Tuesday, October 7, 2025
Homeಜಾಗೃತಿಡಿಜೆ ಯ ಬದಲಾಗಿ ಬೇಕಾದಷ್ಟು ಜಾನಪದ ಕಲಾತಂಡಗಳು , ಡೊಳ್ಳಿನ ತಂಡಗಳು ,ಭಜನಾ ತಂಡಗಳು, ಬೇರೆ...

ಡಿಜೆ ಯ ಬದಲಾಗಿ ಬೇಕಾದಷ್ಟು ಜಾನಪದ ಕಲಾತಂಡಗಳು , ಡೊಳ್ಳಿನ ತಂಡಗಳು ,ಭಜನಾ ತಂಡಗಳು, ಬೇರೆ ಬೇರೆ ರೀತಿಯ ಕಲಾತಂಡಗಳನ್ನು ಬಳಸಲು ಮಾಜಿ ಸೈನಿಕ ಮನವಿ

ಹೊನ್ನಾಳಿ: ಗೌರಿ ಗಣೇಶ ಹಬ್ಬದಲ್ಲಿ ಅಥವಾ ಯಾವುದೇ ಹಬ್ಬದಲ್ಲಿ ನಾವು ಡಿಜೆ ಯನ್ನು ಬಳಸಬಾರದು !, ಡಿಜೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅದು ಕರ್ಕಶವಾದಂತ ಶಬ್ದ ಅಷ್ಟೇ , ವಿಚಿತ್ರವಾದ ಶಬ್ದ , ಈ ಒಂದು ಕರ್ಕಶವಾದ ಶಬ್ದದಿಂದ ತುಂಬಾ ಸೌಂಡ್ ಇಟ್ಟು ಮ್ಯೂಸಿಕ್ ಕೇಳುವುದರಿಂದ ಕೆಲವರ ಕಿವಿ ತಮಟೆ ಸಹ ಒಡೆದು ಹೋಗುವ ಸಾಧ್ಯತೆಗಳು ಹೆಚ್ಚಿದೆ, ಅದರ ಜೊತೆಗೆ ಚಿಕ್ಕ ಚಿಕ್ಕ ಮಕ್ಕಳು ಪ್ರಾಣಿ ಪಕ್ಷಿಗಳು ಹೆದರುತ್ತವೆ, ದನ ಕರುಗಳು ಸಹ ಹೆದರುತ್ತವೆ, ಇದರಿಂದ ಯಾರಿಗೂ ಏನು ಉಪಯೋಗವಿಲ್ಲ !, ಈ ಡಿಜೆ ಯಿಂದ ಎಲ್ಲಾ ರೀತಿಯ ಪಶು ಪಕ್ಷಿ , ಪ್ರಾಣಿಗಳಿಗೆ , ವಯೋವೃದ್ಧರಿಗೆ, ಚಿಕ್ಕ ಚಿಕ್ಕ ಮಕ್ಕಳಿಗೆ ಮತ್ತು ಮಹಿಳೆಯರಿಗೆ ತುಂಬಾ ತುಂಬಾನೇ ತೊಂದರೆ ಯಾಗುತ್ತೆ, ಹಾನಿಯಾಗುತ್ತೇ , ಇದನ್ನು ಎಲ್ಲರೂ ಅರ್ಥ ಮಾಡ್ಕೋಬೇಕು, ದಯವಿಟ್ಟು , ಕೆಲವು ರಾಜಕಾರಣಿಗಳು ತಮ್ಮ ಬೇಳೆಕಾಳು ಬೇಯಿಸಿಕೊಳ್ಳ, ತಮ್ಮ ನಾಯಕತ್ವವನ್ನು ಹೆಚ್ಚಿಸಿಕೊಳ್ಳಲು ಯುವಕರನ್ನು ಬಳಸಿಕೊಂಡು ಡಿಜೆ ಗಾಗಿ ಹೋರಾಟಗಳನ್ನು ಮಾಡುತ್ತಿದ್ದಾರೆ , ಇದನ್ನು ನಾವು ಖಂಡಿಸುತ್ತೇವೆ, ಮಾಜಿ ಸೈನಿಕನಾದ ನಾನೂ ಖಂಡಿಸುತ್ತೇನೆ , ಇದು ನಮ್ಮ ಸಂಸ್ಕೃತಿ ಅಲ್ಲ , ಇದನ್ನು ಯಾವ ದೇವರೂ, ಯಾವ ಗಣೇಶ, ಗಣಪತಿಯೂ, ಯಾವ ದೇವಾನುದೇವತೆಯರೂ, ಇಷ್ಟಪಡುವುದಿಲ್ಲ , ಈ ಡಿಜೆ ಯ ಬದಲಾಗಿ ಬೇಕಾದಷ್ಟು ಜಾನಪದ ಕಲಾತಂಡಗಳು , ಡೊಳ್ಳಿನ ತಂಡಗಳು ,ಭಜನಾ ತಂಡಗಳು, ಬೇರೆ ಬೇರೆ ರೀತಿಯ ಕಲಾತಂಡಗಳು ಇವೆ , ಅವುಗಳನ್ನು ಕರೆಸಿ ಮೆರವಣಿಗೆಯನ್ನು ಮಾಡಿಸಬಹುದು ಅವರ ಜೊತೆ ಯುವಕ ಯುವತಿರು ಸಹ ಕುಣಿಯಬಹುದು ಎಲ್ಲಾ ಓಕೆ ಆದರೆ, ಈ ಡಿಜೆ ಯಾಕೆ !?, ಡಿಜೆಗಾಗಿ ಅಷ್ಟೊಂದು ಹಣವನ್ನು ಖರ್ಚು ಮಾಡುತ್ತೀರ ನೀವು !, ಅದೇ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗಣಪತಿ ಹೆಸರಿನಲ್ಲಿ ನೀವು ಒಳ್ಳೆಯ ವಿದ್ಯಾರ್ಥಿಗಳನ್ನು ಗುರುತಿಸಿ ,ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಬಡ ವಿದ್ಯಾರ್ಥಿಗಳನ್ನು ಗುರುತಿಸಿ , ಅವರಿಗೆ ನಿಮ್ಮ ಶ್ರೀ ಗಣೇಶ ಸೇವಾ ಟ್ರಸ್ಟ್ ನಿಂದ, ನಿಮ್ಮ ಸೇವಾ ಕಮಿಟಿಯಿಂದ ಧನ ಸಹಾಯವನ್ನು ಮಾಡಬಹುದು, ಆದ್ದರಿಂದ ದಯವಿಟ್ಟು ಇನ್ನು ಮುಂದಾದರೂ ಡಿಜೆ ಸೌಂಡ್ ಸಿಸ್ಟಂ ಅನ್ನು ಬಳಸುವುದ್ದನ್ನು ಬಿಡಿ, ಈ ಡಿಜೆ ಗೆ ಫುಲ್ ಸ್ಟಾಪ್ ಹಾಕಿ ದಯವಿಟ್ಟು , ಇದರಿಂದ ನಿಮ್ಮ ಮಕ್ಕಳಿಗೂ ಸಹ, ಮನೆಯ ಹಿರಿಯರಿಗೂ , ಪಶು ,ಪಕ್ಷಿ, ಪ್ರಾಣಿಗಳಿಗೂ ತೊಂದರೆ ಆಗುತ್ತೆ , ಗಣೇಶನ ಮೂರ್ತಿಯನ್ನು ಪ್ರತಿಯೊಂದು ಬೀದಿ ಬೀದಿಯಲ್ಲೂ ಸಹ ಇಡುತ್ತಾರೆ ಅಲ್ವಾ !?, ಆದರೆ ಕೆಲವರು, ಇದನ್ನೇ ಬೇರೆ ರೀತಿಯಲ್ಲಿ ಉಪಯೋಗಿಸಿಕೊಂಡು ಜನರಿಂದ, ವರ್ತಕರಿಂದ , ವ್ಯಾಪಾರಸ್ಥ ರಿಂದ, ರಾಜಕಾರಣಿಗಳಿಂದ ಹಣವನ್ನು ವಸೂಲಿ ಮಾಡಿ ಬಂದಂತಹ ಹಣದಲ್ಲಿ ದಾಸೋಹದ ಜೊತೆಗೆ ಡಿಜೆ ಯಂತಹ ಅನವಶ್ಯಕ ವಾದ ದೊಡ್ಡ ಗಾಡಿಯಲ್ಲಿ ದೊಡ್ಡ ದೊಡ್ಡ ಸ್ಪೀಕರ್ ಗಳನ್ನು ಹಾಕಿಕೊಂಡು ಕರ್ಕಶ ಶಬ್ದಗಳಿಂದ ಜನರ ನೆಮ್ಮದಿಯನ್ನು ಹಾಳು ಮಾಡಿಕೊಂಡು , ಯುವಕರನ್ನು ತಮ್ಮೊಂದಿಗೆ ಸೇರಿಸಿಕೊಂಡು ದಿಕ್ಕು ತಪ್ಪಿಸುತ್ತಿದ್ದಾರೆ, ದಯವಿಟ್ಟು ಇಂದಿನ ಯುವಕರು ಇದನ್ನು ಅರ್ಥಮಾಡಿಕೊಳ್ಳಬೇಕೆಂದು ವಾಸಪ್ಪ ಎಂ ಮಾಜಿ ಸೈನಿಕರು ಹೊನ್ನಾಳಿ ತಾಲೂಕ್ ದಾವಣಗೆರೆ ಜಿಲ್ಲೆ ಇವರು ವಿನಂತಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments