Thursday, August 21, 2025
Homeಜಾಗೃತಿಸಂವಿಧಾನಬದ್ದ ಹಕ್ಕುಗಳಿಗಾಗಿ ಸಂಘಟಿತ ಹೊರಾಟ ಅನಿವಾರ್ಯ:ಆವರಗೆರೆ ಚಂದ್ರು ಕರೆ.

ಸಂವಿಧಾನಬದ್ದ ಹಕ್ಕುಗಳಿಗಾಗಿ ಸಂಘಟಿತ ಹೊರಾಟ ಅನಿವಾರ್ಯ:ಆವರಗೆರೆ ಚಂದ್ರು ಕರೆ.

ದಾವಣಗೆರೆ ಸುದ್ದಿ:ಯುವಕರು ಸಂಘಟಿತ ಹೊರಾಟದಿಂದ ಮಾತ್ರ ಸಂವಿಧಾನಬದ್ದ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಕರೆ ನೀಡಿದರು.

ನಗರದ ಪಂಪಾಪತಿ ಭವನದಲ್ಲಿ ಎಐವೈಎಫ್ ನ ಜಿಲ್ಲಾ ಸಮ್ಮೇಳನದ ಪೂರ್ವಭಾವಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಕನಿಷ್ಠ 5 ಶಾಖೆಗಳನ್ನು ಸ್ಥಾಪಿಸುವ ಮೂಲಕ ಎಐವೈಎಫ್ ಸಂಘಟನೆ ಸಿದ್ದಾಂತ,ಧ್ಯೆಯೋದ್ದೇಶಗಳನ್ನು ಸಂಘಟನೆ ಮುಖಂಡರು ತಿಳಿಸುವ ಮೂಲಕ ಯುವಕರನ್ನು ಜಾಗೃತಗೊಳಿಸಬೇಕಿದೆ.ಇತ್ತೀಚೆಗೆ ಯುವಕರು ದುಶ್ಚಟಗಳ ದಾಸರಾಗಿ ವೈಯಕ್ತಿಕ,ಕೌಟುಂಬಿಕ ಜವಾಬ್ದಾರಿ ಮರೆಯುತ್ತಿದ್ದು.ಸಮಾಜದಲ್ಲಿ ಕೆಲವರ ಕೈಗೊಂಬೆಯಂತೆ ವರ್ತಿಸುತ್ತಿರುವುದು ಬೇಸರದ ಸಂಗತಿ ಎಂದರು.

ವಿದ್ಯಾರ್ಥಿಯುವ ಸಮೂಹ ಮೊಬೈಲ್ ಗೀಳು,ಕ್ರಿಕೇಟ್ ಬೆಟ್ಟಿಂಗ್,ಮಾದಕ ವಸ್ತುಗಳ ಸೇವನೆಗಳಿಗೆ ಮಾರುಹೋಗದೆ,ಸಮಾಜಮುಖಿಯಾಗಿ ಸಂಘಟನಾತ್ಮಕ ಚಿಂತನೆಮೈಗೂಡಿಸಿಕೊಳ್ಳಬೇಕು.ವಿದ್ಯಾಭ್ಯಾಸ,ದುಡಿಮೆಯ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಐವೈಎಫ್ ರಾಷ್ಟ್ರೀಯ ಮಂಡಳಿ ಸದಸ್ಯ ಎಚ್.ಎಂ.ಸಂತೋಷ್ ಕುಮಾರ್ ಮಾತನಾಡಿ,ದೇಶದಲ್ಲಿ ಬಿಜೆಪಿ ಆಡಳಿತ ಸರಕಾರ ಯುವಕರಿಗೆ 2ಕೋಟಿ ಉದ್ಯೋಗ ಸೃಷ್ಠಿಯ ಭರವಸೆ ಹುಸಿಯಾಗಿದೆ.ಯುವಕರುದೇಶದಲ್ಲಿನ ನಿರುದ್ಯೋಗ,ಉಚಿತ ಶಿಕ್ಷಣ,ಇತರೆ ಜ್ವಲಂತ ಸಮಸ್ಯೆಗಳನ್ನು ಮರೆತು ದೇವರು,ಧರ್ಮದ ಹೆಸರಿನಲ್ಲಿ ಕೋಮುವಾದದ ಕೂಪದಲ್ಲಿ ಮುಳುಗಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಎಐವೈಎಫ್ ಸಂಘಟನೆ ರಾಷ್ಟ್ರೀಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಂತೆ ವಿಶ್ವಪರಿಸರ ದಿನಾಚರಣೆ,ಮಾದಕವಸ್ತುಗಳ ನಿಷೇಧ ಕಾರ್ಯಕ್ರಮ,ಸ್ಥಳೀಯವಾಗಿ ಉದ್ಯೋಗಕ್ಕಾಗಿ ಕೈಗಾರಿಕೆ ಸ್ಥಾಪನೆಗಾಗಿ ಹೊರಾಟ,ಸಾಂಸ್ಕೃತಿಕ,ಸಾಹಿತ್ಯಿಕ,ಕ್ರೀಡಾ ಚಟುವಟಿಕೆಗಳ ಆಯೋಜನೆಯೊಂದಿಗೆ ಸಂಘಟನೆ ಬಲವರ್ಧನೆಗೊಳಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಕ್ಷರದಾಸೋಹ ಬಿಸಿಯೂಟ ತಯಾರಕರ ಸಂಘಟನೆಯ ರಮೇಶ್ ದಾಸರ್,ಸರೋಜಮ್ಮ,ಪಂಪಾಪತಿ ಟ್ರಸ್ಟ್ ನ ಯಲ್ಲಪ್ಪ,ಎಐವೈಎಫ್ ಜಿಲ್ಲಾಧ್ಯಕ್ಷ ರಾಜುಕೆರನಹಳ್ಳಿ,ಜಿಲ್ಲಾ ಪ್ರಧಾನಕಾರ್ಯದರ್ಶಿ ತಿಪ್ಪೇಸ್ವಾಮಿ,ಜಗಳೂರು ತಾಲೂಕು ಅಧ್ಯಕ್ಷ ಮಾದಿಹಳ್ಳಿ ಮಂಜುನಾಥ್,ಮುಖಂಡರಾದ ಗದುಗೇಶ್, ಪರುಶರಾಮ್,ಶೇಖರನಾಯ್ಕ,ಸೇರಿದಂತೆ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments