Tuesday, October 7, 2025
Homeಸಂಸ್ಕೃತಿಅಕ್ಟೋಬರ್ 23 ರಿಂದ 25,ಶ್ರೀ ಕಾಶೀಲಿಂಗೇಶ್ವರ ಸ್ವಾಮಿಗೆ ಪ್ರಾಣ ಪ್ರತಿಷ್ಠಾಪನೆ ಜೀವಕಳೆ ನೇತ್ರೋನ್ಮಿಲನ ಹಾಗೂ ದೇವಸ್ಥಾನ...

ಅಕ್ಟೋಬರ್ 23 ರಿಂದ 25,ಶ್ರೀ ಕಾಶೀಲಿಂಗೇಶ್ವರ ಸ್ವಾಮಿಗೆ ಪ್ರಾಣ ಪ್ರತಿಷ್ಠಾಪನೆ ಜೀವಕಳೆ ನೇತ್ರೋನ್ಮಿಲನ ಹಾಗೂ ದೇವಸ್ಥಾನ ಕಳಸಾರೋಹಣ

ದಾವಣಗೆರೆ:ದಿನಾಂಕ : 23-10-2025ನೇ ಗುರುವಾರ ಸಂಜೆ ಗೋಧೂಳಿ ಲಗ್ನದಲ್ಲಿ ಸ್ವಸ್ತಿ ಶ್ರೀ 1947ನೇ ಶಾಲಿವಾಹನ ಶಕೆ 1947ನೇ ಶ್ರೀ ವಿಶ್ವಾವಸು ನಾಮ ಸಂವತ್ಸರೇ . ದಕ್ಷಿಣಾಯಣೆ ಹೇಮಂತ ಋತು ಕಾರ್ತೀಕ ಮಾಸೇ ದ್ವಿತೀಯ ತಿಥ್ ಶುಕ್ಲಪಕ್ಷ ವಿಶಾಖ ನಕ್ಷತ್ರ ‘ಆಯುಷ್ಮಾನ್ ಯೋಗ ಗುರುವಾರದಂದು ಸಂಜೆ 4-30 ರಿಂದ ಶ್ರೀ ಕಾಶೀಲಿಂಗೇಶ್ವರ ಸ್ವಾಮಿಯನ್ನು ಗ್ರಾಮದರ್ಶನಕ್ಕೆ ಕಳುಹಿಸುವುದು ಹಾಗೂ ಸಂಜೆ 6-30 ರಿಂದ 7-30 ರ ವರೆಗೆ ಸಲ್ಲುವ ಗೋಧೂಳಿ ಲಗ್ನದಲ್ಲಿ ದೇವಾಲಯ ಪ್ರವೇಶ “ಶ್ರೀ ಗಂಗೆ ಪೂಜೆ” “ಶ್ರೀ ಗಣಪತಿ ಪೂಜೆ” “ಗುರುಕಳಶ” ಪಂಚಕಳಶ” ಪುಣ್ಯಾಹ ನಾಂಧಿ ಸ್ವಾತಿವಾಚನ ನವಗ್ರಹ ಮೃತ್ಯುಂಜಯ ಅಷ್ಟದಿಕ್ಷಾಲಕರು ಸಪ್ತ ಸಭಾದೇವತೆ ಹಾಗೂ ಏಕಾದಶ ರುದ್ರ ಪೂಜೆ, ಗಣ ಹೋಮ, ನವಗ್ರಹ ಮೃತ್ಯುಂಜಯ ರುದ್ರ ಹೋಮ, ಮೃತ್ಯುಂಜಯ ಹೋಮ, ಜಯಾದಿ ಹೋಮ ವಿಶೇಷ ಪೂಜಾ ಕಾರ್ಯಕ್ರಮ ಶ್ರೀ ಮ.ನಿ.ಪ್ರ. ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು ವಿರಕ್ತಮಠ ಹೆಬ್ಬಾಳು ಇವರ ದಿವ್ಯ ಸಾನಿಧ್ಯದಲ್ಲಿ ಕಾಶಿಪುರ ಗ್ರಾಮದಲ್ಲಿ ನೆರವೇರುವುದು.

ದಿನಾಂಕ : 24-10-2025ನೇ ಶುಕ್ರವಾರ

ಸ್ವಸ್ತಿ ಶ್ರೀ 1947ನೇ ಶಾಲಿವಾಹನ ಶಕೆ 1947ನೇ ಶ್ರೀ ವಿಶ್ವಾವಸು ನಾಮ ಸಂವತ್ಸರೇ ದಕ್ಷಿಣಾಯಣೆ ಹೇಮಂತ ಋತು ಕಾರ್ತೀಕ ಮಾಸೇ ತೃತೀಯ ತಿಥ್‌ ಶುಕ್ಲಪಕ್ಷ ಅನುರಾಧ ನಕ್ಷತ್ರ ಸೌಭಾಗ್ಯ ಕರಣ, ಗರಜ ಕರಣ, ಬೆಳಿಗ್ಗೆ ಬ್ರಾಹ್ಮ ಮುಹೂರ್ತ 4-36 ರಿಂದ 9-30 ರ ವರೆಗೆ ಶ್ರೀ ಕಾಶೀಲಿಂಗೇಶ್ವರ ಸ್ವಾಮಿಗೆ ಕುಂಭಾಬಿಷೇಕ, ರುದ್ರಾಭಿಷೇಕ ನ್ಯಾಸ ಪ್ರಯೋಗ, ವ್ಯಾಸ ಪಠಣ, ವಸ್ತ್ರಾಲಂಕಾರ, ಪುಷ್ಪಾಲಂಕಾರ ಹಾಗೂ ಫಲ ಅಲಂಕಾರ ಹಾಗೂ ದೇವರ ದರ್ಶನ ಹಾಗೂ ಕದಳಿ ಛೇಧನ ಮತ್ತು ದರ್ಪಣ ಶಾಸ್ತ್ರ ನೆರವೇರುವುದು ಹಾಗೂ ಮಹಾಮಂಗಳಾರತಿ.

ದಿನಾಂಕ : 25-10-2025ನೇ ಶನಿವಾರ

ಬೆಳಿಗ್ಗೆ 6-00 ರಿಂದ ಶ್ರೀ ಆಂಜನೇಯ ಸ್ವಾಮಿಗೆ ಕುಂಕುಮಾರ್ಚನೆ, ಪುಷ್ಪಾಲಂಕಾರ, ಮಹಾಮಂಗಳಾರತಿ ಪ್ರತಿನಿತ್ಯ ಕಾಶೀಲಿಂಗೇಶ್ವರ ಸ್ವಾಮಿಗೆ ಮಂಡಲ ಪೂಜೆ ಕಾರ್ಯಕ್ರಮ ಇರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments