ಮೂಡಲಗಿ:ಡಿ,11-ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ 50ರ ಸಂಭ್ರಮ “ಸುವರ್ಣ ಕರ್ನಾಟಕ”ನಿಮಿತ್ಯವಾಗಿ ನೀ ನಾಸಂ ನಾಟಕೋತ್ಸವದ ‘ಆಲೆಯ ಈಲಯ’ ನಾಟಕ ಪ್ರದರ್ಶನ ಕಂಡಿತು.
ಸಮಾಜದಲ್ಲಿ ಬದಲಾವಣೆಯನ್ನು ತರವುದುಗೊಸ್ಕರ ನೀ ನಾಸಂ ದಂತಹ ನಾಟಕಗಳು ಅವಶದಯವಾಗಿವೆ. ಪರಂಪರೆಯ ಬೀಡಾಗಿದೆ ಮೂಡಲಗಿ ತಾಲೂಕಿನಲ್ಲಿಯೇ ಈ ಪಟ್ಟಣವು ಹೆಸರುವಾಸಿಯಾಗಿದೆ.ಈ ಭಾಗದ ಜನರು ಇಂತಹ ಸಾಧನೆಗಳಿಗೆ ಇಂದು ಮುಂದು ನೋಡದೆ ಪ್ರೊತ್ಸಾಹ ನೀಡುತ್ತಿರುವುದು ಎಂದು ಮೂಡಲಗಿ ಘಟಕ ಕಸಾಪ ಅಧ್ಯಕ್ಷ ಡಾllಸಂಜಯ ಶಿಂಧಿಹಟ್ಟಿ ಹೇಳಿದರು.
ವಿಶೇಷ ಅತಿಥಿಯಾಗಿ ಕೆ ಎಲ್ ಇ ಸಂಸ್ಥೆಯ ನಿರ್ದೇಶಕ ರಾಜು ಮುನವಳ್ಳಿ.ಈ ಕಾರ್ಯಕ್ರಮಕ್ಕೆ ಆಗಮಿಸಿದ ಗೋಕಾಕ ತಾಲೂಕಿನ ಮಾಜಿ ಕ ಸಾ ಪ ಅಧ್ಯಕ್ಷ ಮಹಾಂತೇಶ ತಾವಂಶಿ,ನೀ ನಾಸಂ ನಾಟಕೋತ್ಸವಸ ಮುಖ್ಯಸ್ಥ ಮಂಜುನಾಥ ಹಿರೇಮಠ,ಡಾllಸಂಜಯ ಶಿಂಧಿಹಟ್ಟಿ, ರಾಜು ಮುನ್ನವಳ್ಳಿ ಮತ್ತು ಮಹಾಂತೇಶ ತಾವಂಶಿ ಇವರಿಗೆ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಬೆಳಕೂಡ ಸನ್ಮಾನಿಸಿದರು.
ಕಾರ್ಯಕ್ರಮದ ಸಂಘಟನೆಯನ್ನು ಕಲ್ಲೋಳಿಯ ಗಣ್ಯರಾದ ಶಂಕರ ಕಡಾಡಿ,ಧರೆಪ್ಪ ಖಾನಗೌಡ್ರ,ಶಿವಪ್ಪ ಬಿ.ಪಾಟೀಲ, ರಾಘವೇಂದ್ರ ಚೌಗಲಾ,ದುರ್ಗಪ್ಪ ಅಕ್ಕಿನವರ,ಜಗದೀಶ್ ಗೊರಗುದ್ದಿ,ಪ್ರಭು ಕಡಾಡಿ ಮತ್ತು ಸಂದೀಪ ಆಡಿನವರ ಉಪಸ್ಥಿತರಿದ್ದರು.
ನಾಟಕ ಪ್ರಾರಂಭಕ್ಕಿಂತ ಮೊದಲು ನಾಡಗೀತೆ ನಂತರ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾllಎಂ,ಲೀಲಾವತಿ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಂಕರ ಬೆಳಕೂಡ.ದುಂಡಯ್ಯ ಕರಗವಿಮಠ ಸ್ವಾಗತಿಸಿದರು, ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರಕಾಶ ಗರಗಟ್ಟಿ ಕಾರ್ಯಕ್ರಮ ನಿರೂಪಿಸಿದರು,ರಮೇಶ ಹೆಬ್ಬಾಳ ವಂದಿಸಿದರು.
ಎರಡು ದಿನಗಳ ನಾಟಕ ಪ್ರದರ್ಶನ ಕಂಡಿತು ಮೊದನೆದಿನ “ಹುಲಿಯ ನೆರಳು”ಮರುದಿನ “ಆಲಯ ಈಲೆಯ”ಕಲ್ಲೋಳಿ ಹಾಗೂ ಸುತ್ತಲಿನ ಹಳ್ಳಿಯ ಜನರು ಮನರಂಜನೆ ಸವಿದರು.