ವಿಜಯಪುರ:ಮತ್ತೆ ಉತ್ತರ ಕರ್ನಾಟಕ ರಾಜ್ಯದ ಚರ್ಚೆ ಮುನ್ನೆಲೆಗೆ ಬರುತ್ತಿರುವದು ಕೆಲವರ ಪ್ರಕಾರ ಶೋಚನೀಯವಾದರೆ ಇನ್ನೂ ಕೆಲವರಿಗೆ ಅವಿಸ್ಮರಣೀಯ, ಇನ್ನೊಂದು ಕಡೆ ಅಭಿವೃದ್ಧಿ ಪರಿಸ್ತಿತಿಗಳ ಅವಲೋಕನ ನಡೀತಿದ್ರೆ, ಮತ್ತೊಂದು ಕಡೆ 30 ರಿಂದ 40 ವರ್ಷಗಳಿಂದ ನಡೆದ ಅದೇ ಕೃಷ್ಣಾ ಮೇಲ್ದಂಡೆ ಬಡ್ಜೆಟ್ ಬೇಡಿಕೆ ಮೇಲಿನ ಚರ್ಚೆ, ಸ್ವಲ್ಪ ನಾಯಕರುಗಳು ಉತ್ತರದ ನೋವನ್ನು ಅರಿತು ಮಾತಾಡುವ ಪ್ರಯತ್ನ ಮಾಡಿದರೆ, ಇನ್ನೂ ಕೆಲವರು ಸಂದಿಗ್ಧ ಸ್ಥಿತಿಯಲ್ಲಿ ಪರಿತಪಿಸುತ್ತಿರುವದು ವಿಷಾದನೀಯ,
ಇಷ್ಟೆಲ್ಲದರ ಮದ್ದೆ ಅಮಾಯಕ ಉತ್ತರ ಕರ್ನಾಟಕದ ಯುವ ಪೀಳಿಗೆ ಹಾಗೂ ಎಷ್ಟೋ ನೊಂದ ಮನಸುಗಳು ಈ ಎಲ್ಲ ವಿದ್ಯಮಾನಗಳನ್ನು ನೋಡಿ ಜೈ ಎನ್ನಬೇಕೋ ಇಲ್ಲ ಹೆಬ್ಬೆರಳು ಕೈ ತೋರಿಸಬೇಕೋ ಎನ್ನುವ ಯೋಚನೆಯ ಗೊಂದಲದಲ್ಲಿ ಮುಳುಗಿದೆ,
ಒಟ್ಟಿನಲ್ಲಿ ಉತ್ತರ ಕರ್ನಾಟಕದ ವಿಷಯ ಬಂದಾಗ ಉತ್ತುಂಗದ ರಾಜಕೀಯ ನಾಯಕರನ್ನು ಒಳಗೊಂಡ ದಕ್ಷಿಣದ ಕೆಲ ಜನರು ಹಾಗೂ ಮಾಧ್ಯಮ ಮಿತ್ರರು ತೋರುತ್ತಿರುವ ಸ್ವಲ್ಪ ಅಸಡ್ಯೇ ಮನೋಭಾವ ಇನ್ನೂ ಕೆಲವರಿಗೆ ಉದಾರದಿಂದ ಉಗ್ರ ಕೋಪ ಎಂದರೂ ತಪ್ಪಾಗಲಿಕ್ಕಿಲ್ಲ,
ಇದೆಲ್ಲದರ ಮದ್ಯದಲ್ಲಿ ಉತ್ತರ ಕರ್ನಾಟಕದ ಜನರು ನಮ್ಮ ಭಾಗದ ಮಹತ್ವ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ನೀಡುತ್ತಿರುವ ಕೊಡುಗೆಯನ್ನ ಅರಿಯದೆ ಅದೇ ರಾಜಕೀಯ ವ್ಯವಹಾರ ಮಾಡುತ್ತಿರುವ ಕುಟುಂಬಗಳಿಗೆ ಜೈ ಎನ್ನುತ್ತಿರುವುದು ಮೂರ್ಖತನ ಏನಬೇಕೊ ಅಥವಾ ಜಾಣತನ ಎಂದು ಕರೆಯಬೇಕೋ ಅರ್ಥವಾಗದ ವಿಷಯ,
ಒಟ್ಟಿನಲ್ಲಿ ಆಗಾಗ್ಗೆ ಆಗಾಗ್ಗೆ ವರ್ಷದ ವಸಂತ ಮಾಸದಂತೆ ಉತ್ತರ ಕರ್ನಾಟಕದ ವಿಷಯವನ್ನು ಬೆಂಗಳೂರಿನ ಸದಾಶಿವನಗರದನಂತಹ ಸ್ಥಳಗಳಲ್ಲಿ ಕುಂತು ಇಂಪಾಗಿ ಅನುಭವಿಸಿ ಮತ್ತೆ ನೋಡೋಣ ಎಂದು ಮುಂದೆ ಸಾಗುತ್ತಿರುವ ರಾಜಕೀಯ ನಾಯಕರುಗಳನ್ನು ನೋಡಿದ್ರೆ ಎಷ್ಟೋ ಜನರೇ ಉಗ್ರ ಕೋಪ ಬಂದರು ಏನು ಮಾಡಲಾಗದ ಅನಿವಾರ್ಯ ಪರಿಸ್ಥಿತಿ,
ಇದೆಲ್ಲದರ ಮಧ್ಯೆ ಇತ್ತೀಚಿನ ಕೆಲವರು ತಪ್ಪ ಹೊಟ್ಟೆ ಪಾಡಿಗೊಸ್ಕರ ಉತ್ತರ ಕರ್ನಾಟಕದ ಭಾಷೆಯನ್ನು ಹೆಂಗೆಂಗೋ ಹೇಳಿ ಉತ್ತರ ಕರ್ನಾಟಕದ ನೈಜ ಪರಿಸ್ಥಿತಿಯನ್ನು ಇನ್ನುಳಿದ ಕರ್ನಾಟಕದ ಜನತೆಯ ಮುಂದೆ ಮರೆ ಮರೆಮಾಚುತ್ತಿರುವದು ಇನ್ನೊಂದು ಶೋಚನೀಯ ಸಂಗತಿ,
ಒಟ್ಟಿನಲ್ಲಿ ಹೇಳುವುದಾದರೆ ಉತ್ತರ ಕರ್ನಾಟಕದ ವಿಷಯ , ಪ್ರಾಂತ , ಜನತೆ ಹಾಗೂ ಭಾಷೆ ಎಲ್ಲವೂ ಬರೀ ಬಕಾಸುರ ಭಕ್ಷಬೊಜಗನಗಳ ಬಂಡಿಯಂತೆ ನೀಡಿ ಬಳಸಿ ತಿಂದು ತೆಗುತ್ತಿರುವ ವಿಷಯವನ್ನ ಆಲೋಚನೆ ಮಾಡಿದರೆ ಕರುಳು ಕಿತ್ತು ಬರುತ್ತದೆ,
ಇದೆಲ್ಲದರ ಮಧ್ಯೆ ಮೋಸ ಹಾಗೂ ದುಷ್ಟತನ ಪರಮಾವಧಿ ಕೆಲ ಜನರಲ್ಲಿ ವಿಶೇಷವಾಗಿ ಸಂಬಂಧಗಳ ಮೀರಿ ಅತ್ತಿರಕಕ್ಕೆ ಹೋಗುತ್ತಿರುವದು ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಎಂಬ ಮಾತನ್ನು ಎತ್ತಿ ಎತ್ತಿ ನೆನ್ಪಿಸುತ್ತಿದೆ.
ಇಂತಹ ಸಾವಿರಾರು ನೋವಿನ ಸಂಗತಿಗಳು ನನ್ನೊಬ್ಬರದಲ್ಲ ಬದಲಾಗಿ ನಮ್ಮ ಭಾಗದ ಎಷ್ಟೋ ಆಶಾವಾದಿ ಯುವ ಪೀಳಿಗೆಯ ನೋವು
“ಆಲೋಚನೆ ಮಾಡುವ ಸಮಯವಲ್ಲ ಬದಲಾಗಿ ಅವಕಾಶಗಳ ಅಭಿಲಾಶಯ ಸಮಯ “
(~ವೀರೇಶ ಬಿರಾದಾರ ~ಹೊನಗನಹಳ್ಳಿ)