ದಾವಣಗೆರೆ:ಮಾಜಿ ಲೋಕಸಭಾ ಹ್ಯಾಟ್ರಿಕ್ ಸದಸ್ಯರಾಗಿದ್ದ ಸನ್ಮಾನ್ಯ ಗೌರವಾನ್ವಿತರಾದ ದಿ. ಶ್ರೀ ಚನ್ನಯ್ಯ ಒಡೆಯರ್ ರವರ ಸುಪುತ್ರರು ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳಾದ ಶ್ರೀ ಶಿವಕುಮಾರ್ ಒಡೆಯರ್ ಅವರು ಇಂದು ಚನ್ನಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಲಹಾಳ್ ಮತ್ತು ಚನ್ನಗಿರಿ ಸೇರಿದಂತೆ ಇತರೆ ಕಡೆಗಳಲ್ಲಿ ಭೇಟಿ ನೀಡಿ ಮುಖಂಡರೊಂದಿಗೆ ಸಭೆ ನಡೆಸಿದರು. ಹಿರಿಯರು ಮಾಜಿ ಸಂಸದರಾದ ದಿ.ಚನ್ನಯ್ಯ ಒಡೆಯರ್ ರವರ ಪ್ರಾಮಾಣಿಕ ರಾಜಕಾರಣವನ್ನು ಸ್ಮರಸಿಕೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಮಲಹಾಳ್ ಕರಿಸಿದ್ದಯ್ಯ ಒಡೆಯರ್, ಶಶಿಧರ್, ತಿಮ್ಮಪ್ಪ, ಚನ್ನಗಿರಿ ಸಮಾಜದ ಮುಖಂಡರುಗಳಾದ ಶಿವಣ್ಣ, ತ್ಯಾವಣಗಿ ಹಾಲಪ್ಪ, ಶಿವರುದ್ರಪ್ಪ, ಮತ್ತು ಅನೇಕ ಮುಖಂಡರು ಭಾಗವಹಿಸಿದ್ದರು.
