ರಾಜ್ಯದ ರಾಜಕಾರಣದಲ್ಲಿ ಅಜಾತ ಶತ್ರು, ಕರ್ನಾಟಕ ಬಂಜಾರ ಸಮುದಾಯದ ಆಶಾಕಿರಣ ಜನಪರ ಕಾರ್ಯಕ್ರಮಗಳ ಧೀಮಂತ ನಾಯಕ ಸಮಸ್ತ ಹಾವೇರಿಯ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಜನಪ್ರಿಯ ಶಾಸಕರಾದ ಶ್ರೀಯುತ ರುದ್ರಪ್ಪ ಲಮಾಣಿ ಅವರಿಗೆ ಪ್ರಸ್ತುತ ಸರ್ಕಾರದ ಸಚಿವ ಸಂಪುಟ dalli ಕ್ಯಾಬಿನೆಟ ದರ್ಜೆಯ ಸಚಿವರನ್ನಾಗಿ ನೇಮಿಸಬೇಕಾಗಿ ಶ್ರೀಯುತ ಡಿ ಕೆ ಶಿವಕುಮಾರ್ ಅವರಿಗೆ ಕರ್ನಾಟಕದ ಸಮಸ್ತ ಬಂಜಾರರ ಪರವಾಗಿ ಆಗ್ರಹ ಮಾಡುತ್ತೇವೆ ಎಂದು ಬಂಜಾರ ಸಮಾಜದ ಯುವ ಮುಖಂಡರಾದ ಮುಖಂಡರಾದ ಶ್ರೀ ಡಾ. ಲಾಲು ಪಿ. ಲಮಾಣಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕಾದರೆ ಬಂಜಾರ ಸಮಾಜ ಮತದಾರರು ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಅಪಾರವಾದ ಅನುಭವವನ್ನು ಹೊಂದಿರುವ ಶ್ರೀಯುತ ರುದ್ರಪ್ಪ ಲಮಾಣಿ ಅವರು ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರುವಾಗಿ ಸೌಮ್ಯ ಹಾಗೂ ದಕ್ಷ ನಾಯಕರಾಗಿ ಸರ್ಕಾರದ ವಿವಿಧ ಹುದ್ದೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರವಾದ ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿರುತ್ತಾರೆ ಅಲ್ಲದೇ ಸಂಪೂರ್ಣ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪರ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿರುವುದನ್ನು ನೋಡುತ್ತೇವೆ. ಹಾವೇರಿ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಗೆದ್ದು ಬಂದಿರುವ ಬಂಜಾರ ಸಮುದಾಯದ ಏಕೈಕ ಶಾಸಕರಾಗಿರುವ ಅವರು ಪ್ರಸ್ತುತ ಸರ್ಕಾರದಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷರಾಗಿಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡುತ್ತಿದ್ದೇವೆ. ರಾಜ್ಯದ ಹಿಂದುಳಿದ, ದಲಿತ ಹಾಗೂ ಬಂಜಾರ ಸಮುದಾಯದ ಪರವಾಗಿ ನಿರಂತರವಾಗಿ ಶ್ರಮಿಸುತ್ತ ಬಂದಿರುವ ಶ್ರೀಯುತರನ್ನು ಈ ಬಾರಿಯ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಅಥವಾ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಲೇಬೇಕೆಂದು ಹಾವೇರಿ ತಾಲೂಕಿನ ಮತದಾರರು ಹಾಗೂ ಸಮಸ್ತ ಕರ್ನಾಟಕದ ಬಂಜಾರ ಸಮುದಾಯದ ಪರವಾಗಿ ಶ್ರೀಯುತರನ್ನು ಉಪಮುಖ್ಯಮಂತ್ರಿ ಅಥವಾ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ನೀಡಲೇಬೇಕೆಂದು ಒತ್ತಾಯಿಸುತ್ತೇವೆ.

