ದಾವಣಗೆರೆ:ದಾವಣಗೆರೆ ವರದಿಗಾರರ ಕೂಟದ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಕನ್ನಡ ಪ್ರಭ ಪತ್ರಿಕೆಯ ಹಿರಿಯ ವರದಿಗಾರರು ಹಾಗೂ ವರದಿಗಾರರಕೂಟದ ಸಂಸ್ಥಾಪಕ ಸದಸ್ಯರೂ ಮತ್ತು ಒಂದು ಅವದಿಯಲ್ಲಿ ವರದಿಗಾರರಕೂಟದ ಪ್ರಧಾನಕಾರ್ಯದರ್ಶಿಯಾಗಿ ಸೇವೆಸಲ್ಲಿದ ಅನುಭವಿಯೂ ಆದಂಥ ಶ್ರೀ ನಾಗರಾಜ್ ಎಸ್.ಬಡದಾಳ್ ರವರು ದಿನಾಂಕ:16-07-2024ರಂದು ವರದಿಗಾರರಕೂಟದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಶೀಲರಾಗಿದ್ದಾರೆ.
ವರದಿಗಾರರ ಕೂಟಕ್ಕೆ ನಡೆದ ಚುನಾವಣೆಯಲ್ಲಿ ಮೂರು ಜನ ಪತ್ರಿಕಾಮಿತ್ರರು ಅಧ್ಯಕ್ಷ ಆಕಾಂಕ್ಷಿಗಳಾಗಿದ್ದು ಸ್ಪರ್ಧೆ ಮಾಡಿದ್ದರು. ನಾಗರಾಜ್ ಎಸ್ ಬಡದಾಳ್,ವರದರಾಜ್,ರವಿ ಆರ್.ಸ್ಪರ್ಧೆ ಮಾಡಿದ್ದರು ನಾರಾಜ್ ಬಡದಾಳ್ ರವರು 74 ಮತ ಪಡೆದು ವಿಜಯ ಸಾಧಿಸಿದರೆ ವರದರಾಜ್ 45 ಮತ್ತು ರವಿ 36,ಮತಗಳನ್ನು ಪಡೆದಿದ್ದಾರೆ.
ನೂತನ ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಪತ್ರಕರ್ತರ ಹಿತಕಾಪಾಡಲಿಎಂದು ಆಶಿಸುತ್ತಾ ಪವಿತ್ರಪ್ರಜಾ ಕನ್ನಡ ದಿನಪತ್ರಿಕೆ ದಾವಣಗೆರೆ ಹಾಗೂ ಸಹಾಯವಾಣಿ ಕನ್ನಡ ದಿನಪತ್ರಿಕೆ ಬೆಂಗಳೂರು ಸಂಪಾದಕರು ಹಾಗೂ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ನವದೇಹಲಿಯ ರಾಷ್ಟ್ರೀಯ ಮಂಡಳಿ ಸದಸ್ಯರಾದ ಎಸ್.ಕೆ.ಒಡೆಯರ್ ಹಾಗೂ ಬಳಗದಿಂದ ಅಭಿನಂದನೆಗಳು.