Saturday, December 21, 2024
Homeರಾಜಕೀಯಉದ್ಘಾಟನೆ ಪೂರ್ವದಲ್ಲೇ ಅಂಗನವಾಡಿ ಕಟ್ಟಡಗಳು ಕಳಪೆ ಕಾಮಗಾರಿಯಿಂದ ಸೊರುತ್ತಿವೆ!!ಶಾಸಕ ಬಸವಂತಪ್ಪ ತರಾಟೆ

ಉದ್ಘಾಟನೆ ಪೂರ್ವದಲ್ಲೇ ಅಂಗನವಾಡಿ ಕಟ್ಟಡಗಳು ಕಳಪೆ ಕಾಮಗಾರಿಯಿಂದ ಸೊರುತ್ತಿವೆ!!ಶಾಸಕ ಬಸವಂತಪ್ಪ ತರಾಟೆ

ದಾವಣಗೆರೆ: ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಿ ಎರಡು ತಿಂಗಳು ಕಳೆದಿಲ್ಲ. ಉದ್ಘಾಟನೆ ಪೂರ್ವದಲ್ಕಿ ಕಳಪೆ ಕಾಮಗಾರಿಯಿಂದ ಕಟ್ಟಡಗಳು ಸೊರುತ್ತಿವೆ. ನೀವು ನಿರ್ಮಿಸಿರುವ ಕಟ್ಟಡ ಐದು ವರ್ಷ ಬಾಳಿಕೆ ಬಾರದಂತಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹೂವಿನಮಡು, ಕಂದಗಲ್ಲು ಗ್ರಾಪಂ ವ್ಯಾಪ್ತಿಯ ಗಿಡ್ಡೆನಹಳ್ಳಿ ಗ್ರಾಮದಲ್ಲಿ ತಲಾ ೧೭ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಪೂರ್ವದಲ್ಲಿ ಭಾನುವಾರ ಅಂಗನವಾಡಿ ಕೇಂದ್ರಗಳ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದರು.
ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ೧೭ ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಲಾಗಿದೆ. ಅಡುಗೆ ಕೊಠಡಿ, ದಾಸ್ತಾನು ಕೊಠಡಿ ಕಳಪೆಯಾಗಿವೆ. ಸರಿಯಾಗಿ ಪ್ಲಾಸ್ಟಿಂಗ್ ಮಾಡಿಲ್ಲ. ಮಳೆ ನೀರಿನಿಂದ ಸೊರುತ್ತಿವೆ. ಕಿಟಿಕಿಗಳು ಸರಿಯಿಲ್ಲ, ಸುಣ್ಣಬಣ್ಣ ಸರಿಯಾಗಿ ಬಳಿದಿಲ್ಲ, ಕಟ್ಟಡದಿಂದ ನೀರು ತೊಟ್ಟಿಕುತ್ತಿವೆ. ಇಲ್ಲಿ ಕಲಿಯುವ ಮಕ್ಕಳ ಭವಿಷ್ಯದ ಕತೆ ಏನು ಎಂದು ಕಿಡಿಕಾರಿದರು.
ದೂರವಾಣಿ ಮೂಲಕ ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರನ್ನು ಸಂಪರ್ಕಿಸಿದ ಶಾಸಕರು, ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಹೊಸದಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ನಿರ್ಮಿಸಿರುವ ಕಟ್ಟಡಗಳು ಐದು ವರ್ಷ ಬಾಳಿಕೆ ಬರುವುದಿಲ್ಲ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಸರ್ಕಾರ ಅಂಗನವಾಡಿ ಕೇಂದ್ರಗಳ ಕಟ್ಟಡವಾಗಲಿ ಅಥವಾ ಯಾವುದೇ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲಿ. ಅದು ನೀವು ತೆರಿಗೆ ಕಟ್ಟಿದ ಹಣದಿಂದ ನಿರ್ಮಿಸಲಾಗುತ್ತದೆ. ನೀವು ಗುಣಮಟ್ಟದ ಕಟ್ಟಡ ನಿರ್ಮಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಕಳಪೆ ಕಾಮಗಾರಿ ಕಂಡು ಬಂದರೆ ಕೂಡಲೇ ನಮ್ಮ ಗಮನ ತಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಿಡಿಪಿಒ ಅಭಿಕುಮಾರ್, ತಾಪಂ ಇಒ ರಾಮ್‌ಭೋವಿ, ಪಿಡಿಒ ವನಿತಾ, ಪಿಎಸ್‌ಐ ಸಂಜೀವ್‌ಕುಮಾರ್, ಜಾಗ ದಾನಿ ಡಾ.ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯ ಅಂಜಿನಪ್ಪ, ಸುರೇಶ್, ಅಂಜಿನಪ್ಪ ಡಾ.ಪುಷ್ಪ ಮಲ್ಲಿಕಾರ್ಜುನ್, ಇಂದ್ರಮ್ಮ, ಮಾಲಾ ರವಿ, ವಿಜಯ್‌ಕುಮಾರ್ ಸೇರಿದಂತೆ ಇನ್ನಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments