ದಾವಣಗೆರೆ:ದಾವಣಗೆರೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಭಲ ಸ್ಪರ್ಧಾ ಆಕಾಂಕ್ಷಿ ದಾವಣಗೆರೆ ಲೋಕಸಭೆಯ ಹ್ಯಾಟ್ರಿಕ್ ಸಂಸದರಾಗಿದ್ದ ದಿ.ಶ್ರೀ ವೇದಮೂರ್ತಿ ಚನ್ನಯ್ಯ ಒಡೆಯರ್ ರವರ ಸುಪುತ್ರರಾದ ಬಿಬಿಎಂಪಿ.ಯ ನಿವೃತ್ತ ಅಭಿಯಂತರರಾದ ಶ್ರೀ ಯುತ ಶಿವಕುಮಾರ್ ಒಡೆಯರ್ ರವರ ಹುಟ್ಟೂರಾದ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಆ ಭಾಗದ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಸಭೆಸೇರಿ ಶ್ರೀ ಶಿವಕುಮಾರ್ ರವರಿಗೆ ಈ ಬಾರಿ ದಾವಣಗೆರೆ ಲೋಕಸಭೆಗೆ ಟಿಕೆಟ್ ಕೊಡಿಸಲು ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ರವರು ಹಾಗೂ ರಾಜ್ಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಮತ್ತು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಾಗಬೇಕು.ಈ ಕ್ಷೇತ್ರದ ಜನ ಚನ್ನಯ್ಯ ಒಡೆಯರ್ ರವರ ಪ್ರಾಮಾಣಿಕತೆಗೆ ನೂರಕ್ಕೆ ನೂರರಷ್ಟು ಅಭಿಮಾನದ ಮೆಚ್ಚುಗೆ ವ್ಯಕ್ತಪಡಿಸಿ ಸ್ಮರಿಕೊಂಡರು.
ಶಿವಕುಮಾರ್ ಒಡೆಯರ್ ರವರಿಗೆ ಹೈಕಮಾಂಡ್ ಟಿಕೇಟು ಕೊಡಿಸಿದರೆ ಸತ್ಯನಿಷ್ಟೆ ಪ್ರಾಮಾಣಿಕತೆಗೆ ಹೆಚ್ಚು ಒತ್ತುಕೊಟ್ಟಂತಾಗುತ್ತದೆ ನಾವೆಲ್ಲರೂ ಜಾತಿ,ಧರ್ಮ,ಗಳ ಬೇಧವಿಲ್ಲದೆ ಕ್ಷೇತ್ರದಾದ್ಯಂತ ಪ್ರಚಾರಕಾರ್ಯದಲ್ಲಿ ನಾವೂ ತೊಡಗಿಸಿಕೊಂಡು ಶಿವಕುಮಾರ್ ರವರ ಗೆಲುವಿಗೆ ಶ್ರಮಿಸುವದಾಗಿ ಶಿವಕುಮಾರ್ ರವರಿಗೆ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಳಿಚೋಡ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು,ಸಮಾಜಸೇವಕರು,ರೈತರು ಗ್ರಾಮಸ್ತರು,ಹಿತೈಷಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಈ ಸಭೆಯ ಅಧ್ಯಕ್ಷತೆಯನ್ನು ಡಾ|ಉದಯಶಂಕರ್ ಒಡೆಯರ್ ರವರುವಹಿಸಿದ್ದರು.

