ದಾವಣಗೆರೆ (ಲೋಕಿಕೆರೆ ): ತಾಲೂಕಿನ ಅತ್ಯಂತ ದೊಡ್ಡಐತಿಹಾಸಿಕ ಗ್ರಾಮ ಲೋಕಿಕೆರೆ ಗ್ರಾಮದ ವ್ಯಾಸ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ಭಾನುವಾರ ಇಂದು ಜಾನಪದ ಮೇಳಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಧ್ಯಾಹ್ನ ವೈಭವ ದಿಂದ ಜರುಗಿತು.
ಇಲ್ಲಿನ ಐತಿಹಾಸಿಕ ಶ್ರೀ ವ್ಯಾಸ ಆಂಜನೇಯ ಪೌರಾಣಿಕವಾಗಿ ಶ್ರೀ ವ್ಯಾಸರಾಯರಿಂದ ಸ್ಥಾಪಿಸಲ್ಪಟ್ಟ ಈ ಆಂಜನೇಯ ಸ್ವಾಮಿ ರಥೋತ್ಸವದ ಅಂಗವಾಗಿ ಬೆಳಿಗ್ಗೆ ಸ್ವಾಮಿಗೆ ವಿಶೇಷ ವಿವಿಧ ಹೂಗಳಿಂದ ಮೂರ್ತಿಗೆ ಅಲಂಕಾರ ಗ್ರಾಮದ ಉತ್ಸವ ಮೂರ್ತಿಗಳಾದ ಬೀರಪ್ಪ ಕರಿಯಮ್ಮ ಉಚ್ಚಂಗಮ್ಮ ಬಸವಣ್ಣ. ಮೂರ್ತಿಗಳ ಹೊತ್ತ ಪಲ್ಲಕ್ಕಿ ಗಳು ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ರಥ ಬೀದಿಗೆ ಸಮೀಪಿಸುತ್ತಿದ್ದಂತೆ ಜನರಲ್ಲೆ ಶ್ರೀ ಆಂಜನೇಯ ಸ್ವಾಮಿಗೆ . ಜೈ ಜೈ. ಗೋವಿಂದ ಎನ್ನುತ್ತಾ ಭಕ್ತಿಯಿಂದ ಜೈಕಾರ ಹಾಕುತಿದ್ದ ಭಕ್ತಿ ಪಾರಕಷ್ಟೆ ಮುಟ್ಟಿತ್ತು.
ಸುಮಾರು 50 ಅಡಿ ಎತ್ತರದ ದೊಡ್ಡ ಗಾತ್ರದ ರಥೋತ್ಸವ ವಿವಿಧ ಬಣ್ಣ, ವರ್ಣಗಳ ಪಟ ಬಾವುಟಗಳಿಂದ ಕಂಗೊಳಿಸುತ್ತಿತ್ತು , ಬಾಳೆದಿಂಡು, ಎಳನೀರು, ಮಾವು, ಬಾಳೆ ಗೊನೆ ಗಳ ಅಲಂಕಾರ ಹಾಗೂ ದೊಡ್ಡ ಗಾತ್ರದ ಹೂವಿನ ಹಾರಗಳು ನೋಡುಗರ ಕಣ್ಮನ ಸೆಳೆಯುತಿತ್ತು.
ಸ್ವಾಮಿಯ ಮೂರ್ತಿಯನ್ನು ರಥೋತ್ಸವದ ಮೇಲೆ ಆರೋಹಣ ಮಾಡುತ್ತಿದ್ದಂತೆ ಭಕ್ತರು ತೆಂಗಿನಕಾಯಿ, ರಥದ ಮೇಲೆ ಉತ್ತುತಿ, ಬಾಳೆಹಣ್ಣುತೂರುವ ದೃಶ್ಯ ರಥದ ಗಾಲಿಗಳಿಗೆ ಕಾಯಿ ಗಳ ಒಡೆದು ಭಕ್ತಿ ಸಮರ್ಪಿಸಿದರು ಯುವಕರು ಬಾಳೆಹಣ್ಣನ್ನು ತಾ ಮುಂದು, ನಾ ಮುಂದು ಎಂದು ರಥೋತ್ಸವದ ಮೇಲೆ ಎಸೆಯುವ ಮೂಲಕ ಹನುಮಾನ್ ಗೇ ತಮಮ್ದೇ ರೀತಿಯಲ್ಲಿ ಉತ್ಸಹ ತೋ ರು ತಿ ದ್ದರು . ಮಹಿಳೆಯರು ಮಕ್ಕಳು ರಥ ಬೀದಿಯ ಪಕ್ಕಗಳಲ್ಲಿ ನಿಂತು ರಥೋತ್ಸವವನ್ನು ನೋಡಿ ಕಣ್ತುಂಬಿಕೊಂಡರು.
ಪ್ರತಿ ವರ್ಷ ಸುಡು ಬಿಸಿಲಿನಲ್ಲಿ ಮಧ್ಯಾಹ್ನ ರಥೋತ್ಸವ ಜರಗುತ್ತಿತ್ತು ಆಗ ಜನರು ಎಲ್ಲಾ ಚೆಲ್ಲಾ ಪಿಲ್ಲಿಯಾಗಿ ನೆರಳಲ್ಲಿ ನಿಂತು ನೋಡುತ್ತಿದ್ದರು ಆದರೆ ಈ ಬಾರಿ ಮೋಡಗಳು ಆವರಿಸಿ ತಂಪು ವಾತಾವರಣ ಕೀಕ್ಕಿರಿದ ಸುಮಾರು ಹತ್ತು ಸಾವಿರ ಜನರು ಕದಲದೆ ಭಕ್ತಿ ಪ ರುಷರಾಗಿ ರಥೋತ್ಸವ ದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆಯುಸೇರಿದಂತೆ ಹೊರಗಿನಿಂದ ಬಂದಂತ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನ ಈ ಭಾರಿಯೂ ಎಲ್, ಎಂ, ಕೆ ಸೇರಾಮಿಕ್ಸ್ ಹಾಗೂ ಸಮಿತಿ ವತಿಯಿಂದ ನಡೆಯಿತು.
ರಥೋತ್ಸವ ನಂತರ ಮುದ್ರೆ ಹಾಕುವ, ಆಂಜೆನೇಯ ನಿಗೆ ಸಾಲು ಮುದ್ರೆ ದಾಸಪ್ಪನ ಮಾಡುವ, ಬಾಯಿ ಬೀಗ ಹಾಕುವ, ಬರೀ ವದ್ದೆ ಬಟ್ಟೆಯಲ್ಲಿ ದಿಂಡು ಉರುಳುವ ಕಾಯಕ ಗಳು ನೆರವೇರಿದವು, ಈ ಸಂದರ್ಭದಲ್ಲಿ ಜಾನಪದ ಕಲೆತಂಡಗಳು ಡೊಳ್ಳು, ಭಜನೆ, ವೀರಗಾಸೆ ಕುಣಿತ, ಮಂಗಳವಾದ್ಯಗಳೊಂದಿಗೆ ರಥೋತ್ಸವ ದಲ್ಲಿ ಪಾಲ್ಗೊಂಡು
ಕಲಾ ಭಕ್ತಿ ಮೆರೆದವು.
ಸಂಜೆ ದೇವಾಲಯದ ಎದಿರು ಇರುವ ಕಲ್ಲಿನ ಹೊoಡದಲ್ಲಿ ನೀರು ತುಂಬಿಸಿ ಪರಸ್ಪರ ಹೋಕುಳಿ ಎರಚುವ ಧಾರ್ಮಿಕ ಕಾರ್ಯ ಜರುಗಿತು.

