Tuesday, June 16, 2026
Homeಸಾರ್ವಜನಿಕ ಧ್ವನಿರಸಗೊಬ್ಬರ ಅಭಾವ ಹಾಗೂ ದರ ಏರಿಕೆ ಖಂಡಿಸಿ ಕರವೆ ಸ್ವಾಭಿಮಾನಿ ಬಣ ಪ್ರತಿಭಟನೆ.

ರಸಗೊಬ್ಬರ ಅಭಾವ ಹಾಗೂ ದರ ಏರಿಕೆ ಖಂಡಿಸಿ ಕರವೆ ಸ್ವಾಭಿಮಾನಿ ಬಣ ಪ್ರತಿಭಟನೆ.


ವಿಜಯಪುರ:ರೈತರಿಗೆ ಅಗತ್ಯವಾದ ರಸಗೊಬ್ಬರಗಳು ಕೊರತೆ ಹಾಗೂ ನಿರಂತರ ದರ ಏರಿಕೆಯಿಂದ ಸಂಕಷ್ಟಕ್ಕಿಡಾಗಿರುವ ರೈತ ಸಮುದಾಯಕ್ಕೆ ಬಿತ್ತನೆಯ ಬೀಜಗಳು ಹಾಗೂ ರಸಗೊಬ್ಬರಗಳು ತಾಲೂಕು ಹೋಬಳಿ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ರಸಗೊಬ್ಬರ ಕೊರತೆಯಿದ್ದು, ರೈತರ ಕೈಗೆ ನಿಲುಕದಷ್ಟು ದರ ಏರಿಕೆ ಆಗಿದ್ದು, ಬಡ ರೈತರಿಗೆ ಕರ್ನಾಟಕ ಸರ್ಕಾರಿಂದ ಹಾಗೂ ಕೃಷಿ ಇಲಾಖೆಯಿಂದ ಅನ್ಯಾಯವಾಗುತ್ತಿದೆ.

ಸಂಬಂಧಪಟ್ಟಂತಹ ಅಧಿಕಾರಿಗಳು, ಶಾಸಕರು, ಸಚಿವರು, ಮಾನ್ಯ ಮುಖ್ಯಮಂತ್ರಿಗಳು, ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೇಯ ಬೀಜ ನಿಗಧಿತ ಸಮಯದಲ್ಲಿ ನೀಡಬೇಕು ಜೂನ್‌ನಿಂದ ಮಳೆ ಪ್ರಾರಂಭವಾಗಿದ್ದು, ರೈತರು ಗೊಬ್ಬರ ಹಾಗೂ ಬೀಜಗಳ ಪರದಾಟಲಿದ್ದಾರೆ. ತಾಲೂಕು ಮಟ್ಟದಲ್ಲಿ ಬೀಜ ಸಿಗುವುದಿಲ್ಲಾ, ಹೋಬಳಿ ಮಟ್ಟದಲ್ಲಿ ಬೀಜ ಗೊಬ್ಬರ ಸಿಗುವುದಿಲ್ಲ. ಕೃಷಿ ಅಧಿಕಾರಿಗಳು ಗಮನಕೊಟ್ಟು ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಿ ಸಮರ್ಪಕ ರಸಗೊಬ್ಬರ ಪೂರೈಕೆ ಹಾಗೂ ದರ ನಿಯಂತ್ರಣಕ್ಕೆ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರಾದ ನಿಂಗರಾಜ ಬಿದರಕುಂದಿ,

ಜಿಲ್ಲಾ ಗೌರವಾಧ್ಯಕ್ಷರಾದ ಅನೀಲ ಇಕ್ಕಡೆ, ಉಪಾಧ್ಯಕ್ಷರಾಧ ಪ್ರಭು ಮಂಖಣಿ, ಪ್ರಧಾನ ಕಾರ್ಯದರ್ಶಿಯಾದ ಬಾವಾಸಾಬ ಹತ್ತರಿಕಾಳ, ಮಹಿಳಾ ಘಟಕದ ಅಧ್ಯಕ್ಷರಾದ ಜಯಶ್ರೀ ಸಾವುಕಾರ ಹಾಗೂ ಇನ್ನುಳಿದ ಸದಸ್ಯರು ರೈತ ಸಮುದಾಯ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments