ಈಗಾಗಲೇ ರಾಷ್ಟ್ರ, ರಾಜ್ಯ, ತಾಲ್ಲೂಕು ಮಟ್ಟದಲ್ಲಿ ಅನೇಕ ಪ್ರಶಸ್ತಿಗಳು, ಅನೇಕ ರಂಗಗಳಲ್ಲಿ ದುಡಿಯುತ್ತಿರುವ ದುಡಿದು ನಿವೃತ್ತಿ ಹೊಂದಿರುವ ಅನೇಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿರುವುದು ನಮ್ಮ ದೇಶದ ಸಂಸ್ಕೃತಿಯಾಗಿದೆ.
ಕೇಂದ್ರ-ರಾಜ್ಯ ಸರ್ಕಾರಗಳು ಅನೇಕ ಪ್ರಶಸ್ತಿಗಳನ್ನು ಪ್ರತೀ ವರ್ಷವೂ ನೀಡಿ ಗೌರವಿಸುತ್ತಾ ಬರುವುದು ನಮಗೆಲ್ಲಾ ತಿಳಿದಿರುತ್ತದೆ. ಹಾಗೇ ಖಾಸಗಿಯಾಗಿ ಮಠಾಧೀಶರು, ಸಂಘ-ಸಂಸ್ಥೆಗಳು ಇನ್ನು ಅನೇಕ ಕ್ರಿಯಾಶೀಲ ಸಂಘಟನೆಯ ಮೂಲಕ ಅವರ ಶಕ್ತಾನುಸಾರ ಸಮಾಜದ ಅನೇಕ ಕ್ಷೇತ್ರಗಳಲ್ಲಿ ದುಡಿದ ದುಡಿಯುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ನಮ್ಮ ದೇಶ ಹಾಗೂ ರಾಜ್ಯಗಳ ಸುಸಂಸ್ಕೃತಿಯಾಗಿದೆ.
ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ತುಂಬಾ ಕಡಿಮೆ. ಪ್ರಸ್ತುತ “ಪ್ರಕೃತಿ ಚಿಕಿತ್ಸೆ’ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉತ್ತಮ ಸಿಬ್ಬಂದಿಯನ್ನು ಗುರುತಿಸಿ ಗೌರವಿಸುವುದು ಎಲ್ಲಿಯೂ ಇಲ್ಲ ಅನ್ನಬಹುದು.
ರಾಜ್ಯದ ಶಿರಸಿಯಿಂದ 2020ರಿಂದ ಪ್ರಥಮ ಬಾರಿಗೆ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಉತ್ತಮ ಸಿಬ್ಬಂದಿಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಶಿರಸಿಯ ನಿಸರ್ಗ ಆಸ್ಪತ್ರೆ ಹಾಗೂ ಹಲೋ ಕನ್ನಡಿಗ ವಾರಪತ್ರಿಕೆ ಸಂಪಾದಕ ಸಿ.ವೇದಮೂರ್ತಿ ದಾವಣಗೆರೆ ಇವರಿಂದ ಪ್ರಾರಂಭವಾಗಿರುತ್ತದೆ.
ಅದೇ ರೀತಿ ಈ ವರ್ಷ ಶ್ರೀ ಅನಂತರಾವ್ ಬಿಳಗಿ ಸ್ಮಾರಕ, ನಿಸರ್ಗ ಆಸ್ಪತ್ರೆ ಹಾಗೂ ಹಲೋ ಕನ್ನಡಿಗ ವಾರಪತ್ರಿಕೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 02-10-2023 ರಂದು “ನಿಸರ್ಗ ಸಿರಿ” ಪ್ರಶಸ್ತಿ ನೀಡಿ ಗೌರವಿಸುವುದು. ಇಂತಹ ಕಾರ್ಯಗಳು ಹೆಚ್ಚು ನಡೆಯಲಿ ಹಾಗೂ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉತ್ತಮ ಸಿಬ್ಬಂದಿಯನ್ನು ಗುರುತಿಸಿ ಗೌರವಿಸುವುದು ನಮ್ಮ ದೇಶದ ಸಂಸ್ಕೃತಿಯಾಗಲಿ.
ಮೂರನೇ ವರ್ಷದ ಪ್ರಶಸ್ತಿ ಸ್ವೀಕರಿಸುವವರು ನಿಸರ್ಗ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಮಾರಿ ಶೋಭಾ ವಿ ಲಮಾಣಿ ಹಾಗೂ ಶ್ರೀ ವಿನಯ ಪರಮೇಶ್ವರ ನಾಯ್ಕ ಇವರಿಗೆ ದಿನಾಂಕ 02-10-2023 ರಂದು ಅವರ ಉತ್ತಮ ಸೇವೆಯನ್ನು ಗುರುತಿಸಿ “ನಿಸರ್ಗ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಗುವುದು ಈ ಪ್ರಶಸ್ತಿ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಮೊದಲ ಪ್ರಶಸ್ತಿಯಾಗಲಿದೆ.
ಸಂದರ್ಭ ಗಾಂಧಿ ಜಯಂತಿ ಆಚರಣೆ ಹಾಗೂ ನಿಸರ್ಗ ಆಸ್ಪತ್ರೆ ನೂತನ ಕಟ್ಟಡದ 11ನೇ ವಾರ್ಷಿಕೋತ್ಸವ ನೆನಪಿಗಾಗಿ ಈ ಪ್ರಶಸ್ತಿಯನ್ನು ಉತ್ತಮ ಸಿಬ್ಬಂದಿಗೆ ನೀಡಿ ಗೌರವಿಸುವ ಈ ಪ್ರಶಸ್ತಿಯು ಇನ್ನು ಮುಂದೆ ಪ್ರತೀ ವರ್ಷವೂ ಮುಂದುವರಿಯಲಿದೆ.
ಪ್ರಶಸ್ತಿ ಸಂಸ್ಥಾಪಕರು : “ನಿಸರ್ಗ ಸಿರಿ” ಪ್ರಶಸ್ತಿಯನ್ನು ದಾವಣಗೆರೆಯ ಪತ್ರಕರ್ತರಾದ ಸಿ. ವೇದಮೂರ್ತಿಯವರು ಸ್ಥಾಪಿಸಿದ್ದು, ಈಗಾಗಲೇ ಮೈಸೂರಿನಲ್ಲಿ “ಮುರಘಾಶ್ರೀ’ ಪ್ರಶಸ್ತಿ, ದಾವಣಗೆರೆಯಲ್ಲಿ ‘ಮಾಧ್ಯಮ” ಪ್ರಶಸ್ತಿಗಳನ್ನು 20 ವರ್ಷಗಳಿಂದ ನೀಡುತ್ತಾ ಬಂದಿರುತ್ತಾರೆ. ಈಗ ಶಿರಸಿಯಲ್ಲಿ 3ನೇ ಪ್ರಶಸ್ತಿಯಾಗಿ “ನಿಸರ್ಗ ಸಿರಿ” ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಪ್ರತೀ ವರ್ಷವೂ ಈ ಪ್ರಶಸ್ತಿಯನ್ನು ನೀಡಲಿದ್ದಾರೆ. ಈ ಹಿಂದೆಯೂ ಕೂಡ ಶಿರಸಿ ಮತ್ತು ದಾವಣಗೆರೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಾಕಷ್ಟು ಸಮಾಜ ಸೇವಕರನ್ನು, ಕನ್ನಡಪರ ಹೋರಾಟಗಾರರನ್ನು ಗುರುತಿಸಿ, ಸನ್ಮಾನಿಸಿರುತ್ತಾರೆ.


ದಿನಾಂಕ 02-10-2023 ಸೋಮವಾರ ಸಮಯ : ಮಧ್ಯಾಹ್ನ 12.00 ಗಂಟೆಗೆ ಶಿರಸಿಯ ನಿಸರ್ಗ ಆಸ್ಪತ್ರೆ ಸಭಾಂಗಣದಲ್ಲಿ “ನಿಸರ್ಗ ಸಿರಿ’ ಪ್ರಶಸ್ತಿ ಸ್ವೀಕರಿಸಲಿರುವ ಉತ್ತಮ ಸಿಬ್ಬಂದಿಗಳು