ದಾವಣಗೆರೆ ಮಾ.25:
ಅಹಿಂದ ವರ್ಗ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಸಂದರ್ಭದಲ್ಲಿ ಮಾನ್ಯ ಜಾತಿವಾದಿ ಶ್ಯಾಮನೂರು ಶಿವಶಂಕರಪ್ಪನವರು ತಿಪ್ಪೆಗುಂಡಿಯಲ್ಲಿ ಬಿದ್ದಿರುವ ಜಾತಿಗಣತಿ ವರದಿ ಎಂದು ಬೊಬ್ಬೆಯೊಡೆದರು ಹೀಗ ಅದೇ ತಿಪ್ಪೆಗುಂಡಿಯಲ್ಲಿ ಬಿದ್ದಿರುವ ಅನ್ಯ ಜಾತಿಯ ಮತಗಳಿಗೆ ಕೈಮುಗಿದು ನನ್ನ ಸೊಸೆಗೆ ಮತ ಹಾಕಿ ಎಂದು ಕೇಳಲು ಹೋಗುತ್ತಿದ್ದಾರೆ ಎಂದು ಅಹಿಂದ ವರ್ಗದ ಆಂಜನಪ್ಪ ಲೋಕಿ ಕೆರೆ, ಹಿಂದುಳಿದ ಜಾತಿ ಒಕ್ಕೂಟದ ಅಧ್ಯಕ್ಷ ಚನ್ನಗಿರಿ ಸಿದ್ದಪ್ಪ, ಮು ರುಡಪ್ಪ, ಅತ್ತಿಗೆರೆ ಮಹದೇವಪ್ಪ ಹಲವರು ಪ್ರಶ್ನಿಸಿದ್ದಾರೆ.
ಈ ಮನುಷ್ಯನಿಗೆ ಯಾವ ನೈತಿಕತೆ ಇದೆ,ಮೊನ್ನೆ ಶಿವಮೊಗ್ಗದಲ್ಲಿ ಯಾವುದೋ ಸಭೆಗೆ ಹೋದಾಗ ಇಲ್ಲಿ ರಾಘವೇಂದ್ರನನ್ನು ಪುನಃ ಗೆಲ್ಲಿಸಿ ಎಂದು ಹೇಳಿದ ಈತನಿಗೆ ಮಾನಮರ್ಯಾದೆ ಇದೆಯಾ ಈ ಅಪ್ಪ ಮಕ್ಕಳು ಹಾಗೂ ಅಳಿಯನ ಸಾಮ್ರಾಜ್ಯ ಒಡೆಯಬೇಕೆಂದರೆ ಈ ಬಾರಿ ಅಹಿಂದ ಬಂಧುಗಳು ಯೋಚಿಸಿ ಮತ ಹಾಕಬೇಕು, ಈ ಬಾರಿ ಈ ಅವಕಾಶವನ್ನು ತಪ್ಪಿಸಿಕೊಂಡರೆ ನಮ್ಮಂತಹ ಶತಮೂರ್ಖರು, ದಡ್ಡರು ಯಾರೂ ಇಲ್ಲಾ ನಾವು ತಪ್ಪು ಮಾಡಿ ಹೆಜ್ಜೆ ಇಟ್ಟರೆ ಪುನಃ ಅವರು ಹಾಕು ಎಂಜಲು ಕಾಸಿಗೆ ಗುಲಾಮರಾಗಿ ಬಾಳಬೇಕಾಗುತ್ತೆ ಈ ಕಾರಣಕ್ಕೆ ವಿನಯ್ ಕುಮಾರ್ ರವರನ್ನು ಸ್ವತಂತ್ರ ಅಭ್ಯರ್ಥಿಯಾಗಿಸಿ ಗೆಲ್ಲಿಸಿ ಅಹಿಂದ ವರ್ಗಕ್ಕೆ ಶಕ್ತಿ ತುಂಬಬೇಕಾದ ಅನಿವಾರ್ಯತೆ ಇದೆ ಕಾರಣ, ಅಹಿಂದ ಸಮುದಾಯದ ಶ್ರೀ, ಚನ್ನಯ್ಯ ಒಡೆಯರ್ ನಂತರ ಈ ಲೋಕಸಭಾ ಕ್ಷೇತ್ರ 1996 ರಿಂದ ಇಲ್ಲಿಯವರೆಗೆ ಅಳಿಯ ಮಾವರದೇ ಆಗಿದೆ ಇವರಿಬ್ಬರಿಗೂ ದುಡಿಯುವ ಕಾರ್ಯಕರ್ತರಿಗೆ ಯಾವುದೇ ರಾಜಕೀಯ ಸ್ಥಾನಮಾನವಿಲ್ಲ ದಯಮಾಡಿ ಯೋಚಿಸಿ ಆಲೋಚಿಸಿ ವಿನಯ್ ಕುಮಾರ್ ರವರನ್ನು ಸ್ಪರ್ಧಿಸಲು ಮನವೊಲಿಸುವ ಪ್ರಯತ್ನವನ್ನು ಅಹಿಂದ ನಾಯಕರು ಮಾಡಬೇಕು ಸಂವಿಧಾನ ಉಳಿಸಬೇಕು ಎಂಬ ಆಶಯ ನಮ್ಮದಾಗಲಿ. ಎಂದು ಅವರು ಆಗ್ರಹ ಪಡಿಸಿದ್ದಾರೆ.