ವಿಜಯಪುರ : ತ್ಯಾಗ ಬಲಿದಾನದ ಪ್ರತೀಕವಾದ ಮೊಹರಂ ಹಬ್ಬ ಬರಿ ಶೋಕಾಚರಣೆಯ ದಿನವಲ್ಲ ಬದಲಾಗಿ ಧ್ಯರ್ಯ,ತ್ಯಾU, ಮತ್ತು ಧಾರ್ಮಿಕ ನoಬುಗೆಗಳ ಮಹತ್ವವನ್ನು ಸಾರುವ ಪ್ರತೀಕವಾಗಿದೆ ಎಂದು ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಹೋರಾಟ ವೇದಿಕೆ ಬೆಂಗಳೂರು ರಾಜ್ಯ ಸಂಚಾಲಕ ನ್ಯಾಯವಾದಿ ದಾನೇಶ ಅವಟಿ ನುಡಿದರು. ಬುರಣಪುರ ರಸ್ತೆಯ ಬಸವನಗರದಲ್ಲಿ ಮೊಹರಂ ಕೊನೆಯ ದಿನವಾದ ರವಿವಾರ ದಿನಾಂಕ ೦೬-೦೭-೨೦೨೫ ರಾತ್ರಿ ಅಲಾಯಿ ದೇವರ ಪಂಜಾ ಹಾಗೂ ಡೋಲಿ ದರ್ಶನ ಪಡೆದು ಆಶೀರ್ವಾದ ಹಾಗೂ ಗೌರವ ಶ್ರೀರಕ್ಷೆ ಸ್ವೀಕರಿಸಿ ಮಾತನಾಡಿದ ಅವರು ದೇಶ-ವಿದೇಶದ ಹಬ್ಬ ಹರಿದಿನಗಳು ಆಳರಸರಿಂದ ಧಾರ್ಮಿಕ-ಸಾಂಸ್ಕೃತಿಕ ಆಚರಣೆಗಳಿಂದ ಕೆಲವೊಂದು ಕಾಲ ಘಟ್ಟಗಳಲ್ಲಿ ಭಾರತೀಯರ ಜನ ಜೀವನದಲ್ಲಿ ಹಾಸು ಹೊಕ್ಕಾಗಿದ್ದು ಅವು ಜೀವನದ ಮೌಲ್ಯ ಸಂಸ್ಕೃತಿ ಆಚಾರ ವಿಚಾರಗಳನ್ನು ಎತ್ತಿ ಹಿಡಿದು ಇತಿಹಾಸವನ್ನು ನೆನಪಿಸುತ್ತವೆ. ಅವುಗಳ ಹಿನ್ನೆಲೆ ಪರಂಪರೆ ಅರಿತು ಅಳವಡಿಸಿಕೊಂಡು ಆಚರಿಸಿ ಮುಂದಿನ ಜನಾಂಗಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮೌಲಾನ ಮುಷ್ತಾಕಸಾಬ ವಾಲೀಕಾರ ಮಾತನಾಡಿ. ಮೊಹರಂ ಹಬ್ಬವು ಮಹಮ್ಮದ್ ಪೈಂಬರರರ. ಮೊಮ್ಮಕ್ಕಳು ಹಸನ್ ಹುಸೇನರು ಅವರ ಅನುಯಾಯಿಗಳು ಕಾರ್ಬಲಾ ಯುದ್ದದಲ್ಲಿ ಪ್ರಾಣತ್ಯಾಗ ಮಾಡಿದ ದಿನವಾಗಿದೆ. ಕಾರಣ ಈ ಹಬ್ಬವನ್ನು ಉಪವಾಸ, ಪ್ರಾರ್ಥನೆ, ದ್ಯಾನ, ದಾನದಂತಹ ಪವಿತ್ರ ಕಾರ್ಯಗಳ ಮೂಲಕ ಆಚರಿಸಲಾಗುತ್ತದೆ. ವಿವಿಧ ಧರ್ಮೀಯರು ಒಟ್ಟಾಗಿ ಆಚರಿಸುವ ಈ ಹಬ್ಬವು ಶಾಂತಿ, ಸಾಮರಸ್ಯತೆ, ಸೌಹಾರ್ದತೆಯನ್ನು ಸಾರುವ ಸಂದೇಶದ ಶುಭಾಶಯವನ್ನು ತಿಳಿಸುವ ಹಬ್ಬವಾಗಿದೆ ಎಂದರು. ಯುವ ಮುಖಂಡ. ಮೌಲಾನ ಅಬ್ದುಲ್ ಕಲಾಂ ಅಜಾದ್ ಸಮಾಜ ಸೇವಾ ಸಂಘದ ಅಧ್ಯಕ್ಷ ಮಷಾಕ ಕರ್ಜಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಮ್ಮದ್ ಹುಸೇನ್ ಜಕಾತಿ, ಟಿಪ್ಪು ಕನ್ನೂರ, ರಾಜು ಕರ್ಜಗಿ, ಮೌಲಾಲಿ ತಿಕೋಟಾ, ಹಸನ್ ದೋಂಗ್ರಿ ಕಡ್ಲಿಮಟ್ಟಿ, ಜಾಫರ್ ಸಾಧಿಕ್ ಕಡ್ಲಿಮಟ್ಟಿ, ವಾಜೀದ್ ಕಡ್ಲಿಮಟ್ಟಿ, ವಿಜಯ ಕುಮಾರ್ ಕರ್ಫೆ, ರಾಮು ಕರ್ಫೆ, ಜಗನ್ನಾಥ ಕಟ್ಟಿಮನಿ, ಮೆಹಬೂಬ್ ದರ್ಗಾ, ಮಹೇಶ ಹೊಸಮನಿ, ಪಂಕಜ್ ಕಾಂಬಳೆ, ಯಾಸ್ಮಿನ್ ಕನ್ನುರ, ವೈಶಾಲಿ ಮಾದರ, ಸಂಗೀತಾ ಕಾಂಬಳೆ, ನಕುಶಾ ಹೊಸಮನಿ ಇನ್ನೂ ಅನೇಕರು ಉಪಸ್ಥಿತರಿದ್ದರು. ಪರಶುರಾಮ್ ಪಾಟೀಲ್ ನಿರೂಪಿಸಿದರು. ರಾಜು ಬಿರಾದಾರ ವಂದಿಸಿದರು.

