ ಸಮ್ಮೇಳನದ ಅಧ್ಯಕ್ಷರ ಮತ್ತು ಭುವನೇಶ್ವರಿಯ ಮೆರವಣಿಗೆ ಸಮ್ಮೇಳನದ ಸಭಾಂಗಣ ತಲುಪಿತ್ತು.ಮುಖ್ಯಮಂತ್ರಿ ಗಳು ಸಮ್ಮೇಳನ ಉದ್ಘಾಟಿಸಿ ಮಾತನಾಡುತಿದ್ದರು.

ನಾನು ನೇರವಾಗಿ ಸಮ್ಮೇಳನದ ಸಭಾಂಗಣಕ್ಕೆ ಹೋದೆ ಕಿಕ್ಕಿರಿದ ಜನಸಂದನಿ ವೇದಿಕೆ ಮೇಲಿರುವವರನ್ನು ಗುರುತಿಸುವುದೇ ಕಷ್ಟವಾಯಿತು ಅಷ್ಟು ದೂರದಲ್ಲಿ ನಿಂತು ಕಾಟಾಚಾರಕ್ಕೆ ಎಂತೆ ದೂರದಿಂದಲೇ ಒಂದೆರಡು ಪೋಟೋ ಕ್ಲಿಕ್ಕಿಸುತ್ತಾ ಮುಖ್ಯಮಂತ್ರಿಗಳಭಾಷಣ ಕೇಳಿಯಾಯ್ತು.ಸಹಜವಾಗಿಯೇ ಅವರು ಕೇಂದ್ರಸರ್ಕಾರ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ವಿರೋದಿಸಿ.ಕನ್ನಡ ನೆಲ,ಜಲ,ಭಾಷೆ ರಕ್ಷಣೆಗಾಗಿ ಸರ್ಕಾರ ತಗೆದುಕೊಂಡ ಕ್ರಮಗಳ ಕುರಿತು ಮಾತನಾಡಿದರು.ವಿಧಾನಸಭಾಧ್ಯಕ್ಷ ಯುಟಿ.ಖಾದರ್ ರವರು ಸೇರಿದಂತೆ ಅತಿಥಿಗಳು ಮಾತನಾಡಿದರು ಸಮ್ಮೇಳನದ ಅಧ್ಯಕ್ಷರಾದ ಗೋ.ರು.ರವರು ಮಾತನಾಡ್ತಾ ತಮ್ಮ ಅಧ್ಯಕ್ಷಿಯ ಭಾಷಣ ಮಾಡಿ ಎಲ್ಲಾ ಸಮ್ಮೇಳನ ಅಧ್ಯಕ್ಷರ ಭಾಷಣ ಕೇಳ್ತಾರೆ ಸಮ್ಮೇಳನದ ಸಭಾಂಗಣದ ಹೊರಹೋಗ್ತಿದ್ದಂತೆ ಮರೆತು ಬಿಡ್ತಾರೆ ಸರ್ಕಾರಗಳೂ ಅಷ್ಟೇ ಸಮ್ಮೇಳನದಲ್ಲಿ ನಿರ್ಣಯಿಸಿದ ನಿರ್ಣಯಗಳನ್ನು ಜಾರಿತರಲು ಉತ್ಸುಕರಾಗುವುದಿಲ್ಲವೆಂದು ದಿಟ್ಟ ನುಡಿಗಳನ್ನಾಡಿದರು.ಅತಿಥಿಗಳಸತ್ಕಾರಗಳು ನಡೆಯುತಿದ್ದಂತೆ ನಾನು ಹಾಗೆ ಪುಸ್ತಕ ಮಳಿಗೆ ಕಡೆ ಹೋದೆ .

