Wednesday, February 4, 2026
Homeನಿಧನನಿವೃತ್ತ ಕೃಷಿ ಅಧಿಕಾರಿ ಶ್ರೀ ಗೋವಿಂದಪ್ಪ ಬಿದರಿಯವರ ನಿಧನ. ಭಾವಪೂರ್ಣ ಶ್ರದ್ಧಾಂಜಲಿ.

ನಿವೃತ್ತ ಕೃಷಿ ಅಧಿಕಾರಿ ಶ್ರೀ ಗೋವಿಂದಪ್ಪ ಬಿದರಿಯವರ ನಿಧನ. ಭಾವಪೂರ್ಣ ಶ್ರದ್ಧಾಂಜಲಿ.

ವಿಜಯಪುರ:ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಪ್ರತಿಷ್ಠಿತ ಬಿದರಿಯವರ ಮನೆತನ ಮತ್ತು ಹೈಕೋರ್ಟಿನ ಹಿರಿಯ ನ್ಯಾಯವಾದಿ ಶ್ರೀಯುತ ರಾಜೇಂದ್ರ ದೇಸಾಯಿಯವರ ಮಾವನವರು. ಹಿಯರಾದ ಶ್ರೀ ಗೋವಿಂದಪ್ಪ ಬಾಲಪ್ಪ ಬಿದರಿ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ, ಇವರು ದಿನಾಂಕ:06-01-2026,ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ ಮೃತರಿಗೆ 82,ವರ್ಷ ವಯಸ್ಸಾಗಿತ್ತು.ಮೃತರು ತಾಯಿ,ಪತ್ನಿ,ಹಾಗೂ ಇಬ್ಬರು ಪುತ್ರರು,ಸೊಸೆ ಮೊಮ್ಮಕ್ಕಳು,ಸಹೋದರ ಸೇರಿದಂತೆ ಅಪಾರ ಬಂಧು ಬಳಗ ಹಿತೈಸಿಗಳನ್ನು ಅಗಲಿದ್ದಾರೆ.
ದಿನಾಂಕ:07-01-2026,ರಂದು ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಅವರ ಸ್ವ ಜಮೀನಿನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.
.ಅವರ ಜೀವಿತಾವಧಿಯಲ್ಲಿ ಮತ್ತು ತಮ್ಮ ಸೇವಾವಧಿಯಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಯಾವುದೇ ಅಧಿಕಾರ,ಶ್ರೀಮಂತಿಕೆ ಯ ಅಹಮ್ಮವಿಲ್ಲದೆ ಸರ್ವರನ್ನೂ ಸಮಾನದೃಷ್ಟಿಯಿಂದ ನೋಡುತಿದ್ದರು.ಬಡವರಿಗೆ ಸಹಾಯಹಸ್ತ ಚಾಚುತ್ತ ಸಕಲರಲ್ಲೂ ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತಾ ಎಲ್ಲರಿಗೂ ಹಿಯಣ್ಣನಂತಿದ್ದು ಮಾರ್ಗದರ್ಶನ ಮಾಡುತಿದ್ದರು.ಇಂಥ ಒಬ್ಬ ನಿಷ್ಕಲ್ಮಷ ಮನಸ್ಸಿನ ಜನಾನುರಾಗಿ ಶ್ರೀ ಯುತರ ನಿಧನದ ಸುದ್ಧಿಯು ಎಲ್ಲರಿಗೂ ದುಃಖ ವನ್ನುಂಟು ಮಾಡಿದೆ.
ಮೃತರ ಆತ್ಮಕ್ಕೆ ಚಿರಶಾತಿ ದೊರಕಲೆಂದು ಮತ್ತು ಮೃತರ ಕುಟುಂಬ ವರ್ಗಕ್ಕೆ ಹಾಗೂ ಹಿತೈಸಿ ಬಂಧು ಮಿತ್ರರಿಗೂ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತಾ ಭಾವಪೂರ್ಣ ಶ್ರದ್ಧಾಂಜಿಲಿ ಅರ್ಪಣೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments