Thursday, August 21, 2025
Homeಸಂಸ್ಕೃತಿಶ್ರೀ ಆಂಜನೇಯ ಸ್ವಾಮಿಪ್ರತಿಷ್ಠಾಪನೆಗೊಂಡು 100 ವರ್ಷ ತುಂಬುತ್ತದೆ 101ನೇ ಪ್ರತಿಷ್ಠಾಪನೆ ವರ್ಷ ಅದ್ದೂರಿ ಆಚರಣೆಗೆ ಸದ್ಭಕ್ತರ...

ಶ್ರೀ ಆಂಜನೇಯ ಸ್ವಾಮಿಪ್ರತಿಷ್ಠಾಪನೆಗೊಂಡು 100 ವರ್ಷ ತುಂಬುತ್ತದೆ 101ನೇ ಪ್ರತಿಷ್ಠಾಪನೆ ವರ್ಷ ಅದ್ದೂರಿ ಆಚರಣೆಗೆ ಸದ್ಭಕ್ತರ ಸಿದ್ಧತೆ

29-02-1925 ರಂದು ಪ್ರತಿಷ್ಠಾಪನೆಗೊಂಡ ಶ್ರೀ ಆಂಜನೇಯ ಸ್ವಾಮಿಗೆ 100 ವರ್ಷ ತುಂಬುತ್ತದೆ 101ನೇ ಪ್ರತಿಷ್ಠಾಪನೆ ವರ್ಷ ಇದನ್ನು ಸಂಘದ ಕಾರ್ಯಕಾರೀ ಸಮಿತಿ ಸದಸ್ಯರು ಸರ್ವ ಸದಸ್ಯರು ಮತ್ತು ಭಕ್ತ ವೃಂದ ಅದ್ದೂರಿಯಾಗಿ ಆಚರಿಸುವ ನಿಟ್ಟಿನನಲ್ಲಿ ಕರ್ಯೋನ್ನ್ಮಖ ರಾಗೋಣ ಇಂದಿನ ಪೂಜೆ ನಡೆಯಿತು ಈ(ಪ್ರತಿ)ದಿನ ಶ್ರೀ ಗುರು ದತ್ತಾoಜನೇಯರಿಗಲ್ಲದೇ ಉತ್ಸವ ಮೂರ್ತಿಗಳು, ಪರಿವಾರ ದೇವತೆಗಳಾದ ಶ್ರೀ ನವರತ್ನ ಗರ್ಭ ಗಣಪತಿ,ನವ ಧಾನ್ಯಗಳು ನವರತ್ನ,ನವ ಪತ್ರೆ- ಪುಷ್ಪ- ನವಗ್ರಹಗಳು,ಶ್ರೀ ಚಂದ್ರಮೌಳೇಶ್ವರ, ಶ್ರೀ ನಂದಿ, ಶ್ರೀ ಗುರು ಶಂಕರ ಹಾಗೂ ಗುರುವೃಂದ , ಶ್ರೀ ಶಾರದಾ ಮಾತೆ, ಶ್ರೀ ಬನಶಂಕರಿ ದೇವಿ, ಶ್ರೀ ತಿಮಲಾಪುರದ ತಿಮ್ಮಪ್ಪ,ಶ್ರೀ ಗಜಲಕ್ಷ್ಮಿ (ವಿಜಯ ನಗರ ಕಾಲದ ), ಶ್ರೀ ಗಾಯತ್ರೀ ದೇವಿ, ಸಾಲಿಗ್ರಾಮಗಳು, ಶ್ರೀ / ಕೃಷ್ಣ ತುಳಸಿ,ಶ್ರೀ ಔದುಂಬರ ವೃಕ್ಷ, ಶ್ರೀ ಬಿಲ್ವ ವೃಕ್ಷ,ಶ್ರೀ ಅಶ್ವಥ್ ವೃಕ್ಷ, ಶ್ರೀ ನಾಗದೇವತೆ, ಶ್ರೀ ಭೂಪ ಸಮುದ್ರೇಶ್ವರ ಹಾಗೂ ಶ್ರೀ ನಂದಿ (ವಿಜಯ ನಗರದ ಕಾಲದ),ಶ್ರೀ ಸತ್ಯನಾರಾಯಣ, ಶ್ರೀಗುರು ರಾಘವೇಂದ್ರ,ಶ್ರೀ ಕೊಲ್ಲೂರು ಮುಕಾಂಬಿಕಾ,ಶ್ರೀ ಶನೇಶ್ವರಾ, ಶ್ರೀ ರಾಮ, ಶ್ರೀ ಕರಣಂ ತಿಮ್ಮಣಭಟ್ ವಿರಚಿತ ತೇರಾಹ್ ಶ್ರೀ ರಾಮಕೋಟಿ ಲಿಖಿತ ಜಪ ಇವುಗಳಿಗೆ ಪೂಜೆ ಸಲ್ಲಿಸಲಾಗುವುದು.1920ರಲ್ಲಿ ಪ್ರಭಾರೆ ಶಾನುಭೋಗರಾಗಿ ಬಂದ ಶ್ರೀ ಕರಣಂ ಲಕ್ಶ್ಮೀಪತಿ ಭಟ್ ಇವರಿಗೆ ಕೆಂಚಮಲ್ಲನಹಳ್ಳಿಯ ಮೂಲ ಊರು ಭೂಪಸಮುದ್ರದಲ್ಲಿ ವಿಜಯ ನಗರ ಕಾಲದ ಪಾಳು ದೇಗುಲ ನೋಡುತ್ತಾರೆ ಮತ್ತು ತಮ್ಮ ಕೆಲಸ ಖಾಯಂ ಆದರೆ ಕೆಂಚಮಲ್ಲನಹಳ್ಳಿಯಲ್ಲಿ ದೇಗುಲ ನಿರ್ಮಾಣ ಮಾಡುವುದಾಗಿ ಸಂಕಲ್ಪ ಮಾಡುತ್ತಾರೆ ಅವರ ಕೋರಿಕೆ ಈಡೇರಿಸಿದುದರಿoದ ಶ್ರೀ ಆಂಜನೇಯನನ್ನು 1925 ರಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಮತ್ತು ಇವರ ಸಂಬಂಧಿ ಶ್ರೀ ಶಂಕರಭಟ್ ನಿವೃತ್ತ ಶಿಕ್ಷಕರು ಬಂದು ಈ ಜಿಲ್ಲೆಯ ಏಕೈಕ ಶ್ರೀ ಗುರು ದತ್ತಾತ್ರೇಯ ಹಾಗೂ ಶಾಲೆ ಸ್ಥಾಪಿಸುತ್ತಾರೆ. ಈದೇವರುಗಳಿಗೆ ಕರಣಂ ವಂಶದ 3ನೇ ತಲೆಮಾರಿನ ಕೆ ಶಾ ವಿಜಯ ಕುಮಾರ್ ಕಲಾ, ನೀತಿ, ಸ್ಕೌಟ್ ನಿವೃತ್ತಿ ಶಿಕ್ಷಕರು, ಶಿಕ್ಷಕರ / ಕಲಾ ಶಿಕ್ಷಕರ ಕ್ಷೇತ್ರದ ರಾಜ್ಯ ಮಟ್ಟದ ಪದಾಧಿಕಾರಿಗಳಾಗಿದ್ದರು. ತಂದೆ ಶ್ರೀ ಕರಣಂ ತಿಮ್ಮಣ ಭಟ್ ಇವರು ಶ್ರೀ ಶರಣ ಬಸವೇಶ್ವರ ಪ್ರೌಢಶಾಲೆ ಕಾನಾಮಡುಗು ಇಲ್ಲಿನ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ದೇವಸ್ಥಾನದ ಜವಾಬ್ದಾರಿ ಅಜೀವಪರ್ಯoತ ಸೇವೆ ಸಲ್ಲಿಸಿದರು.ಇವರ ತರುವಾಯ ದೇವಸ್ಥಾನದ ಜವಾಬ್ದಾರಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರು ಉತ್ತರ ಭಾರತ ಬಹುತೇಕ ತೀರ್ಥ ಕ್ಷೇತ್ರ ದರ್ಶಿಸಿರುತ್ತಾರೆ.ಎರಡು ಶ್ರೀ ಗಾಯತ್ರೀ ಯಜ್ಞದಲ್ಲಿ ಭಾಗವಹಿಸಿರುತ್ತರೆ. ₹ 111 ನೀಡುವ ಭಕ್ತರ ಹೆಸರಿನಲ್ಲಿ ಸಂಕಲ್ಪಮಾಡಿ ಪೂಜೆ ಸಲ್ಲಿಸಲಾಗುವುದು. ಕೇವಲ ₹ 250 ನೀಡಿದಲ್ಲಿ ಎರಡೂ ದೇವರಿಗೆ ಪಂಚಾಮೃತ ಅಭಿಷೇಕ ಮಾಡಲಾಗುವುದು. ದಿ ll ಹೆಸರಲ್ಲಿ ₹ 6000 ಠೇವಣಿ ಇಟ್ಟಲ್ಲಿ ಜನ್ಮ / ಪುಣ್ಯ ತಿಥಿಯಂದು, 3000 ಇಟ್ಟಲ್ಲಿ ಪ್ರತಿವರ್ಷ ಒಂದುದಿನ 1500 ಇಟ್ಟಲ್ಲಿ ಒಂದು ಇಷ್ಟ ದೇವರಿಗೆ ಪ್ರತಿ ವರ್ಷ ಒಂದುದಿನ ಪೂಜೆ ಸಲ್ಲಿಸಲಾಗುವುದು. ನೂರಾರು ಜನರ ಅಶೋತ್ತರಗಳನ್ನು ಶ್ರೀಗುರು ದತ್ತಾಆಂಜನೇಯರು ಈಡೇರಿಸಿದ್ದಾರೆ. ತಮ್ಮ ಕೈಲಾದ ಕಾಣಿಕೆ ಸಲ್ಲಿಸಿದ್ದಾರೆ. ವಿಳಾಸ ನೀಡಿದಲ್ಲಿ ಸೂಕ್ತ ಪ್ರಸಾದ ಕಳಿಸಲಾಗುವುದು ಆಸಕ್ತಿ ಉಳ್ಳವರು sbi ಪೇ 9980170619 ಮಾಡುವ ಮುನ್ನ ಫೋನ್ ಮಾಡಿ ಖಚಿತ ಪಡಿಸಿಕೊಳ್ಳಿ (ಲೇಖಣ:ವಿಜಯಕುಮಾರ್ ಅರ್ಚಕರು)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments