Monday, July 7, 2025
Homeಸ್ಮರಣೆದಾವಣಗೆರೆ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಹಿಂಬದಿಯ ವೃತ್ತಕ್ಕೆ "ವಿಷ್ಣುವರ್ಧನ್ ವೃತ್ತ" ನಾಮಕರಣಕ್ಕೆ ಅನುಮೋದನೆ.ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಮಂಜುನಾಥ್...

ದಾವಣಗೆರೆ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಹಿಂಬದಿಯ ವೃತ್ತಕ್ಕೆ “ವಿಷ್ಣುವರ್ಧನ್ ವೃತ್ತ” ನಾಮಕರಣಕ್ಕೆ ಅನುಮೋದನೆ.ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಮಂಜುನಾಥ್ ಗೌಡ


ದಾವಣಗೆರೆ:ದಾವಣಗೆರೆ ಮಹಾನಗರದಲ್ಲಿ ನಮ್ಮ ಜೈ ಕರುನಾಡ ವೇದಿಕೆಯು ಸದಾಕನ್ನಡಪರ ಹೋರಾಟದಲ್ಲಿ ಸಕ್ರಿಯವಾಗಿ ಮುಂಚೂಣಿಯಲ್ಲಿದ್ದು ಕನ್ನಡ ನಾಡು,ನುಡಿ,ಜಲ ವಿವಾದಗಳು ಬಂದಾಗ ಕನ್ನಡ ನಾಡುನುಡಿಗಾಗಿ ಹೋರಾಡಲು ಟೊಂಕಕಟ್ಟಿ ಮುನ್ನುಗಲು ಸಜ್ಜಾಗಿರುತ್ತದೆ.ಇಂಥ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ ಮತ್ತು ಅವರ ಸಂಗಾತಿಗಳ ಪರಿಶ್ರಮದಿಂದ ನಾಡಿನ ಹೆಸರಾಂತ ಕಲಾವಿಧ ದಿವಂಗತ ಡಾಕ್ಟರ್ ವಿಷ್ಣುವರ್ಧನ್ ರವರ ಬಗ್ಗೆ ಅಪಾರವಾದ ಅಭಿಮಾನವಿಟ್ಟು ಪ್ರತಿ ವರ್ಷ ಡಾಕ್ಟರ್ ವಿಷ್ಣುವರ್ಧನ್ ರವರ ಹುಟ್ಟು ಹಬ್ಬ ಮತ್ತು ಸ್ಮರಣೆ ದಿನಾಚರಣೆಗಳನ್ನು ಆಚರಿಸುತ್ತಾ ವಿಷ್ಣುವರ್ಧನ್ ರವರ ಹೆಸರಿನಲ್ಲಿ ಅನ್ನಸಂತರ್ಪಣೆ ಹಾಗೂ ಇತರೆ ಸಾಂಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ.
ನಗರದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾನದ ಹಿಂಬದಿಯಲ್ಲಿರುವ ವೃತ್ತದಲ್ಲಿ ಈಗಾಗಲೇ ಸುಮಾರು ವರ್ಷಗಳಹಿಂದೆ ವಿಷ್ಣುವರ್ಧನ್ ರವರ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು ಅದರ ಭಾಗವಾಗಿ ಈಗ ಆ ವೃತ್ತಕ್ಕೆ ಖ್ಯಾತ ಚಲನಚಿತ್ರ ವರನಟ ವಿಷ್ಣುವರ್ಧನ್ ಅವರ ಹೆಸರನ್ನು ಇಡಬೇಕೆಂದು ಮಂಜುನಾಥ್ ಗೌಡರವರು ಸ್ಥಳಿಯ ಸಂಸ್ಥೆ ಯಿಂದ ಹಿಡಿದು ರಾಜ್ಯದ ಕಚೇರಿಗಳವರೆಗೆ ಅಲೆದಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.ಅದರ ಪಲವಾಗಿ ರಾಜ್ಯ ಸರ್ಕಾರ ಮನವಿಯನ್ನು ಪುರಸ್ಕಾರ ಮಾಡಿ “ವಿಷ್ಣುವರ್ಧನ್ ವೃತ್ತ” ವೆಂದು ನಾಮಕರಣಮಾಡಲು ಆದೇಶನೀಡಿ ನಾಡಿನ ಗೌರವಾನ್ವಿತ ನಾಯಕನಟ ಡಾಕ್ಟರ್ ವಿಷ್ಣುವರ್ಧನ್ ರವರಿಗೆ ಗೌರವ ಸಲ್ಲಿಸಿದಂತಾಗಿದೆ ಎಂದು ಮಂಜುನಾಥ್ ಗೌಡರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments