Saturday, December 21, 2024
Homeಆರೋಗ್ಯಹಾಯಹರಿಗೋಲಾದೆ ರಾಯಬೇರಿಗೆಯಾದೆ ರಾಯರಕಾಲಿಗೆ ಮುಳ್ಳೊತ್ತುವಾದೆ ನೀನಾರಿಗಾದೆಯೋ ಎಲೆಮಾನವ?

ಹಾಯಹರಿಗೋಲಾದೆ ರಾಯಬೇರಿಗೆಯಾದೆ ರಾಯರಕಾಲಿಗೆ ಮುಳ್ಳೊತ್ತುವಾದೆ ನೀನಾರಿಗಾದೆಯೋ ಎಲೆಮಾನವ?

ವಿಜಯಪುರ:ಇದು ನನ್ನ ತೀರಾ ಖಾಸಗಿ ವಿಷಯ. ಹೇಳಬಾರದು ಅಂದುಕೊಂಡಿದ್ದೆ. ಆದರೂ ಎಲ್ಲರಿಗೂ ಗೊತ್ತಿರಲಿ ಅಂತ ಪ್ರಗತಿಪರ ಚಿಂತಕ,ಲೇಖಕ ಹಿರಿಯಪತ್ರಕರ್ತರಾದ ಮಿತ್ರ ಅನಿಲ್ ಹೊಸಮನಿಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಆ ಪೋಸ್ಟ್ ಮಾಡಿದ್ದು ಸಾರ್ವಜನಿಕವಾಗಿ ಜಾಗ್ಋತಿಯೊಂದನ್ನು ಮೂಡಿಸಿದಂತಾಗಿದೆ.ಅದು ಹೀಗಿದೆ

ಮೊನ್ನೆ ಆಗಷ್ಟ್ 10 ರಂದು ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯಕ್ಕೆ ನನ್ನ ದೇಹದಾನ ಮಾಡಿದ್ದೇನೆ. ಈ ಸಮಯದಲ್ಲಿ ನನ್ನ ಮಗ ಸಂಘರ್ಷ ನನ್ನ ಜೊತೆಗಿದ್ದು ಸಹಕರಿಸಿದ್ದಾನೆ.

ನನ್ನ ಮರಣದ ನಂತರ ಆರು ತಾಸುಗಳ ಒಳಗಾಗಿ ನನ್ನ ಪಾರ್ಥಿವ ಶರೀರವನ್ನು ಅವರಿಗೆ ಒಪ್ಪಿಸುವುದು ನನ್ನ ಕುಟುಂಬದ ಜವಾಬ್ದಾರಿ.

ನಾನು ಬೇರೆ ಯಾವುದೇ ಊರಲ್ಲಿ ಸತ್ತರೆ, ನೋಡಿದವರು ನನ್ನ ಮೃತದೇಹವನ್ನು ಬಿ.ಎಲ್.ಡಿ.ಇ. ವೈದ್ಯಕೀಯ ಮಹಾವಿದ್ಯಾಲಯಕ್ಕೆ ತಿಳಿಸುವ ಕೃಪೆ ಮಾಡಬೇಕೆಂದು ನನ್ನ ಮನವಿ.

ಮರಣದ ನಂತರ ಯಾತಕ್ಕೂ ಪ್ರಯೋಜನವಿಲ್ಲದ ಈ ದೇಹವು ವೈದ್ಯಕೀಯ ಅಧ್ಯಯನಕ್ಕಾದರೂ ಉಪಯೋಗವಾದರೆ ಸಾಕು.

‘ದೇಹದಾನ’ ಮಾಡುವ ಇಚ್ಛೆಯುಳ್ಳವರು ಬಿ.ಎಲ್.ಡಿ.ಇ. ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯದ ಅಂಗರಚನಾಶಾಸ್ತ್ರ (Anatomy) ವಿಭಾಗವನ್ನು ಸಂಪರ್ಕಿಸಬಹುದು.

ಕಚೇರಿ ಸಮಯ:
ಮುಂಜಾನೆ 9-00 ಗಂಟೆಯಿಂದ 1-00 ಗಂಟೆಯ ವರೆಗೆ.

ಮದ್ಯಾಹ್ನ 3-00 ಗಂಟೆಯಿಂದ ಸಂಜೆ 5-00 ಗಂಟೆಯ ವರೆಗೆ

ಕಚೇರಿ ದೂರವಾಣಿ: 08352-262770
ವಿಸ್ತರಣೆ- 2211

  • ಡಾ. ಆರ್.ಎಸ್.ಬುಲಗೌಡ 9845130231
  • ಐ.ಬಿ. ಬಾಗೋಜಿ
    9964669355
  • ಆರ್.ಪಿ. ಮೆಳ್ಳಿ
    9845434534

ದೇಹದಾನ ಮಾಡುವುದಕ್ಕೆ ಅಗತ್ಯ ದಾಖಲೆಗಳು:

  • ಆಧಾರ ಕಾರ್ಡ
  • ಮೂರು ಪಾಸ್ ಪೋರ್ಟ ಮತ್ತು ಮೂರು ಸ್ಟಾಂಪ್ ಸೈಜ್ ಫೋಟೋ
  • ಕುಟುಂಬದ ಒಬ್ಬರು ಸದಸ್ಯರ ಸಹಿ… ಹೀಗೆ ಅವರು ಜನರಿಗೆ ಉತ್ತಮ ಸಂದೇಶ ರವಾನಿಸಿದ್ದಾರೆ.ಅನಿಲ್ ಹೊಸಮನಿಯವರು ಸದಾ ಕ್ರಿಯಾಶೀಲ ಚಿಂತಕ ಇಂಥವರಿಂದ ಸಮಾಜದಲ್ಲಿ ಸದಾ ಜಾಗೃತಿ ಮೂಡುತ್ತದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments