Saturday, December 21, 2024
Homeಸಾರ್ವಜನಿಕ ಧ್ವನಿಅಂಗನವಾಡಿ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿಯು "ಗ್ರಾಚ್ಯುಟಿ ಸೌಲಭ್ಯ,ಕನಿಷ್ಠ ವೇತನ,ಅಂಗನವಾಡಿ ಕೇಂದ್ರಗಳಲ್ಲಿ LKG - UKG...

ಅಂಗನವಾಡಿ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿಯು “ಗ್ರಾಚ್ಯುಟಿ ಸೌಲಭ್ಯ,ಕನಿಷ್ಠ ವೇತನ,ಅಂಗನವಾಡಿ ಕೇಂದ್ರಗಳಲ್ಲಿ LKG – UKG ಪ್ರಾರಂಭ,ಗುಣಮಟ್ಟದ ಪೌಷ್ಟಿಕ ಆಹಾರ” ಮುಂತಾದ ಬೇಡಿಕೆ ಒತ್ತಾಯಿಸಿ ವಿಧಾನಸೌಧ ಚಲೋ.

ಸರ್ವೋಚ್ಚ ನ್ಯಾಯಲಯವು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ನಿವೃತ್ತಿ ಉಪಧನ (ಗ್ರಾಚ್ಯುಟಿ ಸೌಲಭ್ಯ) ನೀಡುವ ಕುರಿತು ಆದೇಶ ಮಾಡಿರುತ್ತದೆ. ಸದರಿ ಆದೇಶದ ಪ್ರಕಾರ 1975 ರಿಂದ ಸೇವೆ ಸಲ್ಲಿಸಿ ಕಾಲಕಾಲಕ್ಕೆ ನಿವೃತ್ತಿಯಾದ ದಿನಾಂಕಗಳಿಗನುಗುಣವಾಗಿ ಗ್ರಾಚ್ಯುಟಿ ನೀಡುವಂತೆ ದಿನಾಂಕ 25.04.2022ರಂದು ಗುಜರಾತ್ ಸಂಬಂಧಿತ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ 01.04.2023 ರಿಂದ ನಿವೃತ್ತಿಯಾದವರಿಗೆ ಅನ್ವಯವಾಗುವಂತೆ ಗ್ರಾಚ್ಯುಟಿ (ಉಪಧನ) ನೀಡುವ ಕುರಿತು ಆದೇಶಿಸಿರುವುದು ಸಮಂಜಸವಲ್ಲ. ಆದ್ದರಿಂದ ಈಗ ಮಾಡಿರುವ ಆದೇಶವನ್ನು ತಿದ್ದುಪಡಿ ಮಾಡಿ ಈ ಹಿಂದೆ ನಿವೃತ್ತರಾದ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ (ಯಾವುದೇ ಷರತ್ತು ಅಥವಾ ಸೀಲಿಂಗ್‌ಗೆ ಒಳಪಡಿಸದೆ) ಗ್ರಾಚ್ಯುಟಿ ನೀಡುವ ತಿದ್ದುಪಡಿ ಆದೇಶ ಮಾಡಬೇಕು.
ಗೌರವಧನ ಹೆಚ್ಚಿಸಿ (ಕನಿಷ್ಠ ವೇತನ): ಇಡುಗಂಟು ನೀಡುವ ಯೋಜನೆ ಜಾರಿಗೆ ಆಗ್ರಹ ಇಚಿದಿನ ಬೆಲೆ ಏರಿಕೆಗೆ ಅನುಗುಣವಾಗಿ ಈಗ ನೀಡುತ್ತಿರುವ ಗೌರವ ಸಂಭಾವನೆಯಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಯರಿಗೆ ಕನಿಷ್ಠ ವೇತನ ನಿಗದಿಗೊಳಿಸಿ ಜಾರಿಗೊಳಿಸಬೇಕು ಹಾಗೂ ಅಲ್ಲಿಯವರೆಗೆ ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ನೀಡಲಾಗಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ರೂ.15,000/- ಹಾಗೂ ಸಹಾಯಕಿಯರಿಗೆ ರೂ.10000/- ಗೌರವ ಧನ ಹೆಚ್ಚಿಸುವ ಭರವಸೆಯಂತೆ (6ನೇ ಗ್ಯಾರಂಟಿಯಂತೆ) ಗೌರವಧನ ಹೆಚ್ಚಿಸಬೇಕೆಂದು ಒತ್ತಾಯಿಸಿ ಮತ್ತು ನಿವೃತ್ತರಾದವರಿಗೆ ರೂ.3 ಲಕ್ಷ ಇಡುಗಂಟು ನೀಡುವ ಯೋಜನೆಯನ್ನು ಜಾರಿಗೊಳಿಸಬೇಕೆಂದು ಅಂಗನವಾಡಿ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಪಡಿಸುತ್ತದೆ.
ಅಂಗನವಾಡಿ ಕೇಂದ್ರಗಳಲ್ಲಿಯೇ LKG – UKG ಪ್ರಾರಂಭಿಸುವ ಕುರಿತು :ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಅಂಗನವಾಡಿ ಕೇಂದ್ರಗಳಲ್ಲಿಯೇ LKG – UKG ಪ್ರಾರಂಭಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿರುವುದನ್ನು ಹಾಗೂ ಅದನ್ನು ಕಾರ್ಯಗತಗೊಳಿಸಲು ಶಿಕ್ಷಣ ತಜ್ಞರು, ವಿಷಯ ಪರಿಣಿತರು, ಅಂಗನವಾಡಿ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಲು ಸೂಚಿಸಿರುವುದನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಒಕ್ಕೊರಲಿನಿಂದ ಸ್ವಾಗತಿಸುತ್ತದೆ. ಹಾಗೂ ಕೂಡಲೇ ತಜ್ಞರ ಸಮಿತಿ ರಚಿಸಲು ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಆಗ್ರಹಿಸುತ್ತೇವೆ. ಇದರೊಂದಿಗೆ ಅಂಗನವಾಡಿಗಳಲ್ಲಿ LKG – UKG ಪ್ರಾರಂಭಿಸಲು ಅಗತ್ಯವಾದ ಅನುದಾನ ಬಿಡುಗಡೆ, ಕೊಠಡಿಗಳು, ಪಾಠ-ಪೀಠೋಪಕರಣಗಳು ಸೇರಿದಂತೆ ಮೂಲಭತ ಸಿದ್ಧತೆಗಳನ್ನು ಮಾಡಬೇಕು. LKG – UKG ಮಕ್ಕಳಿಗೆ ಬೋದಿಸಬೇಕಾದ ಪಠ್ಯಗಳನ್ನು ಸಿದ್ಧಪಡಿಸಿ ಅಧೀಕೃತ ಮತ್ತು ಅಂಗೀಕೃತ ಪುಸ್ತಕಗಳನ್ನು ಮುದ್ರಿಸಿ ವಿತರಿಸಲು ಕ್ರಮವಹಿಸಬೇಕು ಹಾಗೂ ಎಲ್ಲಾ ಮಕ್ಕಳಿಗೂ ಸಮವಸ್ತ್ರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕೆ.ಕೆ.ಆರ್.ಡಿ.ಬಿ. ವತಿಯಿಂದ ತೆರೆಯಲಾಗಿರುವ ಎಲ್ಲಾ 1008 LKG – UKG ತರಗತಿಗಳನ್ನು ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ವರ್ಗಾಯಿಸಬೇಕು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅಡಿಯಲ್ಲಿ (ಕಟ್ಟಡ ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಬಿಬಿಎಂಪಿ) ಶಿಶುಪಾಲನಾ ಕೇಂದ್ರಗಳು ಹಾಗೂ ಶಾಲಾ ಪೂರ್ವ ತರಗತಿಗಳು ತೆರೆಯುವ ಕ್ರಮಗಳನ್ನು ಕೈ ಬಿಟ್ಟು ಮೂರು ವರ್ಷದಿಂದ ಆರು ವರ್ಷದ ವಯೋಮಾನದ ಮಕ್ಕಳ ಆಹಾರ, ಆರೈಕೆ ಹಾಗೂ ಶಾಲಾ ಪೂರ್ವ ಶಿಕ್ಷಣವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲೇ ನಡೆಸಲು ಕ್ರಮ ಕೈಗೊಳ್ಳಬೇಕು.
ಗುಣಮಟ್ಟದ ಪೌಷ್ಟಿಕ ಆಹಾರ ಸರಬರಾಜು ಮಾಡಲು ಆಗ್ರಹ:ಕಾರ್ನಾಟಕ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿರುವ ಪೌಷ್ಠಿಕ ಆಹಾರವು ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿದೆ ಎಂಬುದಾಗಿ ವ್ಯಾಪಕವಾಗಿ ದೂರುಗಳು ಬರುತ್ತಿದ್ದು, ಆಹಾರದಲ್ಲಿ ಗುಣಮಟ್ಟ ಸರಿ ಇಲ್ಲದಿರುವುದರಿಂದ ಫಲಾನುಭವಿಗಳು ಸಹ ಸದರಿ ಪೌಷ್ಠಿಕ ಆಹಾರವನ್ನು ಸೇವಿಸುತ್ತಿಲ್ಲ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ನಿಯಮಾವಳಿಗಳ ಅನುಸಾರ ಸ್ಥಳೀಯವಾಗಿ ದೊರಕುವ ಪೌಷ್ಠಿಕ ಆಹಾರ ನೀಡುವ ನಿಯಮ ಇದ್ದರೂ ಅದನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಆಹಾರ ಸರಬರಾಜು ಮಾಡಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದಾರೆಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ವ್ಯವಸ್ಥೆಯನ್ನು ಬದಲಾಯಿಸಿ ಪಾರದರ್ಶಕ ಉತ್ತಮ ಗುಣಮಟ್ಟದ ಪೌಷ್ಠಿಕ ಆಹಾರ ಸರಬರಾಜು ಮಾಡಲು ಈ ಹಿಂದೆ ಇದ್ದಂತಹ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಸಮಿತಿ ರಚಿಸುವ ಮೂಲಕ ಆಹಾರದ ಗುಣಮಟ್ಟವನ್ನು ಕಾಪಾಡಬೇಕೆಂದು ಆಗ್ರಹ.
ನೇಮಕಾತಿ ವಯೋಮಿತಿ ಸಡಿಲಿಸಿ:ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಆಯ್ಕೆ ಮಾಡುವಾಗ ಈಗಿರುವ ವಯೋಮಿತಿಯನ್ನು ಸಡಿಲಿಸಿ ಎಸ್.ಸಿ.ಎಸ್.ಟಿ. ಅಭ್ಯರ್ಥಿಗಳಿಗೆ 40 ವರ್ಷ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಹೆಚ್ಚಳ ಮಾಡಬೇಕು.
ಈ ಎಲ್ಲಾ ಅಂಶಗಳನ್ನು ರಾಜ್ಯ ಸರ್ಕಾರ ಕುಲಂಕುಶವಾಗಿ ಪರಿಶೀಲಿಸಿ ಇಲಾಖೆಯಲ್ಲಿರುವ ಇನ್ನೂ ಹತ್ತುಹಲವು ಸಮಸ್ಯೆಗಳು, ಲೋಪದೋಷಗಳನ್ನು ಸರಿಪಡಿಸಿ ಬಗೆಹರಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಒತ್ತಾಯಿಸಿ.
ಕಳೆದ ಐದು ದಶಕಗಳಿಂದ ರಾಜ್ಯದಲ್ಲಿ ಅಂಗನವಾಡಿ ಸಂಘಟನೆಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸೌಹರ್ದತೆ ಮತ್ತು ಸಮನ್ವಯತೆಯಿಂದ ಅಭಿವೃದ್ಧಿ ಕಾರ್ಯನಿರ್ವಹಿಸಿಕೊಂಡು ಬರಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಅಧಿಕಾರಿಗಳು ಸಭೆ ಸಮಾಲೋಚನೆ ನಡೆಸುವ ಪ್ರತೀತಿಯನ್ನು ಕೈಬಿಟ್ಟಿದ್ದು ಇದನ್ನು ಸರಿಪಡಿಸಿ ಆಗಿಂದಾಗ್ಗೆ ಉದ್ಭವಿಸುವ ಸಮಸ್ಯೆಗಳ ಪರಿಹಾರಕ್ಕೆ ಸಮಾಲೋಚನೆ ಸಭೆಗಳನ್ನು ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸುತ್ತೇವೆ.
‘ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಸಂಘಟನೆಯಜಿ. ಉಮ್ಮದ್ ಅಧ್ಯಕ್ಷರು,
ಎಂ. ಜಯಮ್ಮ,ಜೆ. ಆರ್. ಶಿವಶಂಕರ್
ಅಧ್ಯಕ್ಷರು.ಬಿ.ವಿ. ನಾಗರತ್ನ ಪ್ರಧಾನ ಕಾರ್ಯದರ್ಶಿ,ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ(TUCC)ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು (AITUC)ಕೆ. ಸೋಮಶೇಖರ ಯಾದಗಿರಿ ಅಧ್ಯಕ್ಷರು,ಎಂ. ಉಮಾಮಡೆ ಪ್ರಧಾನ ಕಾರ್ಯದರ್ಶಿ,ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ (AJUTUC)
వి. నిభంబాబాంబ ಪ್ರಧಾನ ಕಾರ್ಯದರ್ಶಿ,ಪಿ. ಶಿವಣ್ಣಾಧ್ಯಕ್ಷರು,ಬಿ. ಪ್ರೇಮಾ ಅಧ್ಯಕ್ಷರು,
ಕೆ.ಸಿ. ಸಂತೋಷ್, ಸಂಸ್ಥಾಪಕ ಅಧ್ಯಕ್ಷರು
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕರ್ನಾಟಕ ರಾಜ್ಯ ಅಂಗನವಾಡಿ ಶಿಕ್ಷಕಿಯರ ಮತ್ತು ಸಹಾಯಕಿಯರ
ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿ
(KRASSM),ಅಧ್ಯಕ್ಷರು ಉಮಾಮಣಿ,
ಪ್ರಧಾನ ಕಾರ್ಯದರ್ಶಿ,ಮುಂತಾದ ಸಂಘಟಕರು ಸರ್ಕಾರದ ಗಮನಸೆಳೆಯಲು ವಿಧಾನಸೌಧ ಚಲೋ ಚಳುವಳಿಯನ್ನು ದಿನಾಂಕ:19-09-2024,ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ ಸೇರಲಿದ್ದಾರೆಂದು ಪ್ರಕಟನೆಯಲ್ಲಿ ದಾವಣಗೆರೆ ಜಿಲ್ಲೆಯ ಭಾರತ್ ಕಮ್ಮ್ಯೂನಿಷ್ಟ ಪಕ್ಷದ ಕಾರ್ಯದರ್ಶಿ ಆವರಗೆರೆ ಚಂದ್ರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments