Thursday, August 21, 2025
Homeಕ್ರೈಂಬಡವರಪಾಲಿಗೆ ಸರ್ಕಾರ ಸತ್ತಿದೆ!ಉಚಿತ ಯೋಜನೆಗಳಿಂದ ತಾತ್ಕಾಲಿಕ ಹೊಟ್ಟೆ ತುಂಬಬಹುದು.ಆದರೆ ದುಡಿಯುವ ವರ್ಗಕ್ಕೆ ರಕ್ಷಣೆ ನೀಡಲು ನಿಶಕ್ತವಾಗಿದೆ...

ಬಡವರಪಾಲಿಗೆ ಸರ್ಕಾರ ಸತ್ತಿದೆ!ಉಚಿತ ಯೋಜನೆಗಳಿಂದ ತಾತ್ಕಾಲಿಕ ಹೊಟ್ಟೆ ತುಂಬಬಹುದು.ಆದರೆ ದುಡಿಯುವ ವರ್ಗಕ್ಕೆ ರಕ್ಷಣೆ ನೀಡಲು ನಿಶಕ್ತವಾಗಿದೆ ಅಧಿಕಾರವರ್ಗ.

ಬೆಂಗಳೂರು:ಕರ್ನಾಟಕ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇದೆ ಅನ್ನುವ ಕಾರಣಕ್ಕಾಗಿಯೋ ಏನೋ ಸ್ವಪಕ್ಷದವರೂ ಸೇರಿದಂತೆ ವಿರೋಧಪಕ್ಷಗಳು,ಪುಡಿರಾಜಕಾರಣಿಗಳು ಭ್ರಹ್ಮಾಂಡ ಭ್ರಷ್ಟ ಅಧಿಕಾರಿಗಳು,ಹೊಟ್ಟೆಮಾಡಿಗೆ ಹುಟ್ಟಿಕೊಂಡ ಕೆಲ ಮಾಧ್ಯಮದವರು,ಹೆಣ್ಗುಂಡಿ ರೌಡಿಗಳು ಬಾಲಬಿಚ್ಚಿ ಸ್ವಚ್ಛಂದವಾಗಿ ಹಾರಾಡುತ್ತಾ ಯಾವ ಕಾನೂನಿಗೂ ಹೆದರದೆ ಪ್ರತಿ ನಿತ್ಯ ಅನ್ಯಾಯ,ಅಕ್ರಮ,ದೌರ್ಜನ್ಯ,ದಬ್ಬಾಳಿಕೆ, ದರೋಡೆ,ಬಡವರಮೇಲೆ,ಕಾರ್ಮಿಕರಮೇಲೆ,ರೈತರಮೇಲೆ,ಕುರಿಗಾಹಿಗಳಮೇಲೆ,ಉದ್ಯಮಿಗಳಮೇಲೆ,ಮಹಿಳೆಯರಮೇಲೆ ಅಮಾನುಷ್ಯ ಹಲ್ಲೆಗಳು,ರೇಪುಗಳು ರಾಜ್ಯದಲ್ಲಿ ತಾಂಡವಾಡುತ್ತಿವೆ.

ಸಿದ್ದರಾಮಯ್ಯನವರು ತಾವೊಬ್ಬರು ಶುದ್ಧ ವಿದ್ದು ಜನರಕಣ್ಣಿಗೆ ಕಾಣಿಸಿಕೊಂಡರೂಸಹ ಅವರ ಸರ್ಕಾರದ ಬಹುತೇಕ ಸಹಚರರು,ಅಧಿಕಾರಿಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ.ಬಡವರಿಗೆ ಅರ್ಧಷ್ಟು ಜನರಿಗೆ ಬಿಪಿಎಲ್ ಕಾರ್ಡುಗಳಿಲ್ಲಾ.ಉಳ್ಳವರಲ್ಲಿ ಬಿಪಿಎಲ್ ಕಾರ್ಡುಗಳಿವೆ ಇದು ಅಧಿಕಾರಿಗಳ ಭ್ರಷ್ಟಾಚಾರದ ಮೊದಲ ಹಂತ.ಸರ್ಕಾರ ಬಡವರಪರ ಯೋಜನೆ ಘೋಷಿಸಿ ಬಿಪಿಎಲ್ ಕಾರ್ಡುದಾರರಿಗೆ ಎಂದು ಹೇಳುತ್ತದೆ ಆ ಯೋಜನೆಯ ಲಾಭವೂ ಉಳ್ಳವರಿಗೆನೆ,ರೈತರ ಪಹಣಿಗಳಲ್ಲಿ ಯಾವಾಗಬೇಕಾದರೂ ಯಾರಹೆಸರು ಸೇರಬಹುದು ಕ್ಷೇತ್ರವೂಹೆಚ್ಚುಕಡಿಮೆ ಯಾಗಬಹುದು ಇದಕ್ಕೂ ಭ್ರಷ್ಟರ ಕೈವಾಡ ಸರಿಪಡಿಸರು ರೈತರು ಪರದಾಡಬೇಕು ಕೆಲಸಕಾರ್ಯಗಳಬಿಟ್ಟು ಕಚೇರಿಗಳಿಗೆ ಅಲೆದಾಡಬೇಕು.ಬಹುತೇಕ ಎಲ್ಲಾ ಇಲಾಖೆಯಲ್ಲಿ ಜನರಿಗೆ ಎಷ್ಟು ತೊಂದರೆ ಕೊಡಲು ಸಾಧ್ಯವೋ ಅಷ್ಟುತೊಂದರೆ ಕೊಡ್ತಾರೆ ಇದು ಪ್ರತಿನಿತ್ಯ ಪ್ರತಿಕ್ಷಣ ಎಲ್ಲಾ ಇಲಾಖೆಗಳಲ್ಲಿ ನಡೆಯುತ್ತದೆ.
ಕೆಲವು ಕೇರಿಗಳಲ್ಲಂತೂ ಆವರಣದಲ್ಲಿ ತಮ್ಮ ಹೆಣ್ಗುಂಡಿ ರೌಡಿಪಟಾಲಮ್ ಗಳನ್ನುಸಾಕಿಕೊಂಡಿರುತ್ತಾರೆ.ಇಂಥಾ ನೀಚ ದರಿದ್ರ ಆಡಳಿತ ವರ್ಗದಲ್ಲಿ ಸಾಮಾನ್ಯಜನರು ನರಕ ಅನುಭವಿಸುತಿದ್ದಾರೆ.
ಬಡವರಮೇಲೆ,ಮಹಿಳೆಯರಮೇಲೆ,ಮಕ್ಕಳಮೇಲೆ,ಕಾರ್ಮಿಕರಮೇಲೆ,ರೈತರಮೇಲೆ,ದಲಿತ ದಮನಿತರಮೇಲೆ,ದುಡಿಯುವ ಶ್ರಮಿಕವರ್ಗದಮೇಲೆ ನಡೆಯುತ್ತಿರುವ ಅಮಾನುಷ್ಯ ಕೃತ್ಯಗಳು ನಡೆಯುತ್ತಲೇ ಇರುತ್ತವೆ.ಅದಕ್ಕೆಲ್ಲಾ ಬಹುಮುಖ್ಯಕಾರಣ ಕಾನೂನಿನ ಭಯ ಇಲ್ಲದಿರುವುದು.ಕಾನೂನುಗಳು ಕಠಿಣವಾಗಿದ್ದರೂ ಶಿಕ್ಷೆ ವಿಧಿಸುವಷ್ಟು ದಷ್ಟಪುಷ್ಟವಾಗಿಲ್ಲಾದಿರುವುದು.ಮತ್ತು ಶಿಕ್ಷೆವಿಧಿಸುವಂಥಾ ಸಾಕ್ಷಾಧಾರಗಳನ್ನು ಕ್ರೂಢಿಕರಿಸುವಲ್ಲಿಯ ಕಾಣದಕೈಚಳಕ ಎಂದರೆ ತಪ್ಪಾಗದು.

ಇತ್ತೀಚೆಗೆ ವಿಜಯಪುರದಲ್ಲಿ ಇಟ್ಟಿಗೆ ಕಾರ್ಖಾನೆ ಮಾಲಿಕ ಕಾರ್ಮಿಕರ ಮೇಲೆ ನಡೆಸಿದ ಅಮಾನುಷ್ಯ ಕೃತ್ಯವಿರಬಹುದು,ಬೆಂಗಳೂರಿನಲ್ಲಿ ಬಸ್ ನಿಲ್ದಾಣ ತೋರಿಸುವ ನೆಪದಲ್ಲಿ ಮಹಿಳೆಯೊಬ್ಬಳನ್ನು ಸಾಮೂಹಿಕವಾಗಿ ರೇಪ್ ಮಾಡಿರುವ ಘಟನೆಯಾಗಿರಬಹುದು,ಅದ್ಯಾವನೋ ಜನಪ್ರತಿನಿಧಿಯಂತೆ ಮಾಜಿಸಚಿವನಂತೆ,ಪ್ರಸ್ತುತ ಬಿಜೆಪಿಯ ಶಾಸಕನಂತೆ ಪ್ರತಿಷ್ಠಿತ ರಾಜರಾಜೇಶ್ವರಿ ವಿಧಾನಸಭೆಯ ಜನರ ಪ್ರತಿನಿಧಿ ಮಿನಿರತ್ನನ ಕರ್ಮಕಾಂಡ ಒಂದಾ ಎರಡಾ ಹೇಳತೀರದು ಒಂದು ಕಳಪೆ ಕಾಮಗಾರಿಯ ಕಾಂಪೌಂಡ್ ಗೋಡೆ ಕುಸಿದು ವಿದ್ಯಾರ್ಥಿ ಯ ಸಾವು ಇರಬಹುದು,ಜಾತಿ ನಿಂದನೆಯಿರಬಹುದು,ಅಶ್ಲೀಲಪದ ಬಳಕೆ,ಸ್ಲೋಫೈಜನ್ ವಿಷದ ಚುಚ್ಚುಮದ್ದು ಕೊಡುವ ಪ್ರಯತ್ನವಿರಬಹುದು,ಬಡಕೂಲಿಕಾರ್ಮಿಕರ ವಾಸದ ಜೋಪಡಿಗಳನ್ನು ನಾಶಪಡಿಸಿ ಬೀದಿಯಲ್ಲಿ ನಿಲ್ಲಿಸಿ ಮಹಿಳೆಗೆ ಒದ್ದಿರುವುದು.ಲೈಂಗಿಕ ಕೇಸು ಇರಬಹುದು ಒಂದಾ ಎರಡಾ?ಜನರಕಣ್ಣಿಗೆ ಕಾಣುವುದು ಅಲ್ಲದೆ ಕಣ್ಣಿಗೆ ಮನ್ನೆರಚೆ ಅದೆಷ್ಟು ಮನೆತನಗಳನ್ನು ನಾಶಪಡಿಸಿದ್ದಾನೋ?ಅಲ್ಲದೆ ಕನ್ನಡ ನೆಲಜಲಭಾಷೆಯ ಮೇಲೆ ಅಸಡ್ಯೆ ತೋರುವ ಇಂಥವನಿಗೆ ರಕ್ಷಣೆ ನೀಡುವ ಈ ದುರಾಡಳಿತದ ಸರ್ಕಾರದಲ್ಲಿರುವ ಸಚಿವರು,ಶಾಸಕರು,ಪಕ್ಷಗಳು,ಹೋರಾಟಗಾರರು,ಅಧಿಕಾರಿಗಳು ಕ್ರಮಕೈಗೊಂಡು ಅಮಾನುಷ್ಯವಾಗಿ,ಅನಾಗರಿಕ ವಾಗಿ,ಅವೈಜ್ಞಾನಿಕವಾಗಿ,ಶಾಂತಿಕದಡುವಂಥಾ ಚಟುವಟಿಕೆಗಳಿಗೆ ಕಡಿವಾಣಹಾಕಿ ದುಷ್ಟ ಶಕ್ತಿಯನ್ನು ನಾಶಪಡಿಸಲು.

ಜಾತಿ,ಮತ,ಧರ್ಮ, ಪಕ್ಷ,ಪಂಗಡ,ಭಾಷೆ ಬದಿಗಿಟ್ಟು ಸಂವಿಧಾನ ಬರಿ ಜಪಮಾಡುವುದಲ್ಲಾ ಅದನ್ನು ಸರಿಯಾಗಿ ಪಾಲಿಸುವುದನ್ನು ಮೈಗೂಡಿಸಿಕೊಳ್ಳಬೇಕು.
ತಪ್ಪು ಮಾಡಿ ಶಾತಿಕದಡಿ,ಸಮಾಜದಲ್ಲಿ ಅನ್ಯಾಯಾಕ್ರಮ,ದೌರ್ಜನ್ಯ, ದಬ್ಬಾಳಿಕೆ, ಅಧಿಕಾರ ದುರ್ಬಳಕೆ ಗಳನ್ನು ಹಿಮ್ಮೆಟ್ಟಿಸಲು ಸರ್ವರೂ ಶ್ರಮಿಸೋಣ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments