ದಾವಣಗೆರೆ:ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಚನ್ನಯ್ಯ ಒಡೆಯರ್ ರವರ ಸುಪುತ್ರರು ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಾದ ಶ್ರೀ ಶಿವಕುಮಾರ್ ಒಡೆಯರ್ ರವರು ಇಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹುಲಿಕಟ್ಟೆ, ಮಾಡಲಾಗೆರೆ, ಕರೆಕಾನಹಳ್ಳಿ, ಭೇಟಿ ಮುಖಂಡರುಗಳೊಂದಿಗೆ ಮುಂಬರುವ ಲೋಕಸಭಾ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಆದ ಅಗ್ರಹಾರ ಅಶೋಕ್, ಗೊಣೇಶ್, ಕರೆಕಾನಹಳ್ಳಿ ಅಂಜಿನಪ್ಪ, ಚಂದ್ರಪ್ಪ, ಮಂಜಪ್ಪ, ನಾಗರಾಜ್ ಮತ್ತು ಇನ್ನು ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
