Homeರಾಜಕೀಯವೈಯಕ್ತಿಕ ಟೀಕೆ ಬಿಡಿ, ಅಭಿವೃದ್ಧಿ ಚರ್ಚೆಗೆ ಬನ್ನಿ:ಬಿಜೆಪಿ ಗೆ ಕಾಂಗ್ರೆಸ್ ಸವಾಲು

ವೈಯಕ್ತಿಕ ಟೀಕೆ ಬಿಡಿ, ಅಭಿವೃದ್ಧಿ ಚರ್ಚೆಗೆ ಬನ್ನಿ:ಬಿಜೆಪಿ ಗೆ ಕಾಂಗ್ರೆಸ್ ಸವಾಲು

ಚನ್ನಗಿರಿ: ಅಕ್ರಮ ಜೂಜಾಟಕ್ಕೆ ಕಾಂಗ್ರೆಸ್ ಬೆಂಬಲವಿಲ್ಲ. ಶಾಸಕರೇ ಮುಖ್ಯಮಂತ್ರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಬಿಜೆಪಿಯವರು ಆಧಾರರಹಿತ ಆರೋಪಗಳನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಮಲಹಾಳ್ ಶಶಿಧರ್ ಸವಾಲು ಹಾಕಿದರು.

ಶುಕ್ರವಾರ ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಉಬ್ರಾಣಿ ಮತ್ತು ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಜಯ್ ಪಾಟೀಲ್ ಮಾತನಾಡಿ, ಬಡ ಕುಟುಂಬದಿಂದ ಬಂದವರು ಶಾಸಕರಾದರೆ ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಹಿಂದಿನ ಶಾಸಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಭಿವೃದ್ಧಿ ಮಾಡಿದ್ದಾರೆ. ಅದೇ ರೀತಿ ಹಾಲಿ ಶಾಸಕರೂ ಕೆಲಸ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಅನುಯಾಯಿಯಾಗಿರುವುದು ಹೊಸ ವಿಷಯವಲ್ಲ. ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಲಿ. ರಾಜಕೀಯವನ್ನು ರಾಜಕೀಯದ ಸಮಯದಲ್ಲಿ ಮಾಡೋಣ, ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸೋಣ ಎಂದು ತಿರುಗೇಟು ನೀಡಿದರು.

ತಾಲ್ಲೂಕಿನ ಮೂರು ನೋಂದಾಯಿತ ರಿಕ್ರಿಯೇಷನ್ ಕ್ಲಬ್‌ಗಳನ್ನು ಪೊಲೀಸ್ ಇಲಾಖೆ ಸ್ಥಗಿತಗೊಳಿಸಿದ್ದು, ಕ್ಲಬ್‌ಗಳ ಪರವಾಗಿ ನ್ಯಾಯಾಲಯದ ಮೊರೆ ಹೋಗಲಾಗಿದೆ. ಕಾನೂನು ಪ್ರಕ್ರಿಯೆಗೆ ಗೌರವ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಶ್ರೀಕಾಂತ್, ಮಂಜಣ್ಣ, ಶ್ರೀ ಕಾಂತ್, ನಿಂಗಪ್ಪ, ಗಾದ್ರಿ ರಾಜು, ಎಂ. ಯೋಗೇಶ್, ಜಬಿವುಲ್ಲಾ, ಪ್ರಕಾಶ್, ಹನುಮಂತಪ್ಪ, ಗೋಪಿ, ಸುರೇಶ್, ಅಜೇಯ್, ಮಧು, ರಾಕೇಶ್, ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments