Saturday, December 21, 2024
Homeಸಾರ್ವಜನಿಕ ಧ್ವನಿಕರ್ನಾಟಕ ಪ್ರದೇಶ ಕುರುಬರ ಸಂಘದ ಸರ್ವಸದಸ್ಯರ ಸಭೆಯು ಸರ್ವಾಧಿಕಾರಿಗಳ ಸಭೆಯಂತಾಯಿತು!!

ಕರ್ನಾಟಕ ಪ್ರದೇಶ ಕುರುಬರ ಸಂಘದ ಸರ್ವಸದಸ್ಯರ ಸಭೆಯು ಸರ್ವಾಧಿಕಾರಿಗಳ ಸಭೆಯಂತಾಯಿತು!!


ಬೆಂಗಳೂರು: ಕರ್ನಾಟಕ ಪ್ರದೇಶ ಕುರುಬರ ಸಂಘಟನೆಯ ಸರ್ವಸದಸ್ಯರ ಸಭೆಯು ಬೆಂಗಳೂರಿನ ವಿಠಲಮಲ್ಯ ರಸ್ತೆಯಲ್ಲಿರುವ ಸಂಪಿಗೆ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ದಿನಾಂಕ:01-12-2024ರಂದು ನಡೆಯಿತು.
ಸರ್ವಸದಸ್ಯರ ಸಭೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಂದ ಸಂಘದ ಅಜೀವಸದಸ್ಯರುಗಳು ಬಂದು ಭಾಗವಹಿಸಿದ್ದರು.ಆದರೆ ಪ್ರದೇಶ ಕುರುಬರ ಸಂಘದ ಪ್ರಸಕ್ತ ಆಡಳಿತಮಂಡಳಿಯಸರ್ವಾಧಿಕಾರಿಧೋರಣೆಯು ಎದ್ದು ಕಾಣಿತು.ಸರ್ವಸದಸ್ಯರ ಸಭೆಯಲ್ಲಿ ವರದಿಮಂಡನೆಯಾದ ನಂತರ ಸದಸ್ಯರು ವರದಿ ಮೇಲೆ ಚರ್ಚೆ ಪ್ರಾರಂಭಿಸಿದರು ವರದಿಯಲ್ಲಿಯ ಕೆಲವು ಮಾಹಿತಿಗಳ ಕುರಿತು ಸ್ಪಸ್ಟನೆ ಕೇಳಲಾರಂಭಿಸಿದ ಸದಸ್ಯರಿಗೆ ಸಮರ್ಪಕವಾಗಿ ಉತ್ತರಿಸಲಾಗದ ಅಧ್ಯಕ್ಷರು ಹಾಗೂ ಪ್ರಧಾನಕಾರ್ಯದರ್ಶಿಗಳು ಸೈಡ್ ಲೈನ್ ಆದರು.ಆದರೆ ಮೂರನೆಯ ವ್ಯಕ್ತಿ ಅಂದರೆ ಅವರೂ ಕೂಡಾ ಸಂಘಕ್ಕೆ ಸಂಬಂದಪಟ್ಟವರೇ ಆಗಿದ್ದರೂ ಸಹ ಸರ್ವಸದಸ್ಯರ ಸಭೆಯಲ್ಲಿ ಸಂಘದ ಆಡಳಿತಮಂಡಳಿಯ ಏಕಮೇವ ವ್ಯಕ್ತಿಯಾಗಿ ಎಲ್ಲರ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸುವುದನ್ನು ನೋಡಿದರೆ ಇಡೀ ಪ್ರದೇಶ ಕುರುಬ ಸಂಘದ ಸರ್ವಾಧಿಕಾರಿ ಯಂತೆ ವರ್ತಿಸುತ್ತಿರುವುದು ಎಲ್ಲರ ಗಮನ ಸೆಳೆಯಿತು.

ಈ ವ್ಯಕ್ತಿ ಮೊದಲೇ ಪೂರ್ವಾಗ್ರಹ ಪೀಡಿತನಂತೆ ವರ್ತಿಸಿಸಂಘದ ಸರ್ವಸದಸ್ಯರಿಗೆ ಸಮಾಜದ ಸರ್ವಸದಸ್ಯರ ಸಭೆಯವಾತಾವರಣವನ್ನೇ ಬದಲಾಯಿಸಿ ಒಂದು ರೀತಿಯಲ್ಲಿ ಪರಸ್ಪರ ವಾಗ್ವಾದ,ವೈರತ್ವ,ಕಲಹ,ಕೈಕೈ ಮಿಲಾಯಿಸುವತ್ತ ವಾತಾವರಣ ಸೃಷ್ಟಿ ಸಿದಂತಾಯಿತು.ಆದರೂ ಅಲ್ಲಿ ಸೇರಿದ ಸರ್ವಸದಸ್ಯರೆಲ್ಲರೂ ಒಂದೇ ಕುಲಬಾಂಧವರಾಗಿದ್ದರಿಂದ ಎಲ್ಲವನ್ನೂ ಸಹಿಸಿಕೊಂಡು ಸಭೆಯಲ್ಲಿ ಶಾಂತತೆಯನ್ನು ಕಾಪಾಡಿದರು.ಆದರೆ ಆಡಳಿತ ಮಂಡಳಿಯವರು ಅಲ್ಲಿಭಯದವಾತಾವರಣ ಸೃಷ್ಟಿಸಿ ಸರ್ವಸದಸ್ಯರ ವಿರೋಧದನಡುವೆ ಎಲ್ಲಾ ವಿಷಯಗಳಿಗೆ ಅನುಮೋದನೆ ದೊರೆತಿದೆ ಎಂದು ಘೋಷಿಸಿಕೊಂಡರು.ಸರ್ವಸದಸ್ಯರ ಸಭೆಯಲ್ಲಿ ಆಡಳಿತ ಮಂಡಳಿಯ ಯಾವುದೇ ನಿರ್ಣಯಕ್ಕೂ ಸಭೆ ಒಪ್ಪಿಗೆ ನೀಡಿಲ್ಲಾ.ಆದರೂ ಆಡಳಿತಮಂಡಳಿಯು ಪೂರ್ವಾಗ್ರಹ ಪೀಡಿತರಾಗಿ ಸಿದ್ದಪಡಿಸಿಕೊಂಡು ಬಂದಿದ್ದ ಎಲ್ಲಾ ನಿರ್ಣಯಗಳಿಗೂ ಅನುಮೋದನೆ ಪಡೆದಂತೆ ಘೋಷಿಸಿತು ಇದು ಅಕ್ಷಮ್ಯ. ಸರ್ವಸದಸ್ಯರ ಸಭೆಯ ಘನತೆಗೆ ತಕ್ಕಂತೆ ಆಡಳಿತಮಂಡಳಿ ವೇದಿಕೆಯಲ್ಲಿ ಆಸೀನರಾಗಿ ಸದಸ್ಯರ ಪ್ರಶ್ನೆಗಳಿಗೆ ಅಧ್ಯಕ್ಷರು ಮತ್ತು ಪ್ರಧಾನಕಾರ್ಯದರ್ಶಿ ಹಾಗೂ ಖಜಾಂಚಿಗಳು ಗೌರಯುತವಾಗಿ ಉತ್ತರಿಸಬೇಕಿತ್ತು.ಅವರಿಗೆ ಆ ಗಾಂಭೀರತೆ ಇರಲಿಲ್ಲಾ.ವೇದಿಕೆಯಲ್ಲಿ ಇದ್ದ ಆಡಳಿತಮಂಡಳಿಯವರೆಲ್ಲರೂ ಆಸೀನಬಿಟ್ಟು ವೇದಿಕೆಯಮೇಲೆ ನಿಂತುಕೊಂಡು ಸಮರ್ಥನೆ ಮಾಡಿಕೊಳ್ಳುವುದರಲ್ಲೇ ಮಗ್ನರಾಗಿದ್ದರು.ಸಮಾಜದ ಕುರಿತು ಪ್ರಶ್ನೆ ಕೇಳುವವರನ್ನು ವೈರಿಗಳಂತೆ ಬಿಂಬಿಸಿ ಅಂಥವರ ಅಜೀವ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಅವರೇ ಕೂಗುವುದು ಅವರೇ ಹೌದು ಹೌದು ಎನ್ನುವುದು ನೋವುತಂದಿತು.