ಇನ್ನೂ ಕೆಲವಾರು ಮಳಿಗೆಗಳು ಖಾಲಿ ಇದ್ದವು ಆದರೆ ಪುಸ್ತಕ ನೋಡುವವರ ಸಂಖ್ಯೆ ಹೆಚ್ಚಾಗಿತ್ತು ಪುಸ್ತಕ ಖರೀದಿಸುವವರ ಸಂಖ್ಯೆ ತುಂಬಾವಿರಳ ವಿತ್ತು.ನಾನು ಹೊರಗಡೆ ಎಲ್ಲವನ್ನೂ ನೋಡುತ್ತಾ

ಊಟದ ಹಾಲ್ನತ್ತ ಗಮನ ಹೊಯ್ತು ಅಲ್ಲಿ ನಾಮಫಲಕ ನೋಂದಾಯಿತ ಪ್ರತಿನಿಧಿಗಳಿಗೆ ಮಾತ್ರ ಎಂದಿತ್ತು ನಾನು ಹೇಗೂ ನೋಂದಾಯಿಸಿದ್ದೇನೆಂದು ಅಲ್ಲಿ ಹೋದೆ ಒಳಗೆ ಬಿಡಲಿಲ್ಲಾ.ಕಾರಣ ನೋಂದಾಯಿತ ಪ್ರತಿನಿಧಿಗಳ ಕಿಟ್ ಜೊತೆ ಐಡಿ ಕಾರ್ಡು ಇತ್ತಂತೆ ಅದನ್ನು ಕೇಳಿದರು ನಾನು ಇನ್ನೂ ಕಿಟ್ ಪಡೆದಿರಲಿಲ್ಲಾ ಹಾಗಾಗಿ ನನಗೆ ಗುರುತಿನ ಚೀಟಿ ಇರಲಿಲ್ಲಾ.ನಾನು ಹಾಗೇ ಕಿಟ್ ವಿರಿಸುವ ಕೌಂಟರ್ ಕಡೆಗೆ ಹೋದೆ ಅಲ್ಲಿ ಜನಜಂಗುಳಿ ಸಾಲುಗಟ್ಟಿ ನಿಂತಿದ್ದರು ಸಮಯ ಎರಡುಗಂಟೆಯಾಗಿತ್ತು.ಕಿಟ್ ಗಳೆಲ್ಲವೂ ಖಾಲಿಯಾಗಿದ್ದವು.ಮತ್ತೆ ನಾಲ್ಕು ಗಂಟೆಗೆ ಬರಲು ಹೇಳಿದರು.ನಾಲ್ಕುಗಂಟೆವರೆಗೆ ಕಾಯೋದು ಬೇಡ ವಸತಿ ವ್ಯವಸ್ಥೆಯನ್ನು ಪಿಇಎಸ್ ವಿಜ್ಞಾನ ಕಾಲೇಜಿನಲ್ಲಿ ಒದಗಿಸಲಾಗಿದೆ ಎಂದು ವಾಟ್ಸಪ್ ಗೆ ಮೆಸೆಜ್ ಬಂದಿತ್ತು.ಅದನ್ನಾದರೋಡಿಬರೋಣ ಕಾರ್ಯಕ್ರಮಮುಗಿಸಿ ರಾತ್ರಿ ವೇಳೆ ಹೋಗೋಕೆ ಅನುಕೂಲವಾಗುತ್ತೆಂದು ಹೊರಗೆ ಹೋದೆ ರಸ್ತೆ ಅಕ್ಕಪಕ್ಕ ಕಿಲೋಮೀಟರ್ ವರೆಗೆ ಜನಸಾಗರ ಕಣ್ತುಂಬಾ ಕಾಣುವ ಜನಸ್ಥೋಮ!!ನಾನು ಕಲಬುರಗಿಯಲ್ಲಿ ನೋಡಿದ್ದಕಿಂತಲೂ ಹೆಚ್ಚು ಎನಿಸಿತು.
ಸಮ್ಮೇಳನ ಸ್ಥಳದಿಂದ ಮಂಡ್ಯನಗರವು ತುಂಬಾದೂರದಲ್ಲಿರುವುದರಿಂದ ನಡೆದುಕೊಂಡು ಹೋಗುವುದು ಆಗ್ತಿಲ್ಲವಾದ್ದರಿಂದ ವಾಹನ ಗಳ ಸಹಾಯ ಅಗತ್ಯವಾಗಿತ್ತು.ಸಮ್ಮೇಳನದ ಸಾರಿಗೆ ಅಂತ ಬಸ್ ಗಳು ಇದ್ದವು ಅವುಗಳು ಬಹಳ ಜನರಿಗೆ ಉಪಯೋಗವಾಗಲಿಲ್ಲಾ ಹಾಗಾಗಿ ಅಟೋ ಮೋರೆಹೋಗುವುದು ಅನಿವಾರ್ಯವಾಗಿತ್ತು.ಅಟೋದವರು ಕೆಲವರು ತಮ್ಮಿಚ್ಛೆಗೆ ಬಂದಂತೆ ಒಬ್ಬರಿಗೆ ಸೀಟ್ ಲೆಕ್ಕದಲ್ಲಿ ಐವತ್ತು, ನೂರು ರೂಪಾಯಿಗಳನ್ನು ಪಡೆಯುತಿದ್ದರು.ಇನ್ನು ಕೆಲವರು ಒಂದು ಸೇಟಗೆ ಇಪ್ಪತ್ತು ರೂಪಾಯಿ ಪಡೆಯುತಿದ್ದರು.ಹಾಗಾಗಿ ನಾನು ಸ್ವಲ್ಪದೂರ ನಡೆಯುತ್ತಾಹೋಗಿ ಅಲ್ಲಿಂದ ಇಪ್ಪತ್ತು ರೂಪಾಯಿಕೊಟ್ಟು ಮಂಡ್ಯದ ಬಸ್ ನಿಲ್ದಾಣದ ಬಳಿ ಇಳಿದು ಅಲ್ಲಿ ಒಂದು ಹೊಟೆಲ್ಗೆ ಹೋಗಿ ಊಟಮಾಡಿದೆ.ನಂತರ ಪಿಇಎಸ್ ಕಾಲೇಜ್ ಎಲ್ಲಿರಬಹುದೆಂದು ಕಟ್ಟಡ ನಾಮಫಲಕಗಳನ್ನು ನೋಡ್ತಾ ಮುಂದೆ ಸಾಗಿದೆ ಅಬ್ಬಾ ಅಲ್ಲೇ ಇತ್ತು ನೋಡಿ ಖುಷಿಆಯ್ತು ಕಾರಣ ಬಸ್ ನಿಲ್ದಾಣ,ರೈಲುನಿಲ್ದಾಣಕ್ಕೆ ಹತ್ತಿರದಲ್ಲಿತ್ತು.ಹಾಗೆ ಕಾಲೇಜ್ ಪ್ರವೇಶಿಸಿ ನನಗೆ ಬಂದ ವಾಟ್ಸಪ್ ಮೆಸೆಜ್ ತೋರಿಸಿದೆ ಅಲ್ಲಿಯ ಸ್ವಯಂ ಸೇವಕರು ಆತ್ಮೀಯತೆಯಿಂದ ಬರಮಾಡಿಕೊಂಡು ಕೊಠಡಿ ಸಂಖ್ಯೆ ಹದಿನೇಳಕ್ಕೆ ಹೋಗಲು ಹೇಳಿ ಒಂದು ಕಿಟ್ ಕೊಟ್ಟರು. ನಾನು ಆ ಕಿಟ್ ಪಡೆದು ಹದಿನೇಳನೆ ನಂಬರ್ ಕೊಠಡಿಗೆ ಹೋದೆ ಆದರೆ ನನ್ನಂತೆ ಮೊದಲು ಬಂದವರು ತಮ್ಮ ಲಗೇಜುಗಳನ್ನು ಒಳಗಿಟ್ಟು ಬೀಗ ಹಾಕಿಕೊಂಡು ಹೋಗಿದ್ದರು.ನಾನು ವಾಪಸ್ ಸ್ವಯಂ ಸೇವಕರ ಬಳಿಬಂದು ಸರ್ ನಾನು ಕಾರ್ಯಕ್ರಮಕ್ಕೆ ಹೋಗಬೇಕು ಬರುವುದು ರಾತ್ರಿಯಾಗ್ತದೆ ಹಾಗಾಗಿ ಈ ಕಿಟ್ ನ್ನು ಇಲ್ಲೇ ಇಟ್ಟುಕೊಳ್ಳಿ ನಾನು ರಾತ್ರಿ ಬರ್ತಿ ಎಂದು ಹೇಳಿ ಕಿಟ್ ಅವರಲ್ಲೇ ಕೊಟ್ಟು ಮತ್ತೆ ನಾನು ಸಮ್ಮೇಳನದತ್ತ ಅದೇ ಇಪ್ಪತ್ತು ರೂಪಾಯಿ ಅಟೋಹತ್ತಿ ಬಂದೆ.ಕವಿಗೋಷ್ಠಿಗಳು ಪ್ರಾರಂಭವಾಗಿದ್ದವು.ಆದರೆ ನನಗೆ ಗುರುತಿನ ಚೀಟಿಯ ಅಗತ್ಯವಿದ್ದಕಾರಣ ನಾಲ್ಕು ಗಂಟೆ ನಂತರ ಬರಲು ಹೇಳಿದ ಕೌಂಟರ್ ಹತ್ತಿರ ಹೋದೆ ಆದರೆ ಅಲ್ಲಿಯ ಅವ್ಯವಸ್ಥೆ ಬಹಳ ಇತ್ತು ಜನಜಂಗುಳಿ ಕಿಟ್ಗಳಿಲ್ಲಾ ಖಾಲಿಯಾಗಿವೆ ಗುರುತಿನಚೀಟಿಇಲ್ಲಾ ಹಗಲು ಹೊತ್ತು ಅಲ್ಲಿಹೋಗಿ ಊಟಮಾಡಿಬಂದ್ವಿ.ಕಾರ್ಯಕ್ರಮಮುಗಿಸಿ ಹೋಗುವಷ್ಟರಲ್ಲಿ ರಾತ್ರಿಯಾಗಿರುತ್ತದೆ ಅಲ್ಲಿ ಹೊಟೆಲ್ ತಗೆದಿರಲ್ಲಾ ಏನ್ಮಾಡೋದು ವಿಧಿಯಿಲ್ಲದೆ ಕವಿಗೋಷ್ಠಿಗಳನ್ನು ಮೈಕ್ ಗಳಿಂದ ಅರ್ಧಮರ್ದ ಕೇಳಿಸಿಕೊಳ್ತಾ ಸತರಿಸಾಲಿನಲ್ಲಿ ನಿಂತಿದ್ದೆ ಹತ್ತ ನಿಮಿಷ ಅರ್ಧಗಂಟೆಯಲ್ಲಿ ಕಿಟ್ ಬರ್ತವದು ಹೇಳ್ತಾ ಕಾಲಕಳೆದರು ಕೊನೆಗೆ ಸಾಹಿತ್ಯ ಸಮ್ಮೇಳನದ ಲಾಂಛನಗಳಿರದೆ ಮನೆಯಲ್ಲಿರುವ ಹತ್ತಾರು ಬ್ಯಾಗಗತಿರುವ ಬ್ಯಾಗಬಂದವು ಅದರಲ್ಲಿ ಒಂದಿದ್ದರೆ ಇನ್ನೊಂದಿಲ್ಲಾ.ಆದರೆ ಪ್ರತಿನಿಧಿಗಳು ಬ್ಯಾಗ ಯಾವುದನ್ನೋ ಪಡೆಯಲು ಹಾತೊರೆಯಲ್ಲಾ ಅಂಥಾ ಬ್ಯಾಗಗಳು ಹತ್ತಾರು ಮನೆಯಲ್ಲಿರುತ್ತವೆ.ಆದರೆ ಸಮ್ಮೇಳನದ ಹೆಗ್ಗುರುತಿಗೆ ಲಾಂಛನ ವಿರುವ ಕಿಟ್ಗಾಗಿ ಹಾತೊರೆಯುತ್ತಾರೆ.ಆದರೆ ಪ್ರಥಮ ತುತ್ತಿಗೆ ದಂತ ಭಗ್ನಂ ಎನ್ನುಹಾಗೆ ಪ್ರಥಮಬಾರಿಗೆ ನೋಂದಾಯಿತ ಪ್ರತಿನಿಧಿಯಾಗಿ ಹೋಗಿದ್ದನನಗೆ ಸಮ್ಮೇಳನದ ಲಾಂಛನವಿಲ್ಲದ ಬ್ಯಾಗ್ ಕಿಟ್ ಕೊಟ್ಟಿದ್ದು ಬಹಳ ಮನಸ್ಸಿಗೆ ಬೇಸರವೆನಿಸಿದ್ದಂತೂ ಸತ್ಯ. ಏನ್ಮೊದು ಅಸಹಾಯಕನಾಗಿ ಮತ್ತೆ ಸಮ್ಮೇಳನ ಸಭಾಂಗಣದೊಳಗೆ ಬಂದೆ ಕವಿಗೊಷ್ಠಿಗಳು ನಡೆದಿದ್ದವು.ಅದರಲ್ಲಿ ಮಹಿಳಾ ಕವಿಗೋಷ್ಠಿಯಲ್ಲಿ ಕೊಪ್ಪಳದ ಕವಿಯಿತ್ರಿ ಯವರದು ನನಗೆ ಸರಿಯನಿಸಿತು.
ನನಗೆ ಗುರುತಿನಚೀಟಿ ಬಂದಿತ್ತು ಮತ್ತೆ ನಾನು ಊಟದ ಹಾಲ್ ಅದೆ ನೋಂದಾಯಿತ ಪ್ರತಿನಿಧಿಗಳ ಸಾಲಿನತ್ತಹೋದೆ.ಹಾಗೂ ಹೀಗೂ ಒಳಹೋಗಿ ಊಟಕ್ಕಾಗಿ ಸರತಿ ಸಾಲಿನಲ್ಲಿ ನಿಂತ್ವಿ ನನ್ನ ಮುಂದೆ ಒಬ್ಬರು ಯೂನಿಫಾರ್ಮಮೇಲಿದ್ದ ಪೊಲೀಸ್ ಇದ್ದರು ಅವರಿಗೆ ಒಂದುಪುರಿ,ಒಂದು ಮೈಸೂರುಪಾಕ್ ಪಲಾವ್ ನೀಡಿದರು ಅವರು ಇನ್ನೊಂದು ಪುರಿ ಹಾಕಿ ಎಂದು ಕೇಳಿದರು ಆದರೆ ಆ ಅಡುಗೆ ನೀಡುವ ಸ್ವಯಂ ಸೇವಕಮಾತ್ರ ಇಲ್ಲಾ ಸರ್ ಎಲ್ಲರಿಗೂ ಒಂದೊಂದೇ..ಆ ಕಡೆ ಪಕ್ಕದಲ್ಲಿ ಅನ್ನಸಾಂಬರ್ ಇದೆ ಹೋಗಿಎಂದು ಹೇಳಿದ ನನಗೆ ಬಹಳ ನೋವಾಯ್ತು ಅವರಿಗೆ ಹಾಕಪ್ಪ ಎಂದರೂ ಆತ ಗಮನಿಸಲಿಲ್ಲಾ ನನಗೂ ಒಂದುಪುರಿ ಒಂದು ಮೈಸೂರುಪಾಕ್ ಸ್ವಲ್ಪ ಪಲಾವ್ ಹಾಕಿದ ಅಷ್ಟನ್ನೇತಿಂದು ಅನ್ನಸಾಂಬರ್ ಸಹ ಊಟಮಾಡದೇ ಹೊರಬಂದೆ.ಅಲ್ಲಿಗೆ ಸಮಯ ರಾತ್ರಿ ಎಂಟೂವರೆ ಒಂಭತ್ತು ಗಂಟೆ ನಾನು ಸಮ್ಮೇಳನದ ಸ್ಥಳದಿಂದ ಹೊರ ಹೋಗ್ತಿರಬೇಕಾದರೆ ಮಂಡ್ಯದ ಸ್ಥಳೀಯರು ತಂಡೋತಂಡವಾಗಿ ಮಹಿಳೆಯರು ಮಕ್ಕಳೊಂದಿಗೆ ಸಮ್ಮೇಳನದತ್ತ ಬರ್ತಾನೇ ಇದ್ದಾರೆ ರಸ್ತೆಗಳೆಲ್ಲಾ ಜಾಮ್ ಆಗಿವೆ ಐದಾರು ಕಿಲೋಮೀಟರ್ ವರೆಗೆ ರ್ಸೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ ಪೊಲೀಸರ್ ಪರಿಸ್ಥಿತಿ ನೋಡೋಕಾಗ್ತಿಲ್ಲಾ.

ಮಂಡ್ಯದ ಜನರಿಗೆ ಖುಷಿಯೋ ಖುಷಿ ನಾವು ಬೇರೆಜಿಲ್ಲೆಗಳಲ್ಲಿ ಹೋದಾಗ ನಾವು ಹೇಳ್ತಿದ್ವಿ ನಮ್ ಜಿಲ್ಲೆಯಲ್ಲಿ ಮಾಡ್ತಿಲ್ವಲ್ಲಾಂತ ಬೈತಿದ್ವಿ ನಮ್ಮ ಚಲುವರಾಯ ಸ್ವಾಮಿ ಒಳ್ಳೆಕೆಲಸ ಮಾಡಾವ್ರೆ ಅಂತ ಹೆಮ್ಮೆಪಡ್ತಿದ್ರು.ಇಬ್ಬರು ಮಹಿಳೆಯರು ಭದ್ರಾವತಿ ದಾವಣಗೆರೆಗೆ ನೆಂಟಸ್ತಕಿ ಮಾಡಿದ್ದಾತೆ ಮಂಡ್ಯದವರು ಅವರೂ ಕೂಡಾ ಚಲುವರಾ ಸ್ವಾಮಿಗೆ ಬಹುಪರಾಗ್ ಹೇಳ್ತಿದ್ರು.ನಾನು ಹಾಗೇ ಸ್ವಲ್ಪದೂರ ನಡೆಯುತ್ತ ಮುಂದೆ ಬಂದೆ ಮತ್ತೆ ಅದೆ ಇಪ್ಪತ್ತು ರೂಪಾಯಿಅಟೋ ಹುಡುಕಿಕೊಂಡು ಬಂದೆ ಒಂದು ಅಟೋನಿಂತಿತ್ತು ಹತ್ತಿ ಕುಳಿತೆ ನನ್ನಂತೆ ಇನ್ನಾ ನಾಲ್ಕಾರು ಜನ ಪ್ರಯಾಣಿಕರು ಕುಳಿತಿದ್ರು.ಒಬ್ಬ ವಯಸ್ಸಾದ ಅಜ್ಜಿ ಬಂದು ಅಟೋದವನಿಕೇಳ್ತು ಮಗಾ ನಾನು ಮಗ,ಸೊಸೆ ಮೊಮ್ಮಕ್ಕಳು ಬಂದ್ವಿ ನಾನು ತಪ್ಪಿಸಿಕೊಂಡಿದ್ದೀನಿ ನನ್ನ ಹತ್ರ ದುಡ್ಡಿಲ್ಲಾಗಾ ಸ್ವರ್ಣಸಂದ್ರಕ್ಕೆ ಬಿಡ್ತಿಯಾ ಎಂದು ಕೇಳಿದರು ಆ ಚಾಲಕ ಬಾರಮ್ಮಾ ಹತ್ತಿ ಕೂಡು ಎಂದು ಹೇಳಿದ ಆ ಅಜ್ಜಿ ಸಂತಸಪಟ್ಟು ಸ್ವರ್ಣಸಂದ್ರಕ್ಕೆ ಇಳಿದು ಹೋಯ್ತು.ನಾವು ಬಸ್ ನಿಲ್ದಾಣದ ಹತ್ತಿರ ಇಳಿದೆವು ನಾನು ನೂರು ರೂಪಾಯಿ ನೋಟುಕೊಟ್ಟೆ ತೊಂಭತ್ತು ರೂಪಾಯಿ ವಾಪಸ್ ಕೊಟ್ಟ ಏನೋ ಮಿಸ್ ಮಾಡಿಕೊಂಡು ಕೊಟ್ಟಿರಬಹುದೆಂದು ವಾಪಸ್ ಕೊಡಲುಹೋದೆ ಆದರೆ ಆತ ಇಲ್ಲಾ ಸರ್ ಹತ್ತುರೂಪಾಯತಗೊಂಡು ನಿಮಗೆ ವಾಸ್ ಕೊಟ್ಟಿದ್ದಿನಿ ಅಂದ ಇಪ್ಪತ್ತು ರೂಪಾಯಿತಗೋತಾರೆ ಎಲ್ಲರೂ ಅಂದೆ ಅದನ್ನು ಕೇಳಿಸಿಕೊಂಡ ಇನ್ನೊಬ್ಬಪ್ಯಾಸಿಂಜರ್ ಆ ಅಜ್ಜಿದೂ ತಗೋಪಾ ಎಂದು ದುಡ್ಡುಕೊಟ್ಟ.ನಾನು ಎಲ್ಲರೂ ನೂರು ಐವತ್ತು ಇತ್ತು ತಗೋತಾರೆ ನೀನೇನು ಹತ್ತು ರೂಪಾಯಿತಗೋತಿಯಲ್ಲಾ ಎಂದೆ.ಬೇರೆಯವರಹಾಗೆ ಬೇಡ ಸರ್ ನನಗೆ ಹತ್ತು ರೂಪಾಯಿ ಸಾಕು ಎಂದು ಹೊರಟ ನಾನು ಮೋಬೈಲ್ ಜೇಬಿಂದ ತಗೆದು ಅವನ ಮತ್ತು ಅಟೋ ಪೊಟೊ ತೆಗೆಯಬೇಕೆನ್ನುಷ್ಟರಲ್ಲಿ ನಿಲ್ಲಿಸದೇ ಹೊರಟೇ ಬಿಟ್ಟ.ಆತನಿಗೆ ಹಣ ಮಾಡುವ ಉದ್ದೇಶ ವಿರಲಿಲ್ಲಾ ಜನರಸೇವೆ ಮಾಡುವಸೇವಾಭಾವಣೆಯಿಂದ ಬಿಡುವಿಲ್ಲದೇ ಜನರ ಕರೆತರಲು ಸಮಯ ಹಾಳು ಗೆಡದೇ ಹೊರಟು ಹೋದ.ಮಂಡ್ಯದಲ್ಲಿ ಯಾರ್ಯಾರೋ ಸ್ವಾರ್ಥಿಗಳಿಗೆ ಏನೇನೋ ಸ್ವಾರ್ಥಿಗಳಿಗೆ ಬಿರುದುಕೊಡ್ತಾರೆ.

ಇಂಥಾ ನಿಸ್ವಾರ್ಥ ಸೇವಕನಿಗೆ ನಿಜವಾದ ಮಂಡ್ಯದಗಂಡು ಬಿರುದುಕೊಟ್ಟು ಸನ್ಮಾನಿಸಬೇಕು.
ಕಾರ್ಯಕ್ರಮ ಆಯೋಜಕರು ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ ಆದರೆ ಅಲ್ಲಿ ಕೆಲವರು ಉದ್ದೇಶ ಪೂರಕವಾಗಿಯೇ ಕಾರ್ಯನಿರ್ವಹಿಸುವವರು ಅಸ್ತವ್ಯಸ್ತ ಮಾಡುತ್ತಿರುವುದು ಯಾವ ಉದ್ದೇಶಕ್ಕಾಗಿ ಎಂದುಮಾತ್ರ ಗೊತ್ತಾಗಲಿಲ್ಲಾ.ಇದು ಮೊದಲ ದಿನದ ಪರಿಸ್ಥಿತಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments