ಆವಣಗೆರೆ:ಮಾಜಿ ಶಾಸಕ ಕಾಂ ಪಂಪಾಪತಿ ಮತ್ತು ಮಾಜಿ ನಗರಸಭಾ ಅಧ್ಯಕ್ಷರಾಗಿದ್ದ ಕಾಂ ಹೆಚ್ ಕೆ ರಾಮಚಂದ್ರಪ್ಪನವರ ಒಡನಾಡಿಗಳಾಗಿದ್ದ ಮತ್ತು ಕಮ್ಯುನಿಸ್ಟ್ ಪಕ್ಷದ ಮುಖಂಡರಾಗಿದ್ದ ಕಾಂ ವಿ ಟಿ ಸುಂದರ್ ರವರು ಇಂದು ದಾವಣಗೆರೆ ಎಸ್ ಓ ಜಿ ಕಾಲೋನಿಯ ತಮ್ಮ ನಿವಾಸದಲ್ಲಿ ಮೃತರಾಗಿದ್ದಾರೆ
ನಿನ್ನೆ ರಾತ್ರಿ 11:45 ಕ್ಕೆ ಉಸಿರಾಟದ ತೊಂದರೆಯಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮೃತರಾಗಿದ್ದಾರೆ ಎಂದು ಸುಂದರ್ ಅವರ ಪುತ್ರಿ ಯುಗಶ್ರೀ ತಿಳಿಸಿದ್ದಾರೆ.
ಕಾಂ ಪಂಪಾಪತಿಯವರು ಶಾಸಕರಾಗಿದ್ದಾಗ ಅವರಿಗೆ ಸಹಾಯಕರಾಗಿ ದಾವಣಗೆರೆ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಜೊತೆಗೆ ಪಕ್ಷದ ದಾವಣಗೆರೆ ಕಚೇರಿಯನ್ನು ನಿರ್ವಹಿಸುತ್ತಿದ್ದರು.
ಹಿರಿಯ ಪತ್ರಕರ್ತ ಎಡಪಂಥಿಯ ವಿಚಾರಧಾರೆಯುಳ್ಳವರು,ಪ್ರಗತಿಪರಚಿಂತಕ ಕಾಮ್ರೇಡ್ ವಿ.ಟಿ.ಸುಂದರ್ ಇಹಲೋಕ ತ್ಯಜಿದ್ದಾರೆ.ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಅವರು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದೇಹದಾನ ಮಾಡಿದ್ದಾರೆ.ದಿನಾಂಕ:28-10-2024ರಂದು ಎಸ್.ಓ.ಜಿ.ಕಾಲೋನಿಯ ಅವರ ಸ್ವ ಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.ಆರ್.ಹೆಚ್.ಬೃಂದಾವನದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತದೆ.
ಸುಂದರ್ ರವರ ನಿಧನಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ.