Saturday, April 18, 2026
Homeನಿಧನಕರುನಾಡ ಸಂಜೆ ಮತ್ತು ಸುರ್ಯೋದಯ ಪತ್ರಿಕೆಗಳ ಗಂಗಾಧರ್ ನಿಧನಕ್ಕೆ ಕೆಯುಡಬ್ಲೂಜೆ ಸಂತಾಪ

ಕರುನಾಡ ಸಂಜೆ ಮತ್ತು ಸುರ್ಯೋದಯ ಪತ್ರಿಕೆಗಳ ಗಂಗಾಧರ್ ನಿಧನಕ್ಕೆ ಕೆಯುಡಬ್ಲೂಜೆ ಸಂತಾಪ


ಬೆಂಗಳೂರು:ಗುರು ಟೀಕ್ ಸಮೂಹ ಸಂಸ್ಥೆಯ ಅಧ್ಯಕ್ಷ ಗಂಗಾಧರ್ (68) ಅವರು ನಗರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತ ಗಂಗಾಧರ್ ರವರು
ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಮೂವರು ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಗುರು ಟೀಕ್ ಇನ್ವೆಸ್ಟ್‌ಮೆಂಟ್ ಮೈಸೂರು ಪ್ರೈ.ಲಿ., ಸಂಸ್ಥೆಯನ್ನು ಸ್ಥಾಪಿಸಿದ್ದ ಗಂಗಾಧರ್ ಅವರು, ಸುರ್ಯೋದಯ ಮತ್ತು ಕರುನಾಡ ಸಂಜೆ ಪತ್ರಿಕೆಯನ್ನು ಪ್ರಾರಂಭಿಸಿ ಕೆಲ ವರ್ಷಗಳ ಕಾಲ ನಡೆಸಿದ್ದರು.
ಗಂಗಾಧರ್ ಅವರ ಅಂತ್ಯಕ್ರಿಯೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಾಳೇನಹಳ್ಳಿಯಲ್ಲಿ ಭಾನುವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ:
ಕರುನಾಡ ಸಂಜೆ ಮತ್ತು ಸುರ್ಯೋದಯ ಪತ್ರಿಕೆಗಳನ್ನು ಪ್ರಾರಂಭ ಮಾಡಿ ಸಾಹಸವನ್ನು ಸವಾಲಾಗಿ ಸ್ವೀಕಾರ ಮಾಡಿದ್ದ ಗಂಗಾಧರ್ ಅವರು, ಹಲವು ಪತ್ರಕರ್ತರಿಗೆ ಉದ್ಯೋಗದಾತರಾಗಿದ್ದರು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂೃಜೆ) ಶೋಕಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments