ಎಲ್ಲರೂ ಅಕ್ಷರಸ್ಥರಸ್ಥರಾಗಬೇಕು, ಪತ್ತಾರ ಮೂಡಲಗಿ: ನ,11-ತಾಲೂಕಿನ ಪಟಗುಂದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ “ನವ ಭಾರತ ಸಾಕ್ಷರತಾ” ಕಾರ್ಯಕ್ರಮಗಳು ಜರುಗಿತು. ಭಾರತವು ಜನಸಂಖ್ಯೆಯಲ್ಲಿ ವಿಶ್ವದ ಗಮನ ಸೇಳೆದಿದೆ. ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಿ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಿದಾಗ ಮಾತ್ರ ಸಾಧ್ಯ.ಎಲ್ಲರೂ ಅಕ್ಷರಸ್ಥರಾಗಬೇಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಿ.ಆರ್.ಪತ್ತಾರ ಹೇಳಿದರು.
ಅತೀ ಹೆಚ್ಚು ಗ್ರಾಮೀಣ ಭಾಗದ ಪ್ರದೇಶಗಳನ್ನು ಹೊಂದಿರುವ ಭಾರತ ದೇಶವು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಿ,ಸಾಮಾನ್ಯ ಜನರ ಜೊತೆಯಾಗಿ ಸಹಕಾರಯುತ ಸಹಬಾಳ್ವೆ ನಡೆಸುವಂತೆ ಪ್ರೇರೇಪಿಸುವ ಕೆಲಸ ನಡೆಯಬೇಕೆಂದು ಗುರುಗಳಾದ ಸಂಜೀವ ದಡ್ಡಿಮನಿ ಹೇಳಿದರು. ಸಾಕ್ಷರ ಭಾರತ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಜೊತೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಎದುರಿಸಿ ಅನಕ್ಷರಸ್ಥರ ಸಂಖ್ಯೆ ಕಡಿಮೆ ಮಾಡಿ,ಅಕ್ಷರಜ್ಞಾನ ಎಲ್ಲರಿಗೂ ತಲಪುವ ಕಾರ್ಯ ನಡೆಯಬೇಕೆಂದು ಗುರುಗಳಾದ ರಾಜೀವ ಕೊಳದೂರ ತಿಳಿಸಿದರು.
ತಾತ್ಕಾಲಿಕವಾಗಿ ನಿಯೋಜನೆಯ ಮೇರೆಗೆ ಆಗಮಿಸಿ ಶೈಕ್ಷಣಿಕವಾಗಿ ಯಶಸ್ವಿನ ಜೊತೆಗೆ ಆರ್ಥಿಕವಾಗಿ ಕಲಿಕೋಪಕರಣಗಳನ್ನು ನೀಡಿದ ಶಿಕ್ಷಕರಾದ ಶಿವಾರಾಜ ಕಾಂಬಳೆ ಹಾಗೂ ನೂತನವಾಗಿ ಆಯ್ಕೆಯಾಗಿ ಶಾಲೆಗೆ ಸಹ ಶಿಕ್ಷಕಿಯಾಗಿ ಹಾಜರಾದ ಸ್ವರ್ಣಭ ಇವರನ್ನು ಸತ್ಕರಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಜಾಯಿದಾಬಿ ಪೀರಜಾದೆ,ಎಸ್ ಡಿ ಎಮ್ ಸಿ ಅಧ್ಯಕ್ಷ ಯಲ್ಲಪ್ಪ ಪೂಜೇರ,ಬಿ ಆರ್ ಸಿ ಎಸ್.ಕೆ.ಭಜೇಂತ್ರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಕೆ.ಎಲ್.ಮೀಸಿ,ಪ್ತಧಾನ ಗುರುಗಳಾದ ಪ್ರಕಾಶ ಕಾಂಬಳೆ,ಮಹಾವೀರ ಸಲ್ಲಾಗೋಳ,ಎಮ್.ಎನ್. ಪೆಂಡಾರಿ,ಗ್ರಾಮ ಪಂಚಾಯತಿ ಕಾರ್ಯದರ್ಶಿ ಚಂದನ ಬನಕೊಡೆ,ಮಹಾಂತೇಶ ಭಜೇಂತ್ರಿ,ಎಸ್.ಆಯ್. ನದಾಪ್,ಲಕ್ಷ್ಮಿ ಕೇಳಗೇರಿ,ಜಯಶ್ರೀ ಸರ್ವಿ ಹಾಗೂ ಇನ್ನು ಅನೇಕರು ಉಪಸ್ಥಿತರಿದ್ದರು.

