ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ , ದೊಡ್ಡಕೇರಿಯಲ್ಲಿ ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿ, ದೊಡ್ಡಕೇರಿ ಹಾಗೂ ದೊಡ್ಡಕೇರಿ ಕಾ ರಾಜಾ ಗಣಪತಿ ಯುವಕರ ಸೇವಾ ಸಮಿತಿ – ಹೊನ್ನಾಳಿ , ಇವರ ಸಂಯುಕ್ತ ಆಶ್ರಯದಲ್ಲಿ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ದಿನಾಂಕ :- 10/09/2025 ರ ಬುಧವಾರ ಸಂಜೆ “ಅನ್ನ ಸಂತರ್ಪಣೆ” ಯನ್ನು ಸಂಜೆ 7:30 ರಿಂದ ಆಯೋಜಿಸಲಾಗಿದೆ , ಅದೇ ರೀತಿ ದಿನಾಂಕ :-12/09/2025 ರ ಶುಕ್ರವಾರದ ಸಂಜೆ 6:00 ಗಂಟೆಯಿಂದ ರಾತ್ರಿ 10:00ಗಂಟೆಯ ವರೆಗೆ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ,ಶಿವಮೊಗ್ಗ (ರಿ), ಇವರಿಂದ “ಹಾಲುಮತ ಸಂಸ್ಕೃತಿ , ಕನಕ ಕಲಾವೈಭವ ಶ್ರೀ ಕನಕದಾಸರ ಗೀತಗಾಯನ ನೃತ್ಯರೂಪಕ” , ಇರುತ್ತದೆ , ಈ ಕಾರ್ಯಕ್ರಮದ ಜೊತೆಗೆ SSLC, PUC ಮತ್ತು ಡಿಗ್ರಿ ಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ಮಕ್ಕಳಿಗೆ “ಪ್ರತಿಭಾ ಪುರಸ್ಕಾರ”, ಸನ್ಮಾನ ಕಾರ್ಯಕ್ರಮ ಸಹ ಇರುತ್ತದೆ , ನಂತರ ಇದೇ ತಿಂಗಳು ದಿನಾಂಕ :- 18/09/2025 ರ ಗುರುವಾರ 4 ಗಂಟೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯ ವಿಸರ್ಜನಾ ಮೆರವಣಿಗೆಯ ನಂತರ ಗಣೇಶನ ಮೂರ್ತಿಯ ವಿಸರ್ಜನಾ ಪೂಜೆಯ ನಂತರ ವಿಸರ್ಜನೆ ಮಾಡಲಾಗುವುದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವ ಭಕ್ತಾದಿಗಳು ಆಗಮಿಸಿ ಗಣೇಶ ನ ಕೃಪೆಗೆ ಪಾತ್ರರಾಗಬೇಕು ಎಂದು ಈ ಮೂಲಕ ವಿನಂತಸುತ್ತಿದ್ದೇವೆ ಎಂದು ದೊಡ್ಡಕೇರಿಯ ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿ ಹಾಗೂ ದೊಡ್ಡಕೇರಿ ಕಾ ರಾಜಾ ಗಣಪತಿ ಯ ಯುವಕರ ಸೇವಾ ಸಮಿತಿ ಯವರು ತಿಳಿಸಿದ್ದಾರೆ.

