Saturday, December 21, 2024
Home೩೮ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ನಮ್ಮ ಕ್ಷೇತ್ರದಿಂದ ಅಗತ್ಯ ಸಹಕಾರ ನೀಡಲಾಗುವುದು: ಶಾಸಕ ಚಿಕ್ಕಮ್ಮನಹಟ್ಟಿ ಬಿ....

೩೮ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ನಮ್ಮ ಕ್ಷೇತ್ರದಿಂದ ಅಗತ್ಯ ಸಹಕಾರ ನೀಡಲಾಗುವುದು: ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ


ಜಗಳೂರು: ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ ೩೮ನೇ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ನಮ್ಮ ಸೌಭಾಗ್ಯವಾಗಿದ್ದು, ಸಮ್ಮೇಳನ ಯಶಸ್ವಿಗೆ ಎಲ್ಲಾ ರೀತಿಯ ಬೆಂಬಲ ಸಹಕಾರ ನೀಡಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೩೮ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಲಾಂಛನ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
೩೦ ವರ್ಷಗಳ ನಂತರ ದಾವಣಗೆರೆಯಲ್ಲಿ ಸಮ್ಮೇಳನ ನಡೆಯುತ್ತಿರುವುದು ವಿಶೇಷವಾಗಿದೆ. ಪತ್ರಕರ್ತರ ವೃತ್ತಿ ಜೀವನಕ್ಕೆ ಯಾವುದೇ ಭದ್ರತೆ ಇಲ್ಲದೇ ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.ವೃತ್ತಿ ಭದ್ರವಾಗಿರಬೇಕಾದರೆ ಡಾ. ಬಿ.ಆರ್ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಮುಖ್ಯವಾಗಿದೆ
ಪತ್ರಕರ್ತರ ಹೋರಾಟ, ಸಾಹಸಗಳು ವರ್ಣಿಸಲಾಗದು, ಜೀವನದ ಅಂಗು ತೊರೆದು ಕೆಲಸ ಮಾಡುವ ನಾಲ್ಕನೇ ಅಂಗ ಪತ್ರಕರ್ತರು, ಜೀವನದುದ್ದಕ್ಕೂ ಕಷ್ಟ, ಕಾರ್ಪುಣ್ಯಗಳನ್ನ ಎದುರಿಸಿ ಸಮಾಜದಲ್ಲಿ ನಡೆಯುವ ಅನ್ಯಾಯ, ಅಧರ್ಮ, ಭ್ರಷ್ಟಚಾರಗಳ ವಿರುದ್ದ ಹೋರಾಟ ಮಾಡಿ, ಎಲ್ಲರು ಕಣ್ಣು ತೆರೆಸುವ ಕೆಲಸ ಮಾಡುತ್ತಿರುವುದು ಶ್ಲಾಘನಿಯ. ಬುದ್ದ, ಬಸವ, ಅಂಬೇಡ್ಕರ್, ಗಾಂಧೀಜಿಯAತೆ ಆಗದಿದ್ದರೂ ಪರವಾಗಿಲ್ಲ, ಆದರೆ ಅವರ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದರು.
ಕ.ಕಾ.ನಿ.ಪ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ದಾವಣಗೆರೆಯಲ್ಲಿ ಜನವರಿ ಕೊನೆ ವಾರದಲ್ಲಿ ಎರಡು ದಿನ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನಿಸಲಿದ್ದು, ವಿರೋಧ ಪಕ್ಷದ ನಾಯಕ ಆರ್.ಅಶೋಕ ಎರಡನೇದಿನದ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಜಿಲ್ಲೆಯ ಸಚಿವರು, ಸಂಸದರು, ಶಾಸಕರುಗಳು, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಸೇರಿದಂತೆ ಇತರೇ ಗಣ್ಯರು ಆಗಮಿಸಲಿದ್ದಾರೆ. ರಾಜ್ಯ ವಿವಿಧ ಜಿಲ್ಲೆಗಳಿಂದ ಸುಮಾರು ೭ ಸಾವಿರಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನ ಯಶಸ್ವಿಗೆ ಶಾಸಕರು, ಮಾಜಿ ಶಾಸಕರುಗಳು ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕ.ಕಾ.ನಿ.ಪ ಸಂಘದ ತಾಲೂಕಾಧ್ಯಕ್ಷ ಜಿ.ಎಸ್ ಚಿದಾನಂದ ಮಾತನಾಡಿ, ಸಮ್ಮೇಳನಕ್ಕೆ ತಾಲೂಕಿನಿಂದ ಶಾಸಕ ಬಿ.ದೇವೇಂದ್ರಪ್ಪರ ನೇತೃತ್ವದಲ್ಲಿ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಹೆಚ್.ಪಿ.ರಾಜೇಶ್, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ರಾಜ್ಯಮಟ್ಟದ ಸಮ್ಮೇಳನಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಹಿರಿಯ ಪತ್ರಕರ್ತ ಅಣಬೂರು ಕೊಟ್ರೇಶ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಈ ಸಮ್ಮೇಳನ ಆಗುತ್ತಿರುವುದು.ಬಹಳ ಜನರು ಬರುವ ನರ‍್ಷಿಕೆ ಇದೆ.ಕಾರಣ ನಮ್ಮದು ಮಧ್ಯ ಕರ್ನಾಟಕ ಆಗಾಗಿ ಎಲ್ಲರೂ ಕೈಜೋಡಿ ಕೆಲವನ್ನು ಮಾಡೋಣ ಎಂದರು.
ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಾಟೀಲ್, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಕಾನನಕಟ್ಟೆ ಪ್ರಭು, ಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ, ನಾವು ನಿಮ್ಮ ಜೊತೆಯಾಗಿ ಇದ್ದು. ನಿಮ್ಮ ಕೆಲಸಗಳಿಗೆ ತನು ಮನ ಸಹಾಯವನ್ನು ಮಾಡಲು ಸಿದ್ದ, ಆದರೆ ಪತ್ರಕರ್ತರ ಭದ್ರತೆ ಇಲ್ಲವಾಗಿದೆ ವಿಷಾಧ ವ್ಯಕ್ತ ಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ರುದ್ದೀನ್ ಮಾತನಾಡಿ ಸಮ್ಮೇಳನಕ್ಕೆ ೬ ರಿಂದ ೭ ಸಾವಿರ ಜನ ಪತ್ರಕರ್ತರು ಸೇರುವ ನೀರಿಕ್ಷೆ ಇದೆ. ಉಪಸಮಿತಿಗಳನ್ನು ಆಯ್ಕೆ ಮಾಡಲಾಗಿದೆ. ನಿಮ್ಮ ತಾಲ್ಲೂಕಿನಲ್ಲಿ ಶಾಸಕರ ಕಡೆಯಿಂದ ಲಾಂಛನ ಬಿಡುಗಡೆ ಮಾಡಬೇಕು ಎನ್ನುವುದು ರಾಜ್ಯ ಮಟ್ಟದ ಕಮಿಟಿಯವರ ಆದೇಶವಾಗಿದೆ. ಪ್ರತಿ ತಾಲ್ಲೂಕುಗಳಲ್ಲಿ ಲಾಂಛನ ಬುಡುಗಡೆ ಮಾಡಲಾಗುತ್ತಿದೆ. ನಿಮ್ಮಗಳ ಸಹಕಾರ ಮುಖ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ.ಕಾ.ನಿ.ಪ ಸಂಘದ ಪ್ರಧಾನ ಕಾರ್ಯದರ್ಶಿ ಫಕೃದ್ದೀನ್, ಉಪಾಧ್ಯಕ್ಷ ಪ್ರಕಾಶ್, ವೀರೇಶ್, ಖಜಾಂಚಿ ಭದ್ರಿನಾಥ್, ಮಾಜಿ ಜಿ.ಪಂ ಸದಸ್ಯ ಸಿ.ಲಕ್ಷö್ಮಣ್, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಹಮದ್ ಅಲಿ, ಶೇಖರಪ್ಪ, ತಾ.ಕಾ.ನಿ.ಪ.ಸಂಘದ ಪ್ರಧಾನಕಾರ್ಯದರ್ಶಿ ಲೋಕೇಶ್, ಖಜಾಂಚಿ ಜಗದೀಶ್, ಉಪಾಧ್ಯಕ್ಷ ವಾಸಿಂ, ಎಂ.ಸಿ.ಬಸವರಾಜ್, ಸೋಮನಗೌಡ, ವೇದಮೂರ್ತಿ, ಮಂಜಯ್ಯ, ರಕೀಬ್, ಮಹಾಲಿಂಗಪ್ಪ, ರಕೀಬ್, ಉಜ್ಜಿನಪ್ಪ, ಜೀವನ್, ಹೆಚ್.ಸಿಮಹಾಲಿಂಗಪ್ಪ, ಸೇರಿದಂತೆ ಮತ್ತಿತರರಿದ್ದರು.
೦೩ ಜೆ.ಜಿ.ಎಲ್.೧) ಜಗಳೂರು ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೩೮ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಲಾಂಛನವನ್ನು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಬಿಡುಗಡೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments