Thursday, August 21, 2025
Homeರಾಜಕೀಯಲೋಕಸಭಾ ಚುನಾವಣೆಮತದಾನ ಅಧಿಕಾರಿ, ಸಿಬ್ಬಂದಿಗಳ ನೇಮಕಕ್ಕೆ ಮೊದಲ ರ್ಯಾಂಡಮೈಜೆಷನ್, ತರಬೇತಿಗೆ ತಂಡಗಳ ನಿಯುಕ್ತಿಗೆ ಜಿಲ್ಲಾಧಿಕಾರಿ ಚಾಲನೆ

ಲೋಕಸಭಾ ಚುನಾವಣೆಮತದಾನ ಅಧಿಕಾರಿ, ಸಿಬ್ಬಂದಿಗಳ ನೇಮಕಕ್ಕೆ ಮೊದಲ ರ್ಯಾಂಡಮೈಜೆಷನ್, ತರಬೇತಿಗೆ ತಂಡಗಳ ನಿಯುಕ್ತಿಗೆ ಜಿಲ್ಲಾಧಿಕಾರಿ ಚಾಲನೆ


ದಾವಣಗೆರೆ,ಮಾ.26: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ದೇಶದ ಮೂರನೇ ಹಂತ, ರಾಜ್ಯದ ಎರಡನೇ ಹಂತದಲ್ಲಿ ಮೇ 7 ರಂದು ಚುನಾವಣೆ ನಡೆಯುತ್ತಿದ್ದು ಮತದಾನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇಮಕಕ್ಕೆ ಮೊದಲ ರ್ಯಾಂಡಮೇಜೇಷನ್ ಮಂಗಳವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರು ಕೈಗೊಂಡರು.
ಜಗಳೂರು, ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ, ಹರಿಹರ, ಚನ್ನಗಿರಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರ ಹಾಗೂ ಹರಪನಹಳ್ಳಿ ತಾ; ಅರಸಿಕೆರೆ ಹೋಬಳಿ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಲಿದ್ದು 1946 ಮತಗಟ್ಟೆಗಳು ಕ್ಷೇತ್ರದಲ್ಲಿವೆ. ಪ್ರತಿ ಮತಗಟ್ಟೆಗೆ ಪಿಆರ್‍ಓ, ಎಪಿಆರ್‍ಓ, ಪಿಓ ಮತ್ತು ಒಬ್ಬರು ಗ್ರೂಪ್ ಡಿ. ಇರಲಿದ್ದು ಮತಗಟ್ಟೆಗೆ ಬೇಕಾದ ಸಿಬ್ಬಂದಿಗಿಂತಲೂ ಹೆಚ್ಚುವರಿಯಾಗಿ ಶೇ 30 ರಷ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟು ಚುನಾವಣೆಗಾಗಿ 9700 ಸಿಬ್ಬಂದಿಗಳ ಸೇವೆಯನ್ನು ಪಡೆಯಲಾಗುತ್ತಿದೆ.
ಮತದಾನಕ್ಕೆ ಅಗಶ್ಯವಿರುವ ಸಿಬ್ಬಂದಿಗಳನ್ನು ಹೆಚ್.ಆರ್.ಎಂ.ಎಸ್. ಹಾಗೂ ನಾನ್ ಹೆಚ್.ಆರ್.ಎಂ.ಸಿ. ದತ್ತಾಂಶದ ಆಧರಿಸಿ ಡೈಸ್ ಸಾಫ್ಟ್‍ವೇರ್ ಮೂಲಕ ಕರ್ತವ್ಯ ನಿರತ ಸ್ಥಳದಿಂದ ಬೇರೆ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗುತ್ತದೆ. 9700 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಿದ್ದು ಅವರು ಚುನಾವಣಾ ಕರ್ತವ್ಯ ನಿರ್ವಹಿಸುವ ವಿಧಾನಸಭಾ ಕ್ಷೇತ್ರದ ಆಯ್ಕೆಯೇ ಮೊದಲ ರ್ಯಾಂಡಮೈಜೇಷನ್ ಆಗಿರುತ್ತದೆ. ಮೊದಲ ಈ ಪ್ರಕ್ರಿಯೆಯಿಂದ ಯಾರು ಯಾವ ವಿಧಾಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವರೆಂದು ಗೊತ್ತುಪಡಿಸಿ ಅವರಿಗೆ ತರಬೇತಿ ದಿನಾಂಕವನ್ನು ನಿಗದಿ ಮಾಡಲು ಸಂಬಂಧಿಸಿದ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ಕಳುಹಿಸುವ ಪ್ರಕ್ರಿಯೆ ಇದಾಗಿದೆ.ಈ ವೇಳೆ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಎನ್.ಐ.ಸಿ ಅಧಿಕಾರಿ ಉದಯಕುಮಾರ್, ರಮೇಶ್ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments