ವಿಜಯಪುರ ಹುಬ್ಬಳ್ಳಿ 218 ರಾಷ್ಟ್ರೀಯ ಹೆದ್ದಾರಿ ಮುಳವಾಡ ಹತ್ತಿರ ಏಕಾಏಕಿ (29.11.24)ಟೋಲ್ ಸಂಗ್ರಹ ಪ್ರಾರಂಭಿಸಿದ್ದು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿ ಹೆದ್ದಾರಿ ಇಲಾಖೆಗೆ ವಾರದ ಗಡುವು ನೀಡಲಾಯಿತು.ಹೊನಗನಹಳ್ಳಿ ಸಮೀಪ ಇನ್ನೂ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅಲ್ಲಿಯೇ ಸವಾರರ ಸಾಕಷ್ಟು ಸಮಯ, ಇಂಧನ ವ್ಯರ್ಥವಾಗುತ್ತಿದ್ದು ಯಾವ ಪುರುಷಾರ್ಥಕ್ಕೆ ಸಂಗ್ರಹ ಮಾಡುತ್ತಿದ್ದೀರಿ ಪ್ರಶ್ನಿಸಲಾಯಿತು. ಒಂದೋ ಟೋಲ್ ಬಂದ್ ಮಾಡಬೇಕು, ಇಲ್ಲ ವಾರದಲ್ಲಿ ರಸ್ತೆ ರಿಪೇರಿ ಆಗಬೇಕು ಎಂದು ತಾಕೀತು ಮಾಡಲಾಯಿತು. ಎರಡು ಆಗದಿದ್ದಲ್ಲಿ ಎಲ್ಲಾ ರೈತರ ಸವಾರರ ಸಹಕಾರ ಪಡೆದು ಉಗ್ರ ಹೋರಾಟ ಮಾಡಲಾಗುವುದು. ಈ ವೇಳೆ ಸೋಮನಾಥ್ ಕಳ್ಳಿಮನಿ, ಹಿರಿಯ ಪತ್ರಕರ್ತರಾದ ಅನಿಲ್ ಹೊಸಮನಿ, ಪ್ರಭುಗೌಡ ಪಾಟೀಲ್, ವಿ ಎಸ್ ಗಸ್ತಿ ,ಸಂಜು ಕಂಬಾಗಿ, ಮಹಾದೇವಿ ಗೋಕಾಕ್ ,ಎಲ್ಲಪ್ಪ ತಳೆವಾಡ, ಸಂಜು ಪಾಂಡ್ರೆ ಇನ್ನಿತರರು ಉಪಸ್ಥಿತರಿದ್ದರು.
ಹೊನಗನಹಳ್ಳಿ ಸಮೀಪ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದರೂ ಟೋಲ್ ವಸೂಲಿ ಖಂಡಿಸಿ ಮನವಿ
RELATED ARTICLES