ದಾವಣಗೆರೆ:ಕಟ್ಟಡ ಕಾರ್ಮಿಕ ನಿಗಮ ಮಂಡಳಿಯು ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಕೊಡುವುದನ್ನು ವಿಳಂಭ ಮಾಡುತ್ತಿರುವುದನ್ನು ವಿಶ್ವಮಾನವ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಎನ್.ಜೆ.ನಿಂಗಪ್ಪ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಖಂಡಿಸಿದ್ದಾರೆ.ಕೂಡಲೇ ಅಧಿಕಾರಿಗಳು ಕಟ್ಟಡ ಕಾರ್ಮಿಕರ ಖಾತೆಗಳಿಗೆಗೆ ಜಮೆಗೊಳಿಸಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ..
ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಒಳಪಟ್ಟಿರುವ ಕಾರ್ಮಿಕರಿಗೆ ಪಿಂಚಣಿ ತಿಂಗಳಿಗೆ 3 ಸಾವಿರ ರೂಪಾಯಿ 60 ವರ್ಷದವರಿಗೆ ಕೊಡುತ್ತಿದೆ. 60 ವರ್ಷದವರಿಗೂ ಶಕ್ತಿ ಇರುವರಿಗೂ ದುಡಿಯುತ್ತವೆ. ಮನೆಯಲ್ಲಿ ಅವರಿಗೆ ಸ್ವಂತ ಖರ್ಚು ಮನೆ ಖರ್ಚಿಗೆ, ಆಸ್ಪತ್ರೆ, ಅವರ ದಿನ ನಿತ್ಯ ಖರ್ಚುಗಳಿಗೆ 3 ಸಾವಿರ ರೂಪಾಯಿಗಳ ಮೇಲೆ ಅವಲಂಬಿಸಿರುತ್ತವೆ. ಆದರೆ ಕಟ್ಟಡ ಮಂಡಳಿಯಿಂದ ವರ್ಷ ಮೇಲ್ಪಟ್ಟ ಕೆಲವರಿಗೆ 5-6 ತಿಂಗಳಿನಿಂದ ಪಿಂಚಣಿ ತಿಂಗಳು ಅವರ ಬ್ಯಾಂಕ್ ಖಾತೆಗೆ ಬರುತ್ತಿಲ್ಲ. ತಿಂಗಳು ಬ್ಯಾಂಕ್ ಪಾಸ್‌ಬುಕ್, ವೃದ್ಧರ ಕಾರ್ಮಿಕರ ಬ್ಯಾಂಕ್‌ಗೆ ಅಲೆದಾಟ ಮಡುತ್ತಿದ್ದರೆ ಕೂಡಲೇ ಕಟ್ಟಡ ಮಂಡಳಿ ಬಾಕಿ ಇರುವ ಪಿಂಚಿಣಿ ಹಣವನ್ನು ಬ್ಯಾಂಕ್ ಖಾತೆಗೆ ಫಲಾನುಭವಿಗಳಿಗೆ ಹಣ ಹಾಕಬೇಕು. ಕರ್ನಾಟಕ ಕಟ್ಟಡ ೩ ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 6 ಸಾವಿರ ರೂಪಾಯಿ ಪಿಂಚಣಿ ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕ್ವಾರಿ ಒಡೆಯುವ ಕಾರ್ಮಿಕರ ಮತ್ತು ಇತರೇ ಕಾರ್ಮಿಕರ ಫೆಡರೇಷನ್ ಒತ್ತಾಯಿಸುತ್ತದೆ. (ಹೆಚ್.ಕೆ.ಆರ್ ಸಂಸ್ಥಾಪಕ ಅಧ್ಯಕ್ಷರ ಬಣ) ವಿಶ್ವ ಮಾನವ ಕಟ್ಟಡ ಕಾರ್ಮಿಕರ ಮತ್ತು ಇತರೇ ಕಾರ್ಮಿಕರ ಸಂಘ, ಕಾರ್ಮಿಕರ ಸಚಿವ ಸಂತೋಷ್ ಲಾಡ್ ಮತ್ತು ಕಟ್ಟಡ ನಿಗಮ ಮಂಡಳಿ ಕಾರ್ಮಿಕ ಆಯುಕ್ತ ರವಿ. ಡಿ. ಚಣ್ಣನ್ನನವರ್‌ರವರಿಗೆ ಒತ್ತಾಯಿಸುತ್ತದೆ. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಚಳುವಳಿ ರೂಪಿಸಲಾಗುವುದು. ಈ ಮೂಲಕ ಒತ್ತಾಯಿಸುತ್ತದೆ.

