Wednesday, July 1, 2026
Homeಸಾರ್ವಜನಿಕ ಧ್ವನಿಕುಡಿಯುವ ನೀರಿಗಾಗಿ ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಹೊನಗನಹಳ್ಳಿ ಗ್ರಾಮಪಂಚಾಯತಿಗೆ ಸಾರ್ವಜನಿಕರ ಮುತ್ತಿಗೆ.ಆಡಳಿತಾಧಿಕಾರಿಗೆ ಮನವಿಸಲ್ಲಿಕೆ.

ಕುಡಿಯುವ ನೀರಿಗಾಗಿ ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಹೊನಗನಹಳ್ಳಿ ಗ್ರಾಮಪಂಚಾಯತಿಗೆ ಸಾರ್ವಜನಿಕರ ಮುತ್ತಿಗೆ.ಆಡಳಿತಾಧಿಕಾರಿಗೆ ಮನವಿಸಲ್ಲಿಕೆ.


ವಿಜಯಪುರ:ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭೆಕ್ಷೇತ್ರದ ಹೊನಗನಹಳ್ಳಿ ಗ್ರಾಮಪಂಚಾಯತಿಯ ಸವನಹಳ್ಳಿ ಮತ್ತು ಹೊನಗನಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರನ್ನು ತಿಂಗಳಲ್ಲಿ ಒಂದೆರಡು ದಿವಸ ನೀರು ಬಿಡುತಿದ್ದು ರೈತಾಪಿ ವರ್ಗದ ಜನರ ಮತ್ತು ರೈತರ ಸಾಕುಪ್ರಾಣಿಗಳಿಗೆ ನೀರಿಲ್ಲದೆ ಸುಮಾರು ಆರೇಳು ತಿಂಗಳುಗಳಿಂದ ತೊಂದರೆ ಅನುಭವಿಸುತಿದ್ದಾರೆ.ಸಾರ್ವಜನಿಕರು ಪಿಡಿಓ ಹತ್ತಿರ ಹೋಗಿ ಕೇಳಿದರೆ ಪಿಡಿಓ ಸರ್ವಾಧಿಕಾರಿಯಂತೆ ಸಾರ್ವಜನಿಕರಿಗೆ ಉಡಾಪೆ ಮಾತುಗಳಿಂದ ಮತ್ತು ದೂರು ನೀಡುವುದಾಗಿ ಹೆದರಿಸುತ್ತಾ ಜನಸಾಮಾನ್ಯರನ್ನ ರೈತರನ್ನ ಗೌರವಿಸದೇ ವರ್ತಿಸುವ ವಿಷಯ ಸೇರಿದಂತೆ ಹಲವು ಬಾರಿ ಗ್ರಾಮಪಂಚಾಯತ್,ಜಿಪಂ.ಸಿಇಓ,ಡಿಸಿ ಮುಂತಾದವರಿಗೆ ಮನವಿಸಲ್ಲಿಸಲಾಗಿದ್ದರೂ ಸಹ ನೀರು ಪೂರೈಕೆ ಮಾಡದಿದ್ದರಿಂದ ದಿನಾಂಕ:01-07-2026,ರಂದು ಹೊನಗನಹಳ್ಳಿ ಮತ್ತು ಸವನಹಳ್ಳಿ ಯ ರೈತರು ಮತ್ತು ಸಾರ್ವಜನಿಕರು ತಮ್ಮ ದನ,ಕರು,ಎತ್ತುಗಳ ಸಮೇತ ಗ್ರಾಮಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಪಂಚಾಯತಿಯ ಅಭಿವೃದ್ಧಿ ಅಧಿಕಾರಿನ್ನು ಕಚೇರೆ ಒಳಗೆ ಬಿಡದಂತೆ ಘೇರಾವ್ ಮಾಡಿ ನಿಲ್ಲಿಸಿದರು.ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಪಂಚಾಯತಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸಾರ್ವಜನಿಕರ ಮನವಿ ಸ್ವೀಕರಿಸಿ ಒಂದುವಾರದೊಳಗೆ ಸರಿಪಡಿಸುವ ಭರವಸೆ ನೀಡಿದರು.ಈ ಸಮಯದಲ್ಲಿ ಬಬಲೇಶ್ವರ ಪೊಲೀಸ್ ಠಾಣೆಯ ಪೊಲೀಸರು ಸೂಕ್ತ ಬಂದುಬಸ್ತ್ ವ್ಯವಸ್ಥೆ ಗೊಳಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರೈತರೊಂದಿಗೆ ಸಹಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments