ಉಡುಪಿ:ಇಂದಿನಿಂದ ಉಡುಪಿಯ ಕೃಷ್ಣ ಮಠದ ಎದುರಿಗೆ ಇರುವ ಕನಕ ಕಿಂಡಿ ಬಳಿ ಇರುವ ಸಂತ ಶ್ರೇಷ್ಠ ಕನಕ ದಾಸರ ಪ್ರತಿಮೆಗೆ ಪ್ರತಿನಿತ್ಯ ಪೂಜೆ ಪುನಸ್ಕಾರ ಮಾಡಲು ಸಿದ್ಧತೆ ನಡೆಯುತ್ತದೆ.
ಕೃಷ್ಣನಿಗೋ ಕನಕನಿಗಿರುವ ಸಂಬಂಧ.
ಪ್ರತಿನಿತ್ಯ ಯಾಕೆ ಪೂಜೆ ಮಾಡಬೇಕು??,
ನಾಡಿನ ಲಕ್ಷಾಂತರ ಕನಕ ಭಕ್ತರ ಒಕ್ಕರೋಲಿನ ಬೇಡಿಕೆ ಸಾಕಾರ ಗೊಳ್ಳುವ ಕಾಲ ಸನ್ನಿತವಾಗಿದೆ.
ನೂರಾರು ವರ್ಷಗಳಿಂದ ಉಡುಪಿಯ ಅಷ್ಟ ಮಠದಿಂದ ನಿರ್ಲಕ್ಷಕ್ಕೆ ಒಳಗೊಂಡ ಕನಕ ಪ್ರತಿಮೆಗೆ ಈ ಬಾರಿ ಯೋಗ ಕೊಡಿಬಂದಿದೆ.
ಉಡುಪಿ ಜಿಲ್ಲೆಯಲ್ಲಿ ವಾಸವಾಗಿರುವ ಉತ್ತರ ಕರ್ನಾಟಕದ ಕುರುಬ ಸಮಾಜದ ಬಂದುಗಳು ಹಾಗೂ ತುಮಕೂರು ಜಿಲ್ಲೆಯ ಮದುಗಿರಿ ಪಟ್ಟಣದ ಆದಿನಾತ್ ಇನ್ನೂ ಮುಂತಾದ ಸಮಾನ ಮನಸ್ಕರು ಒಂದು ಟ್ರಸ್ಟ್ ನಿರ್ಮಿಸಿಕೊಂಡು ಇನ್ನೂ ಮುಂದೆ ಪ್ರತಿನಿತ್ಯ ಕನಕ ದಾಸರ ಪ್ರತಿಮೆಗೆ ಪೂಜೆ, ಕೈಕಂರ್ಯಗಳ ಜೊತೆ ಅಭಿಷೇಕ, ವಿಶೇಷ ಪೂಜೆ ನಡೆಸಲು ತೀರ್ಮಾನಿಸಿದ್ದಾರೆ.
ಪ್ರತಿದಿನ ಪೂಜೆ ಮಾಡಲು ಒಬ್ಬ ಅರ್ಚಕರನ್ನ ಗೊತ್ತುಪಡಿಸಿ ಇಂದು ಸಾಂಕೇತಿಕವಾಗಿ ಪೂಜೆ ಮಾಡಲು ಆರಂಭಿಸಿದ್ದಾರೆ. ಈ ನೀಟ್ಟಿನಲ್ಲಿ ಇತ್ತೀಚೆಗೆ ಮಾಜಿ ಸಚಿವ, ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣನವರ ನೇತೃತ್ವ ತಂಡ ಉಡುಪಿಗೆ ಬೇಟೆ ನೀಡಿ ಭಕ್ತರ ಬೇಡಿಕೆ ಈಡೇರಿಸಲು ಸಹಾಕಾರ ನೀಡುವುದಾಗಿ ತಿಳಿಸಿದ್ದಾರೆ..
(ವರದಿ :ಸುಂಕದಕಲ್ಲು ಹನುಮಂತಪ್ಪ ಸಂಪಾದಕರು ಕನಕವಾಣಿ ಮಾಸ ಪತ್ರಿಕೆ, ಚಿತ್ರದುರ್ಗ.)