ಪ್ರಶ್ನೆ ಮಾಡುವವರ ಅಜೀವ ಸದಸ್ಯತ್ವ ರದ್ದುಮಾಡಿ ಸರ್ವಾಧಿಕಾರ ನಡೆಸುವ ಹುನ್ನಾರ ಬಿಡಬೇಕೆಂದು ಸಭೆಯಲ್ಲಿ ಸದಸ್ಯರು ಒಕ್ಕೂರಲಿನಿಂದ ಖಂಡಿಸಿದರು.ಒಟ್ಟಾರೆಯಾಗಿ ಪ್ರದೇಶ ಕುರುಬರ ಸಂಘದ ಕಾರ್ಯಕಾರಿ ಸಮಿತಿಯು ಯಾರದೂ ಕಪಿಮುಷ್ಠಿಯಲ್ಲಿದ್ದು ಅಸಹಾಯಕತೆಯಂತೆ ಮೌನವಾಗಿತ್ತು.ಮುಖ್ಯವಿಷಯ ಅಂದರೆ ಪ್ರದೇಶಕುರುಬರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಅಂಗೀಕಾರವಾಗಿವೆ ದು ಹೇಳುವ ಯಾವುದಕ್ಕೂ ಸಭೆಯು ಒಪ್ಪಿಗೆ ನೀಡದೆ ಖಡಾಖಂಡಿತವಾಗಿ ವಿರೋಧಿಸಿದೆ.ಸ್ಥಳೀಯ ಸಮಾಜದ ಕೆಲವು ಮುಖಂಡರು ಇತರೆ ಜಿಲ್ಲೆಯ ಸಮಾಜದ ಸದಸ್ಯರಿಗೆ ಅವಾಚ್ಯ ಶಬ್ದ ಬಳಕೆಯೂ ಆಗಿದೆ ಸ್ಥಳಿಯ ಸಮಾಜದ ಕೆಲವು ಮುಖಂಡರ ಚೇಲಾಗಳು ಇತರೆ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಉತ್ತರಕರ್ನಾಟಕದ ಸಮಾಜಬಾಂಧವರನ್ನು ಅತ್ಯಂತ ಅಗೌರವದಿಂದ ಕಂಡು ನೋವುಂಟುಮಾಡಿದ್ದು ಖಂಡನೀಯ.ಕೂಡಲೇ ಸಿದ್ದರಾಮಯ್ಯನವರು ಮದ್ಯಪ್ರವೇಶಿಸಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ನ್ಯಾಯಸಮ್ಮತ ಚುನಾವಣೆನಡೆಸಿ ರಾಜ್ಯದ ಎಲ್ಲಾ ಜಿಲ್ಲೆಯ ಸಮಾಜಪರಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಬೇಕು.ಪೋಜು ಕೊಟ್ಟು ಸಮಾಜ ಒಡೆಯುವಂಥ ಮನೋಭಾವದವರನ್ನು ದೂರಿಡಬೇಕೆಂದು ಸಭಾಂಗಣದ ಅಂಗಳದಲ್ಲಿ ಕೇಳಿಬರುತಿದ್ದ ಆಕ್ರೋಶದ ನುಡಿಗಳಾಗಿ ಕೇಳಿಬರುತಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments