Thursday, August 21, 2025
Homeಜಾಗೃತಿಪ್ರದೇಶ‌ಕುರುಬರ ಸಂಘದಲ್ಲಿ 2018 ರಿಂದ 2024 ರವರೆಗಿನ ಜಮಾ - ಖರ್ಚು ವೆಚ್ಚದಲ್ಲಿ ಲಕ್ಷಾಂತರ ರೂಪಾಯಿಗಳ...

ಪ್ರದೇಶ‌ಕುರುಬರ ಸಂಘದಲ್ಲಿ 2018 ರಿಂದ 2024 ರವರೆಗಿನ ಜಮಾ – ಖರ್ಚು ವೆಚ್ಚದಲ್ಲಿ ಲಕ್ಷಾಂತರ ರೂಪಾಯಿಗಳ ಲೋಪದೋಷಗಳು:ರಾಜು ಮೌರ್ಯ

ಬೆಂಗಳೂರು:ಈಗಾಗಲೇ ಅವಧಿ ಮುಗಿದಿರುವುದರಿಂದ ಚುನಾವಣಾಧಿಕಾರಿ ನೇಮಕ, ಚುನಾವಣಾ ದಿನಾಂಕ ಪ್ರಕಟಿಸುವಂತೆ ಸಂಘಗಳ ಜಿಲ್ಲಾ ನೋಂದಾಣಾಧಿಕಾರಿಗಳು ಬೆಂಗಳೂರಿನ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ನೋಟೀಸ್ ನೀಡಿದ್ದಾರೆ. ಇಲ್ಲವಾದ್ರೆ ” ಆಡಳಿತಾಧಿಕಾರಿಯನ್ನು” ನೇಮಕ ಮಾಡುವ ಸಾಧ್ಯತೆಗಳಿವೆ ಚುನಾವಣೆ ನಡೆಸುವಂತೆ ಹಾಗೂ ಅಲ್ಲಿಯವರೆವಿಗೂ ಆಡಳಿತಾಧಿಕಾರಿಯನ್ನು‌ ನೇಮಿಸುವಂತೆ ಸಂಘದ ನಿರ್ದೇಶಕರುಗಳಾಗಿದ್ದಂತಹ ಟಿ. ಬಿ. ಬಳಗಾವಿರವರು ಮತ್ತು ಸಂಗಡಿಗರು ಕೋರ್ಟ್ ನಲ್ಲಿ ಅರ್ಜಿ ಹಾಕಿರುತ್ತಾರೆ ಅದರ ವಿಚಾರಣೆಯೂ ನಡೆಯುತ್ತಿದೆ ಕರ್ನಾಟಕ ಪ್ರದೇಶ‌ಕುರುಬರ ಸಂಘದಲ್ಲಿ 2018 ರಿಂದ 2024 ರವರೆಗಿನ ಜಮಾ – ಖರ್ಚು ವೆಚ್ಚದಲ್ಲಿ ಲಕ್ಷಾಂತರ ರೂಪಾಯಿಗಳ ಲೋಪದೋಷಗಳು ಉದಾ : *ಚುನಾವಣಾಧಿಕಾರಿ ಕುಮಾರ್ ಗೆ 66 ವರೆ ಲಕ್ಷ ವೇತನ, ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವದ ಹೆಸರಿನಲ್ಲಿ ಬಸ್ ಗಳಿಗೆ ನೀಡಿದ್ದ ಮುಂಗಡ ವಾಪಸ್ ಬಂದಿರುವ 13 ಲಕ್ಷಗಳ ಹಣ ಜಮಾ ಗೆ ಸೇರಿಸುವ ಬದಲು *ವೆಚ್ಚದಲ್ಲಿ ಸೇರಿಸಿರುವುದು* ಇಂತಹ ಹಲವಾರು ಲೋಪದೋಷಗಳ ಬಗ್ಗೆ ಸಂಘಗಳ ನೋಂದಣಾಧಿಕಾರಿಗಳಿಗೆ, ಉಪ ನಿಬಂಧಕರಿಗೆ, ಸಹಕಾರ ಇಲಾಖೆಯ ಕಾರ್ಯದರ್ಶಿಗೆ ತನಿಖೆ ನಡೆಸುವಂತೆ ದೂರುಗಳನ್ನು‌ ನೀಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಸಮಾಜದವರ ಅಭಿಪ್ರಾಯಗಳನ್ನು ಪಡೆಯದೇ ಇಂತಹ ಲೋಪದೋಷಗಳ ಬಗ್ಗೆ ತನಿಖೆ ನಡೆಸದೇ “ಏಕಾಏಕಿ ಚುನಾಯಿತ ಸಮಿತಿಯೂ ಇಲ್ಲದೇ ಆಡಳಿತಾಧಿಕಾರಿಯೂ ಇಲ್ಲದೇ ನಗರಾಭಿವೃದ್ಧಿ ಸಚಿವರು ಹೇಳಿದ್ದಾರೆ ಎಂಬ ಮಾತಿನಂತೆ ಗಾಂಧಿನಗರದ 17 ಸಾವಿರ ಚದುರಡಿಯ ಕಟ್ಟಡ ಒಡೆದು ಕಟ್ಟಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಮಾಜದ ನಾಲ್ಕು ಕನಕ ಗುರುಪೀಠದ ಪರಮಪೂಜ್ಯರುಗಳಿದ್ದಾರೆ, ಸಮಾಜದ ಹಿರಿಯ ರಾಜಕಾರಣಿಗಳು ಇದ್ದಾರೆ, ಉತ್ತರ ಕರ್ನಾಟಕದ ಕುರುಬರು ಇದ್ದಾರೆ ಯಾರ ಅಭಿಪ್ರಾಯಗಳನ್ನು ಕೇಳದೇ ಸಮಸ್ತ ಕುರುಬರಿಂದ ದೇಣಿಗೆಯನ್ನು ಸಂಗ್ರಹಿಸದೇ ಏಕಾಏಕಿ ನಾವು ಹಣ ಹಾಕ್ತೇವೆ ಒಡೆದು ಕಟ್ತೇವೆ ಎಂದು ಹೊರಟಿರುವುದು ಸರಿಯೇ ? 106 ವರ್ಷಗಳ ಹಿಂದೆ ಸಮಾಜದ ಹಿರಿಯರು ಕುರುಬರ ಆಸ್ತಿಯೆಂದು ಸ್ಥಾಪಿಸಿರುವುದು ಎಲ್ಲರಿಗೂ ಸೇರಬೇಕಾಗಿರುವುದು ಪ್ರತಿ ಪೈಸೆ ಕುರುಬ ಆಸ್ತಿಯಾಗಬೇಕು, ಕುರುಬರ ದೇಣಿಗೆಯಿಂದಾಗಬೇಕು ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ, ” ತಡೆಯಾಜ್ಞೆ ತಂದರೆ” ಅಥವಾ ನ್ಯಾಯಾಲಯದ ಮೊರೆ ಹೋದರೆ ಅತಂತ್ರವಾಗಲೂಬಹುದು ಈ ವಿಷಯಗಳ ಬಗ್ಗೆ ಕುರುಬರ ಬಾಂಧವ್ಯ ಪತ್ರಿಕೆಯು ಸಮಾಜದ ಮುಂದೆ ಬೆಳಕು ಚೆಲ್ಲುವಂತಹ ಕೆಲಸ ಮಾಡುತ್ತಲೇ ಇದೆ. ಮುಂದೆಯೂ ಮಾಡುತ್ತದೆ. ರಾಜು ಮೌರ್ಯ ದಾವಣಗೆರೆ, ಸಂಪಾದಕ, ಕುರುಬರ ಬಾಂಧವ್ಯ, 9535630196

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments