ದಾವಣಗೆರೆ:ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕ ಅವರು ನಗರಪಾಲಿಕೆಯ ಸಿಬ್ಬಂದಿಯೊಂದಿಗೆ ಸದಸ್ಯರೊಂದಿಗೆ ಜನಪ್ರತಿನಿಧಿಗಳೊಂದಿಗೆ ಉತ್ತಮ ಸೌಹಾರ್ಧತೆಯಿಂದ ಅಧಿಕಾರದ ದರ್ಪವಿಲ್ಲದೆ ಸಮಾನ ದೃಷ್ಟಿಯಿಂದ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸ್ಲಾಘನೀಯ.
ಅದೇ ರೀತಿ ಜನಪ್ರತಿನಿಧಿಗಳೂ ಪಾಲಿಕೆಯ ನೌಕರರೂ ಆಯುಕ್ತರಿಗೆ ಉತ್ತಮ ಸಹಕಾರ ನೀಡುತ್ತಿರುವುದರಿಂದ ನಗರದಲ್ಲಿ ಸಾರ್ವಜನಿಕರ ಹಲವು ಕೆಲಸಕಾರ್ಯಗಳ ವಿಳಂಬ ಹೊರತುಪಡಿಸಿದರೆ ನಗರ ಶುಚಿತ್ವ ಗಳು ಚನ್ನಾಗಿ ನಡೆಯುತ್ತವೆ.
ಇತ್ತೀಚೆಗೆ ಅವರು 1948ರಿಂದ2000ನೇ ಇಸ್ವಿಯವರೆಗೆ ದಾಖಲೆಗಳನ್ನು ತಿದ್ದುಪಡಿ ಮಾಡಿ ಪಾರ್ಕು,ಸಿಎ ನಿವೇಶನ ಸೇರಿದಂತೆ ಪಾಲಿಕೆಯ ಆಸ್ತಿಪಾಸ್ತಿಯನ್ನು ಆಕ್ರಮಿಸಿಕೊಂಡ ಸುಮಾರು 40ಕೋಟಿ ಮೌಲ್ಯದಷ್ಟು ಪಾಲಿಕೆಯ ಆಸ್ತಿಯನ್ನು ಪತ್ತೆಮಾಡಿ ಪಾಲಿಕೆಗೆ ವಶಪಡಿಸಿಕೊಳ್ಳಲಾಗಿದು ಹೇಳಿದ್ದಾರೆ ಇದು ಹೆಮ್ಮೆಯವಿಷಯ.ಇಂಥಾ ಅಧಿಕಾರಿಗಳು ಪ್ರತಿ ಇಲಾಖೆಯಲ್ಲಿದ್ದರೆ ಅಕ್ರಮನಕಾರರ ಸದ್ದು ಅಡಗುತ್ತದೆ.ಇದೇ ವಿಷಯವಾಗಿ ನಾನು ಈ ಹಿಂದೆನೇ ಅರ್ಜಿಕೊಟ್ಟಿದ್ದೆ.ಪಾಲಿಕೆಯ ವಾಣಿಜ್ಯಮಳಿಗೆ,
ಖುಲ್ಲಾ ಜಾಗಹಾಗೂ ಇತರೆ ಕಟ್ಟಡಗಳನ್ನು ಪಿತ್ರಾರ್ಜಿತ ಆಸ್ತಿಯಂತೆ ಒಳಬಾಡಿಗೆ ಕೊಟ್ಟು ಅಕ್ರಮ ಹಣ ಸಂಪಾದಿಸ್ತಾರೆ.ನೈಜ ಬಡ ವ್ಯಾಪಾರಸ್ತರಿಗೆ ಟೆಂಡರ್ ಗಳಲ್ಲಿ ಕಾಂಪಿಟ್ ಮಾಡಲು ಆಗಲ್ಲಾ ಕಾರಣ ಹಣವಂತರು ಜಾತಿವಾದಿಗಳು ರಾಜಕೀಯ ಚೇಲಾಗಳು ತಮ್ಮ ಪ್ರಭಾವ ಉಪಯೋಗಿಸಿ ಟೆಂಡರ್ ತಮ್ಮಂತೆ ಮಾಡಿಕೊಂಡು ಅಲ್ಲಿ ಅವರು ಯಾವ ವ್ಯಾಪಾರನೂ ಮಾಡಲ್ಲಾ ಟ್ರೇಡ್ ಲೈಸನ್ಸೂ ಮಾಡಸದೆ.ಇತರ ಬಡ ವ್ಯಾಪಾರಸ್ತರಿಗೆ ಹೆಚ್ಚಿನ ಬಾಡಿಗೆ ಪಡೆದು ಅಕ್ರಮ ವ್ಯವಹಾರ ಮಾಡ್ತಿರುವವರನ್ನು ಪತ್ತೆ ಹಚ್ಚಿಕ್ರಮಕೈಗೊಳ್ಳಲು ಪತ್ರ ಬರೆದಿದ್ದೆ ಅದಕ್ಕೆ ಅವರಿಂದ ಉತ್ತರ ಬಂದಿಲ್ಲಾ ಇರಲಿ ಈಗ ಅದರ ಅಗತ್ಯ ಇಲ್ಲಾ.
ಆದರೆ ಆಯುಕ್ತರು ಮತ್ತು ಮೇಯರ್ ರವರು ಈಗಲೂ ಕೂಡ ಆಕ್ರಮಿತರ ಹೆಸರು ಬಹಿರಂಗ ಪಡಿಸದೆ ಮತ್ತು ದಾಖಲೆ ತಿದ್ದುಪಡಿಮಾಡಿ ಸರ್ಕಾರಕ್ಕೆ ದ್ರೋಹಬಗೆದ ಅಧಿಕಾರಿಗಳ ಹೆಸರನ್ನು ಬಹಿರಂಗ ಪಡಿಸದೆ ಇರುವುದು ಸಾರ್ವಜನಿಕರಿಗೆ ಅನುಮಾನ ಹುಟ್ಟುಹಾಕಿದೆ.ದಯವಿಟ್ಟು ತಮ್ಮ ಕಾರ್ಯಸಾಧನೆಗೆ ಅಭಿನಂದಿಸುತ್ತಾ ಸಾರ್ವಜನಿಕರ ಪರವಾಗಿ ನನ್ನದೊಂದು ಈ ಮೂಲಕ ಮನವಿ ಏನಂದರೆ 2000ನೇ ಇಸ್ವಿಯಿಂದ ಇತ್ತೀಚೆಗೂ ಇಂಥ ಅಕ್ರಮ,ತಿದ್ದುಪಡಿ ನಡೆದಬಗ್ಗೆ ಗುಮಾನಿ ಬಹಳ ಇದೆ.ಅದನ್ನೂ ತನಿಖೆಮಾಡಿ ಸಾರ್ಥಕ ಸೇವೆ ಸಲ್ಲಿಸಿ ತಮಗೆ ಸಾರ್ವಜನಿಕರ ಬೆಂಬಲವಿದೆ.ಪಕ್ಷ,ಪಂಗಡ,ಜಾತಿ,ಅಧಿಕಾ,ಸಂಭಂದ,ಆಮಿಶ,ಭಯ,ಅಡೆತಡೆ ಎಲ್ಲವನ್ನೂ ಒಂದು ಕಡೆ ಬದಿಗಿಟ್ಟು ಈಗ ತಾವು ವಶಪಡಿಸಿಕೊಂಡ ಪಾಲಿಕೆಯ ಆಸ್ತಿಯ ದಾಖಲೆಗಳನ್ನು ತಿದ್ದುಪಡಿಮಾಡಿದ ಅಧಿಕಾರಿಗಳ ಮತ್ತು ಪಾಲಿಕೆಯ ಆಸ್ತಿ ಆಕ್ರಮಿಸಿಕೊಂಡ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿ ಗೋಮುಖಗಳ ಬಣ್ಣ ಬಯಲು ಮಾಡಿ ಮುಂದೆ ಸರ್ಕಾರದ ಆಸ್ತಿಪಾಸ್ತಿ ಆಕ್ರಮವಾಗದಂತೆ ಪಾಠ ಮಾಡಿದಂತಾಗ್ತದೆ.ದಯವಿಟ್ಟು ಯಾರಪ್ರಭಾವಕ್ಕೂ ಒಳಗಾಗದೆ ದಾಖಲೆ ತಿದ್ದುಪಡಿ ಮಾಡಿದವರ ಮತ್ತು ಸರ್ಕಾರಕ್ಕೆ ವಂಚಿಸಿ ಆಸ್ತಿ ಪಡೆದುಕೊಂಡಿದ್ದವರ ಹೆಸರುಗಳನ್ನು ಬಹಿರಂಗಪಡಿಸಲು ಮನವಿ.