ವಿಜಯಪುರ: ದೊಡ್ಡಸ್ತಿಕೆಗಾಗಿ ಗುಗ್ಗಳಹೊರುವವರಿರುವ ಗ್ರಾಮಗಳು ಕುಗ್ರಾಮಗಳಂತಾಗಿವೆ.ಒಂದುಗ್ರಾಮ,ಆಗ್ರಾಮದ ಪ್ರವೇಶ ಮಾಡುತಿದ್ದಂತೆ ಗೋಚರವಾಗ್ತಿವೆ ಆ ಗ್ರಾಮದ ಜನರ ಸಾಮಾಜಿಕ ಕಳಕಳಿ,ಪ್ರಗತಿಯನೋಟ,ಜನರವರ್ತನೆಗಳು,ಪರಸ್ಪರ ನೋಟ ಪ್ರತಿನೋಟ ಹಾಗೂ ಮುಖಗಳ ಹಾವಭಾವಗಳು.ನಮ್ಮದೂ ಒಂದುಗ್ರಾಮವಿದೆ ಹೊನಗನಹಳ್ಳಿ ಅಂತ ಅದೂ ಸಾಲದ್ದು ಎಂಬಂತೆ ಅದಕ್ಕೆ ಅವಳಿಗ್ರಾಮ ಒಂದು ಸೇರಿಕೊಂಡಿದೆ ಸವನಹಳ್ಳಿ ಅಂತ.ವಾವ್ ಈ ಎರಡೂ ಗ್ರಾಮಗಳ ಸೋಗಲಾಡಿ ಸಮಾಜಸೇವಕರನ್ನ ಹಾಡಿಹೊಗಳಲು ಪದಗಳೇ ಸಿಗಲ್ಲಾ.ಏನಿವರ ಗರಿಗರಿ ಮಾಸದ ಉಡುಗೆತೊಡುಗೆ,ಏನಿವರ ರಾಜಕೀಯಠೀವಿ,ಏನಿವರ ರಾಜಕಾರಣಿಗಳ ಒಡನಾಡಿತನ,ಏನಿವರ ರಾಷ್ಟ್ರ ರಾಜಕಾರಣದವರೆಗಿನ ಚರ್ಚೆ,ಎಂಥೆಂಥಾ ಮಹಾನ್ ನಾಕರೊಂದಿಗಿನ ಸೆಲ್ಪಿ,ಧಾರ್ಮಿಕ ಮುಖಂಡರೊಂದಿಗಿನ ಸಂವಾದ,ಇವರು ಸಾಮಾಜಿಕ ತಳಕುಬಳಕಿನ ಶೋಕಿ ಸಾಲದ್ದಕ್ಕೆ ಜನಪದಗಾಯಕರುಗಳುಜೋಡಿಸಿ ಹಾಡುವ ಪದಕುಂಜಗಳು ವಾವ್ ಸಾಕ್ಷಾತ್ ಸಮಾಜಸೇವಕರು ಎಂದು ಇವರ ಮಾದರಿಪಡೆಯಲು ಅಪ್ಪಿತಪ್ಪಿಯೂ ಯಾರಾದರೂ ಪ್ರತ್ಯೇಕ್ಷತೆಗಾಗಿ ಇವರ ಗ್ರಾಮ ಒಳಪ್ರವೇಶಿಸಿದರೆ ಗೊತ್ತಾಗುತ್ತದೆ ಇವರ ತಳಕುಬೆಳಕಿನಕೊಳಕು ಗುಲಾಮಗಿರಿ ಬಕೇಟ್ ಮನಸ್ಥಿತಿಯ ಕಾರ್ಯ ವೈಖರಿ.
ಇವರಿಗೆ ಸ್ಥಳೀಯ ಶಾಸಕನಿಂದ ಹಿಡಿದು ರಾಷ್ಟ್ರಪತಿಯವರೆಗೂ ಮಾತಾಡ್ತಾರೆ.ಬುಲೆಟ್ ರೈಲು ಒಂದೇಭಾರತ ರೈಲು,ವಿಶ್ವವಿಖ್ಯಾತ ಧಾರ್ಮಿಕಕ್ಷೇತ್ರದರ್ಶನ ರಾಜ್ಯ ಪರರಾಜ್ಯಗಳ ವಿಶ್ಲೇಷಣೆ ಮಾಡ್ತಾರೆ.ಆದರೆ ಸ್ವಗ್ರಾಮ ಹಳೆಯಕಾಲದಲ್ಲಿದ್ದ ಸೌಲಭ್ಯಗಳನ್ನೂ ಸರಿಪಡಿಸಿಕೊಳ್ಳದೆ ಅವಸಾನದತ್ತಸಾಗಿವೆ.ಈ ತಿಂಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಒಂದನ್ನು ಅದ್ದೂರಿಯಾಗಿ ಮಾಡುತಿದ್ದಾರೆ ಈ ಕಾರ್ಯಕ್ರಮಕ್ಕೆ ಘಟಾನುಘಟಿ ಮಹಾನಾಯಕರುಗಳ ದಂಡೇ ಬರುವ ನಿರೀಕ್ಷೆ ಇದೆ ಅದರಂತೆ ಧಾರ್ಮಿಕ ಕ್ಷೇತ್ರದ ಗುರುವರ್ಯರೂ ಉತ್ಸವಗಳಲ್ಲಿ ಪಾಲ್ಗೊಳ್ಳಲಿರುವರೆಂದು ಕೇಳಿ ಬಹಳ ಸಂತೋಷವಾಗಿದೆ.ಇಂಥಾ ಮಹಾನ್ ಪುರುಷೊತ್ತಮರು,ನಾಯಕರುಗಳು ಹೇಗೋ ಈಗ್ರಾಮದ ಭಾಗ್ಯದ ಬಾಗಿಲು ತೆರೆದಂತಾಗಿದೆ.ಈ ಕಾರ್ಯಕ್ರಮ ಆಯೋಜಕರಿಗೆ ಧೀರ್ಘ ದಂಡ ನಮಸ್ಕಾರಗಳು.ಆದರೆ ಈ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಅವ್ಹಾನಿತರು ಈ ಗ್ರಾಮದ ಒಂಗೊಂದು ಸುತ್ತು ತಿರುಗಾಡಿ ನೋಡಿಬನ್ನಿ ಈ ಗ್ರಾಮದ ಅಂದಚಂದ ಅಭಿವೃದ್ಧಿ ಕಾರ್ಯಗಳನ್ನ.ಎಲ್ಲರೂ ನುಂಗಪ್ಪಗಳೇ ಹಿಂದಿನ ಕಾಲದಲ್ಲಿದ್ದ ರಸ್ತೆಗಳು,ಅಂಚೆಕಚೇರಿ,ಪಶುವೈದ್ಯಶಾಲೆ,ಜನಜಾನುವಾರಗಳಿಗೆ ಇರುವ ನೀರಿನಬಾವಿಗಳು,ಶಾಲೆಯ ಆವರಣಗಳಲ್ಲಿಯ ಶೌಚಾಲಯ,ವಾಚನಾಲಯ,ಸಾರ್ವಜನಿಕ ಸ್ಮಶಾನ,ರೈಲುನಿಲ್ದಾಣ ಎಂಥಾ ಅಧೋಗತಿಗೆ ಇಳಿದಿವೆ.ಇವರು ಯಾವುದೇ ಹೊಸ ಯೋಜನೆ ಗ್ರಾಮಕ್ಕೆ ತರುವ ಯೋಗ್ಯತೆ ಇರದಿದ್ದರೂ ಬೇಜಾರಿಲ್ಲಾ.ಇದ್ದಸೌಲಭ್ಯಗಳನ್ನು ಉತ್ತಮದರ್ಜೆಗೂ ಏರಿಸಲಾಗದಷ್ಟು ಅಯೋಗ್ಯರು ಊರಲ್ಲಿ ಗೌಡ,ಸಹುಕಾರ,ಮೇಂಬರ,ಚೇರ್ಮನ್,ನನಗೆ ಆಮಂತ್ರಿಗೊತ್ತು,ಈ ಶಾಸಕಗೊತ್ತು,ಆ ಅಧಿಕಾರಿ ನಮ್ಮವನು ಏನೇನೋ ಬಕೊಚ್ಚಿಕೊಂಡು ಅವರ ಮನೆಯ ವಾಚಮನ್ ತರ ಬಾಗಿಲಕಾಯ್ದು ಸ್ವ ಹಿತಾಶಕ್ತಿಯ ಕೆಲಸಕಾರ್ಯಮಾಡಿಸಿಕೊಂಡು ಜನನಿ ಜನ್ಮಭೂಮಿಯ ಸೇವೆ ಮಾಡಲಾಗದ ಅಯೋಗ್ಯರ ಮೆರವಣಿಗೆ ಅಸಾಯಕರಮೇಲಿನ ದೌರ್ಜನ್ಯ ದಬ್ಬಾಳಿಗೆ ಗತ್ತು ಗಮ್ಮತ್ತು ಪಕ್ಷ,ಪಂಗಡ,ಜಾತಿಮತ ದ್ವೇಷ ಅಸೂವೆ ಮನೆಮಾಡಿಕೊಂಡು ಹೊರನೋಟಕ್ಕೆ ನಳನಳಿಸುವ ನಾಲಾಯಕರ ಗ್ರಾಮದೊಳಗೊಂದುಸುತ್ತು ಸತ್ತೊರೆದು ಬನ್ನಿ ಮಹಾ ಅತಿಥಿಮಹೋದಯರೆ.ತಾವಾದರೂ ಈ ಗ್ರಾಮದೊಳಗೆ ಒಂದ ಸುತ್ತು ಹೋಗಿಬಂದು ಅತಿಕ್ರಮಿಸಿಕೊಂಡ ರಸ್ತೆ ತೆರವು,ಮಹಿಳಾ ಶಾಲೆಗೆ ಸೌಚಾಲಯ,ವಾಚನಾಲಯ,ರೈಲು ನಿಲ್ದಾಣ, ಬಸ್ ನಿಲ್ದಾಣ,ಅಂಚೆಕಚೇರಿ,ಪಶುವೈದ್ಯಶಾಲೆ ಗಳ ಮೇಲ್ದರ್ಜೆಗೆ ಮತ್ತು ಕುಡಿಯುವ ನೀರಿಗಾಗಿ ಬೋರವೆಲ್ ಅಥವಾ ನೀರಿನ ತೊಟ್ಟಿ ಮತ್ತು ಸೌಚಾಲಯ ಗಳ ಡ್ರೈನೇಜ್,ಸ್ಮಶಾನ ಕಾಂಪೌಂಡ್, ಒಂದು ಕೆರೆ,ಕ್ರೀಡಾಂಗಣ,ಹಾಗೂ ಇದು ರೈತಾಇಗಳಗ್ರಾಮ ಗೋಶಾಲೆ,ಹತ್ತು ಎಕರೆ ಗೋಮಾಳ ಮುಂತಾದ ಪ್ರಾಥಮಿಕಮೂಲ ಸೌಕರ್ಯಗಳ ಸೌಲಭ್ಯಗಳನ್ನು ಒದಗಿಸಿ ಪುಣ್ಯಕಟ್ಟಿಕೊಳ್ರಿ.ದ್ವನಿ ಇಲ್ಲದ ಈ ಗ್ರಾಮಗಳಿಗೆ ದ್ವನಿಯಾಗ್ರಿ ತಳಕುಬಳಕಿನ ನಾಯಕರಂತೆ ನಮ್ಮ ಗ್ರಾಮವು ತಳಕುಬೆಳಕಾಗಿರದೆ ಅವರ ಮನಸ್ಸಿನಹಾಗೆ ಕೊಳಕಾಗಿದೆ ಪುಣ್ಯಪುರುಷರು,ದಾರ್ಶಣಿಕರು,ಪ್ರಭಾವಿಗಳು ಜನಪ್ರತಿನಿಧಿಗಳು ಪಾದಾರ್ಪಣೆ ಮಾಡುತ್ತಿರುವ ಈ ಗ್ರಾಮಗಳೇಪಾವಣ.ನಿಮ್ಮಂಥವರ ಪಾದಸ್ಪರ್ಶದಿಂದಲಾದರೂ ನಮ್ಮ ಗ್ರಾಮದ ಗತ ವೈಭವ ಮತ್ತೆ ಮರುಕಳಸಲೆಂದು ಪ್ರಾರ್ಥನೆ ನಮಸ್ಕಾರ.
ತಳಕುಬಳಕಿನ ನಾಯಕರಂತೆ ಗ್ರಾಮವು ತಳಕುಬೆಳಕಾಗಿರದೆ ಅವರ ಮನಸ್ಸಿನಹಾಗೆ ಕೊಳಕಾಗಿದೆ.ಪುಣ್ಯಪುರುಷರು,ದಾರ್ಶಣಿಕರು,ಪ್ರಭಾವಿಗಳು ಜನಪ್ರತಿನಿಧಿಗಳ ಪಾದಾರ್ಪಣೆಯಿಂದಲಾದರೂ ಪಾವಣವಾಗಲಿ.
RELATED ARTICLES

