ಬೆಂಗಳೂರು:ಕನಕ ಎಜುಕೇಷನಲ್ ಟ್ರಸ್ಟ್, ಬೆಂಗಳೂರು ವತಿಯಿಂದ ಪ್ರಸ್ತುತ ವರ್ಷದಲ್ಲಿ ರಾಜ್ಯದ ಕುರುಬ ಸಮುದಾಯದ ಪದವಿ (ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಇ., ಎಂ.ಬಿ.ಬಿ.ಎಸ್.) ಮತ್ತು ಸ್ನಾತಕೋತ್ತರ ಪದವಿ (ಎಂ.ಎ.. ಎಂ.ಕಾಂ.ಎಮ್ ಎಸ್ ಸಿ,ಎಂ ಟೆಕ್,ಎಂ ಇ,… ಎಂ ಸಿ ಎ.….)ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಬಡ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲು ಉದ್ದೇಶಿಸಿದ್ದು ಅರ್ಹರು ದಿನಾಂಕ 10-08-2025ರೊಳಗೆ ಕಳೆದ ಸಾಲಿನಲ್ಲಿ ಉತ್ತೀರ್ಣರಾದ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಭಾವಚಿತ್ರವನ್ನು ಕನಕ ಎಜುಕೇಷನಲ್ ಟ್ರಸ್ಟ್, ವಿಜಯನಗರ ಹಾಸ್ಪಿಟಲ್, # 46, 17ನೇ ಕ್ರಾಸ್, ವಿಜಯನಗರ ಮೆಟ್ರೋ ಸ್ಟೇಷನ್ ಹತ್ತಿರ, ಎಂ. ಸಿ. ರಸ್ತೆ, ವಿಜಯನಗರ, ಬೆಂಗಳೂರು 560040 ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿಕೊಡಲು ಕೋರಿದೆ. ಅರ್ಜಿಗಳನ್ನು ಪರಿಶೀಲಿಸಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ 9620590789 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.