ಕಲಬುರಗಿ:ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದಿಂದ ನೀಡಲಾಗುವ ಮಾಲತಿ ಮಹಾರುದ್ರಪ್ಪ ಖೇಣಿ ‘ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕಲಬುರಗಿ ಶರಣಬಸವೇಶ್ವರ ಸಂಸ್ಥಾನಮಠದ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಅವರಿಗೆ ಅಭಿನಂದನೆಗಳು.
ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮ ಸೇವೆ, ತ್ಯಾಗ, ಸಮರ್ಪಣೆ ಮತ್ತು ಮಾತೃಶಕ್ತಿಯ ಆದರ್ಶಗಳ ಮೂಲಕ ಸಮಾಜಕ್ಕೆ ಪ್ರೇರಣೆಯಾಗಿರುವ ಅವರ ಸಾಧನೆಗೆ ಈ ಗೌರವ ಸಂದಿರುವುದು ಸಂತಸ ತಂದಿದೆ.
ಅವರ ಸೇವಾ ಕೈಂಕರ್ಯಗಳು ಜನರಿಗೆ ಇನ್ನಷ್ಟು ಸ್ಫೂರ್ತಿಯಾಗಲಿ, ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸುತ್ತೇವೆ..

