Thursday, August 21, 2025
Homeಸಂಸ್ಕೃತಿಗುರುವಿನ ಕರುಣೆ ಅಪಾರವಾದದ್ದು :ಶ್ರೀ ರಾಮಕೃಷ್ಣ ದೇವರು.

ಗುರುವಿನ ಕರುಣೆ ಅಪಾರವಾದದ್ದು :ಶ್ರೀ ರಾಮಕೃಷ್ಣ ದೇವರು.

ವಿಜಯಪುರ:ಒಬ್ಬ ವ್ಯಕ್ತಿಗೆ ಯಾವ ಸ್ವಾರ್ಥದ ಉದ್ದೇಶವು ಇಲ್ಲದೆ ನಿಷ್ಕಲ್ಮಶವಾದ ಪ್ರೀತಿಯನ್ನ ತೋರಬಲ್ಲ ಪರಿಶುದ್ಧ ಭಾವದ ಎರಡು ಹೃದಯಗಳೆಂದರೆ ಒಬ್ಬಳು ತಾಯಿ ಮತ್ತೊಬ್ಬರು ಗುರು.ಆ ಎರಡು ಜೀವಗಳು ಒಬ್ಬ ವ್ಯಕ್ತಿಯ ಬದುಕಿನಲ್ಲಿ ಬಹುಮುಖ್ಯವಾದವರು. ತಾಯಿಯ ಪ್ರೀತಿ ಅಗಮ್ಯವಾದದ್ದು, ಜಗತ್ತಿನಲ್ಲಿ ಅವಳಿಗೆ ಮತ್ತೊಬ್ಬರು ಸರಿಸಾಟಿ ಇಲ್ಲಾ ಮಕ್ಕಳ ಏಳಿಗೆಗಾಗಿ ತನ್ನೆಲ್ಲ ಕನಸುಗಳನ್ನು ಬದಿಗಿಟ್ಟು ನೋವು ನಲಿವುಗಳನ್ನು ನುಂಗಿಕೊಂಡಿರುವ ದೇವತೆಯವಳು. ಮುಪ್ಪಿನ ಕಾಲದಲ್ಲಿ ಮಕ್ಕಳು ಅವಳನ್ನು ತಿರುಗಿ ನೋಡದಿದ್ದರೂ ಅವಳು ಮಾತ್ರ ಸದಾಕಾಲ ತನ್ನ ಮಕ್ಕಳಿಗಾಗಿಯೇ ಬದುಕನ್ನು ಕಳೆಯುತ್ತಾಳೆ.ಯಾರಾದರೂ ತನ್ನ ಮಕ್ಕಳನ್ನು ನಿಂದಿಸಿದರೆ ಅಥವಾ ಮಕ್ಕಳು ತಪ್ಪು ಮಾಡಿದರು ಅವಳು ಹೇಳುವುದೊಂದೇ ಮಾತು ನನ್ನ ಮಗ, ಮಗಳು ತಪ್ಪು ಮಾಡುವವರಲ್ಲ ಒಂದು ವೇಳೆ ತಪ್ಪು ಮಾಡಿದರು ಅವರಿನ್ನು ಚಿಕ್ಕವರು ಎಂದು ತನ್ನ ಮಕ್ಕಳನ್ನು ಯಾವ ಸಂದರ್ಭದಲ್ಲಿಯು ಬಿಟ್ಟುಕೊಡಲಾರಳು. ಹಾಗೆ ಗುರುಗಳು ಸಹ ತಮ್ಮ ಶಿಷ್ಯನನ್ನ ಯಾವುದೇ ಕಾರಣಕ್ಕೂ ಬಿಟ್ಟುಕೊಡಲಾರರು. ಶಿಷ್ಯ ಎಷ್ಟೇ ತಪ್ಪುಗಳನ್ನ ಮಾಡಿದರು ಸಹ ಆ ಎಲ್ಲ ತಪ್ಪುಗಳನ್ನ ಮನ್ನಿಸುವ ಕರುಣಾಮೂರ್ತಿಯವರು. ಶಿಷ್ಯನನ್ನು ಜಗತ್ತೇ ಟೀಕಿಸಿದರು ತಮ್ಮೆಲ್ಲ ಜ್ಞಾನವನ್ನು ಆತನಿಗೆ ದಾರಿಯೆರೆಯುತ್ತಾ ಟೀಕಿಸುವ ಜಗತ್ತೇ ಆತನನ್ನು ಪುರಸ್ಕರಿಸುವಂತೆ ಮಾಡುವ ಶಿಷ್ಯನ ಬೆನ್ನ ಹಿಂದಿನ ಮಹಾಶಕ್ತಿಯೇ ಗುರು. ಆತನ ಕರುಣೆ ಅಪಾರವಾದದ್ದು ಒಂದು ಬಾರಿ ಶಂಕರಾಚಾರ್ಯರು ಅರಣ್ಯದ ಮಧ್ಯದಲ್ಲಿರುವ ಸುಂದರವಾದ ಆಶ್ರಮದಲ್ಲಿ ನಾಲ್ಕು ಜನ ಶಿಷ್ಯರ ಜೊತೆಗೆ ವಾಸವಾಗಿದ್ದರು ಪ್ರತಿದಿನವೂ ಬೆಳಗ್ಗೆ ನಸುಕಿನ ಜಾವ ಆಶ್ರಮದ ಮುಂದಿರುವ ಒಂದು ಮರದ ಕೆಳಗೆ ಶಿಷ್ಯರಿಗೆ ವೇದಗಳ ಪಾಠವನ್ನು ಹೇಳುತ್ತಿದ್ದರು ಆ ನಾಲ್ಕು ಜನ ಶಿಷ್ಯರಲ್ಲಿ ಸುರೇಶಾಚಾರ್ಯರು ಬುದ್ದಿವಂತ ಶಿಷ್ಯರು ಹಸ್ತಾಮಲಕರು ಮತ್ತು ಪದ್ಮಪಾದಾಚಾರ್ಯರು ಸ್ವಲ್ಪ ಮಟ್ಟಿಗಿನ ಬುದ್ಧಿವಂತರೇ ಆಗಿದ್ದರು. ಅದರಲ್ಲೇ ಅತಿ ದಡ್ಡ ವಿದ್ಯಾರ್ಥಿ ಎಂದರೆ ಅದು ತೋಟಕಾಚಾರ್ಯರು ಅವರಿಗೆ ಯಾವ ವಿಷಯವೂ ತಲೆಗೆ ಹೋಗುತ್ತಿರಲಿಲ್ಲ ಆದರೆ ಗುರುಸೇವೆಯನ್ನು ಪ್ರೀತಿಯಿಂದ ಮನಮುಟ್ಟುವಂತೆ ಮಾಡುತ್ತಿದ್ದರು. ಹೀಗೆ ಒಂದು ಬಾರಿ ಬೆಳಗ್ಗೆ ತರಗತಿಗಳು ಪ್ರಾರಂಭವಾಗಬೇಕಿತ್ತು ಶ್ರೀ ಶಂಕರಾಚಾರ್ಯರು ಶಿಷ್ಯರಿಗೆ ಪಾಠವನ್ನು ಹೇಳಲು ಮರದ ಕೆಳಗಿರುವ ಕಲ್ಲು ಬಂಡೆಯ ಮೇಲೆ ಬಂದು ಆಸೀನರಾಗಿದ್ದರು ಅವರ ಮುಂದೆ ಮೂರು ಜನ ಶಿಷ್ಯರಾದ ಸುರೇಶಾಚಾರ್ಯರು, ಹಸ್ತಾಮಲಕರು ಮತ್ತು ಪದ್ಮಪಾದಾಚಾರ್ಯರು ಉಪಸ್ಥಿತರಿದ್ದರು ಆದರೆ ಇನ್ನೊಬ್ಬ ಶಿಷ್ಯನಾದ ತೋಟಕಾಚಾರ್ಯರು ಅದೆಷ್ಟೋ ಸಮಯವಾಗಿದ್ದರೂ ಬಂದಿರಲಿಲ್ಲ ಆ ಶಿಷ್ಯನು ಆಶ್ರಮದ ಮುಂದಿರುವ ಪುಟ್ಟದಾದ ಒಂದು ಕೆರೆಯಲ್ಲಿ ಗುರುಗಳ ಬಟ್ಟೆಯನ್ನು ತೊಳೆಯುತ್ತಿದ್ದನು ಅದು ಅಲ್ಲಿರುವ ಶಂಕರಾಚಾರ್ಯರನ್ನು ಒಳಗೊಂಡಂತೆ ಆ ದೃಶ್ಯ ಎಲ್ಲರಿಗೂ ಕಾಣುತ್ತಿತ್ತು ಆಗ ಹಸ್ತಾಮಲಕರು ಎದ್ದು ನಿಂತು ಗುರುಗಳೇ ಪಾಠವನ್ನ ಪ್ರಾರಂಭಿಸಿ ಎನ್ನುತ್ತಾರೆ ಆಗ ಶಂಕರಾಚಾರ್ಯರು ಆ ಒಂದು ಮಗುವು ಬರಲಿ ಅಲ್ಲಿಯವರೆಗೆ ಕಾಯೋಣ ಎನ್ನುತ್ತಾರೆ. ಮತ್ತೆ ಸ್ವಲ್ಪ ಸಮಯದ ನಂತರ ಸುರೇಶಾಚಾರ್ಯರು ಎದ್ದು ನಿಂತು ಗುರುಗಳೇ ಪಾಠವನ್ನ ಪ್ರಾರಂಭಿಸಿ ಆತನು ತರಗತಿಗೆ ಬಂದರೆ ಎಷ್ಟು ಬಿಟ್ಟರೆಷ್ಟು ಅವನಿಗೆ ವಿದ್ಯೆಯೇ ತಲೆಗೆ ಹೋಗುವುದಿಲ್ಲವಲ್ಲ ಅದಕ್ಕಾಗಿ ಸಮಯವನ್ನೇಕೆ ವ್ಯರ್ಥ ಮಾಡಬೇಕು ಎಂದಾಗ ಶಂಕರರಿಗೆ ಆ ಮಾತುಗಳು ನೋವನ್ನುಂಟುಮಾಡುತ್ತವೆ ಗುರು ತನ್ನ ಶಿಷ್ಯನಿಗೆ ತಾನು ನಿಂದಿಸಬಹುದು, ಶಿಕ್ಷಿಸಬಹುದು ಆದರೆ ಮತ್ತೊಬ್ಬರು ಶಿಷ್ಯನ ಬಗ್ಗೆ ಏನಾದರೂ ಅಂದರೆ ಸಹಿಸಿಕೊಳ್ಳುವುದಿಲ್ಲಾ. ಆಗ ಶಂಕರರು ಒಂದು ಕ್ಷಣ ಮೌನತಾಳಿ ಮನದೊಳಗೆ ಸರಸ್ವತಿಯನ್ನು ಧ್ಯಾನಿಸಿ ತಾಯಿ ಆ ಪುಟ್ಟ ಮಗುವಿಗೆ ಇವರೆಲ್ಲರೂ ಹೇಗೆ ನಿಂದಿಸುತ್ತಿರುವರು ನೋಡಿದಿಯಾ ಅವನ ಮೇಲೊಂದಿಷ್ಟು ಕರುಣೆ ತೋರಿ ನಿನ್ನ ಕೃಪೆಯನ್ನು ಬೀರಬಾರದೇ ಎಂದು ಕೇಳಿಕೊಂಡಾಗ ಸಾಕ್ಷಾತ್ ಗುರುವೇ ದೇವರನ್ನ ಕೇಳಿಕೊಂಡರೆ ಆ ದೇವರಿಗೂ ಇಲ್ಲ ಎನ್ನಲಾಗದು ನೀರೊಳಗೆ ಬಟ್ಟೆ ತೊಳೆಯುತ್ತಾ ನಿಂತ ತೋಟಕಾಚಾರ್ಯರಿಗೆ ಕ್ಷಣಮಾತ್ರದಲ್ಲಿ ಜ್ಞಾನೋದಯವಾಯಿತು.ಆ ನೀರಿನಿಂದ ಹೊರಬರುತ್ತಲೇ ಗುರುಗಳ ಮೇಲೆ ಸಂಸ್ಕೃತ ಭಾಷೆಯಲ್ಲಿ ಸುಂದರವಾದ ಗೀತೆಯನ್ನ ರಚಿಸಿ ಗುರುಗಳ ಎದುರು ಬಂದು ಅದನ್ನು ಹಾಡಿದನು ಆ ಗೀತೆ ಕೇಳಿದ ಬುದ್ಧಿವಂತ ಶಿಷ್ಯರೆನಿಸಿಕೊಂಡವರೆಲ್ಲರೂ ಮೂಕವಿಸ್ಮಿತರಾದರು. ಗುರು ತನ್ನ ಶಿಷ್ಯನಿಗಾಗಿ ದೇವರಮೂರೇ ಹೋಗಲು ಸಿದ್ದನಾಗಿರುವನು ಆತನಿಗೆ ಎಲ್ಲಕ್ಕಿಂತ ಮುಖ್ಯವಾದದ್ದು ಶಿಷ್ಯನ ಬದುಕುರೂಪಿಸುವುದು ಆತನ ಸಾಧನೆಯೇ ತನ್ನ ಸಾಧನೆಯನ್ನುವಂತೆ ಆನಂದಿಸುವವನು ಗುರು. ಸೂರದಾಸರು ಹೇಳುವ ಹಾಗೆ ಗುರುವಿನ ಮಹಿಮೆಯನ್ನ ಸಾಕ್ಷಾತ್ ಸರಸ್ವತಿ ದೇವಿಯೇ ಬರೆಯಲು ಕುಳಿತು ಭೂಮಿಯನ್ನೇ ಕಾಗದವನ್ನಾಗಿ ಮಾಡಿ ಗಿಡ ಮರಾದಿಗಳನ್ನೇ ಲೇಖನಿಯನ್ನಾಗಿ ಮಾಡಿಕೊಂಡು ಸಮುದ್ರಸಾಗರಗಳನ್ನೇ ಮಸಿಯನ್ನಾಗಿ ಮಾಡಿ ಬರೆಯಲಾರಂಭಿಸಿದರು ಗುರುವರ್ಣನೆ ಮುಗಿಯಲಾರದು ಎಂದು ಹೇಳಿರಬೇಕಾದರೆ ಇನ್ನು ನಾವುಗಳು ಗುರುವರ್ಣನೆಯನ್ನ ಅದು ಹೇಗೆ ನಾಲ್ಕು ಶಬ್ದದಲ್ಲಿ ಮುಗಿಸಲು ಸಾಧ್ಯವಾಗಬಲ್ಲದು ಅದಕ್ಕೆ ಆತನ ಮಹಿಮೆ ಅಪಾರವಾದದ್ದು.

                           ✍️ಶ್ರೀ ರಾಮಕೃಷ್ಣ ದೇವರು.
                                      ವಿಜಯಪುರ
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments