ದಾವಣಗೆರೆ:ದಿನಾಂಕ : 02-10-2023 ಸೋಮವಾರ ಬೆಳಗ್ಗೆ 11.00 ಗಂಟೆಗೆ ಸ್ಥಳ : ಶ್ರೀಮದ್ ಅಭಿನವ ರೇಣುಕ ಮಂದಿರ, ಪಿ.ಬಿ.ರಸ್ತೆ, ದಾವಣಗೆರೆ ಯಲ್ಲಿ ಪರಮ ಪೂಜ್ಯಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ ಇವರ ದಿವ್ಯ ಸಾನಿಧ್ಯದಲ್ಲಿ
ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ
ಕನಕ ಗುರುಪೀಠ, ಶ್ರೀ ಕ್ಷೇತ್ರ ಕಾಗಿನೆಲೆ ಯವರು ಉದ್ಘಾಟಿಸಲಿರುವರು ಮತ್ತು
ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು
ವಾಲ್ಮೀಕಿಗುರುಪೀಠ ರಾಜನಹಳ್ಳಿ,
ಶ್ರೀ ಪರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಬ್ರಹ್ಮ ವಿದ್ಯಾನಗರ, ಶ್ರೀ ಭಾಗೀರಥ ಗುರುಪೀಠ ಹೊಸದುರ್ಗ,ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ
ಕನಕ ಗುರುಪೀಠ, ಶಾಖಾಮಠ ಹೊಸದುರ್ಗ,
ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಮಹಾಸಂಸ್ಥಾನ, ಭೋವಿ ಗುರುಪೀಠ, ಚಿತ್ರದುರ್ಗ,ಶ್ರೀ ರಾಂಡಭೀಷ್ಮ ಚೌಡಯ್ಯ ಸ್ವಾಮೀಜ ಶ್ರೀ ಅಂಬಿಗರ ಚೌಡಯ್ಯ ಗುರುಪೀಠ, ನರಸೀಪುರ ಹಾವೇರಿ,ಶ್ರೀ ಡಾ. ಬಸವ ಮಡಿವಾಳ ಮಾಚೀದೇವ ಸ್ವಾಮೀಜಿ ಮಡಿವಾಳ ಗುರುಪೀಠ, ಚಿತ್ರದುರ್ಗ,ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಹಾಗೂ ಸಲಕರಣೆಗಳ ವಿತರಣೆಯನ್ನು
ಶ್ರೀ ಷ|| ಬ್ರ|| ಡಾ. ಒಡೆಯರ್ ಚನ್ನಮಲ್ಲಕಾರ್ಜುನ ಶ್ರೀ 108 ಜಗದ್ಗುರು ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಶಿವಾಚಾರ್ಯ ಸ್ವಾಮಿಗಳು ಹಿರೇಕಲ್ಮಶ ಹೊನ್ನಾಳಿ,ವೃಷಭಪುರಿ ಮಹಾಸಂಸ್ಥಾನ ಮಠ ನಂದಿಗುಡಿ,ಮುಂತಾದರು ವಿತರಿಸುವರು. ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿರವರ ಭಾವಚಿತ್ರಕ್ಕೆ ಪುಷ್ಪ ನಮನ ಶ್ರೀ ಬಸವಪ್ರಭು ಮಹಾಸ್ವಾಮಿಗಳು ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಜಿ ಶ್ರೀ ಬಂಜಾರ ಗುರುಪೀಠ, ಚಿತ್ರದುರ್ಗ ಶ್ರೀ ಮೌಲ್ಯ ಶಾಹಿದ್ ರಜಾ, ದಾವಣಗೆರೆ
ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ
ಮಾದಾರ ಚೆನ್ನಯ್ಯ ಗುರುಪೀಠ, ಚಿತ್ರದುರ್ಗ
ವಿರಕ್ತಮಠ, ದಾವಣಗೆರೆ ಶ್ರೀ ಷ। ಬ್ರ।। ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಪುರವರ್ಗ ಹೀರೇಮತ, ಶ್ರೀಕ್ಷೇತ್ರ ಆವರಗೊಳ್ಳ, ದಾವಣಗೆರೆ,ಉಪಸ್ಥಿತರಿರುವರು.
ಅಧ್ಯಕ್ಷತೆಯನ್ನು ಸಂಸ್ಥಾಪಕ ನಿರ್ದೇಶಕರು, ಇನ್ಸೆಟ್ಸ್ ಐಎಎಸ್ ಸಂಸ್ಥೆ, ಬೆಂಗಳೂರು, ಜಮ್ಮು-ಕಾಶ್ಮೀರ, ಲಕ್ಷ್ಮೀ, ಹೈದ್ರಾಬಾದ್, ಮೈಸೂರು, ಧಾರವಾಡ,ದಾವಣಗೆರೆ ಜಿಲ್ಲೆಯ ಅಭಿವೃದ್ಧಿಯ ಕನಸುಗಾರರಾದ ಶ್ರೀ ವಿನಯ್‌ಕುಮಾರ್ ಜಿ.ಬಿ., ಕಕ್ಕರಗೊಳ್ಳ ವಹಿಸುವರು.

ವಿನಯ್ ಕುಮಾರ್ ಜಿ.ಬಿ. ಅವರು ಸದಾ ಯುವಕರ ಪಾಲಿಗೆ ವರದಾನವಾಗಿದ್ದಾರೆ. ಇವರ ಕಾರ್ಯ ಶ್ಲಾಘನೀಯ. ಎಲ್ಲರಿಂದ ಪ್ರಶಂಸೆಗೆ ಒಳಪಡುತ್ತಿದ್ದಾರೆ. ದಾವಣಗೆರೆ ಮತ್ತು ಜಿಲ್ಲೆಯ ಅಭಿವೃದ್ಧಿಯತ್ತ ಚಿಂತಿಸುವ ಇವರ ಮನಸ್ಸು ಸದಾ ಕಾರ್ಯಶೀಲವಾಗಿರುತ್ತದೆ. ಏನಾದರೂ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಜನರಿಗೆ ಆಸರೆಯಾಗುತ್ತಿದ್ದಾರೆ.

ವಿನಯ್ ಕುಮಾರ್ ಜಿ.ಬಿ. ಅವರದು ಅಪರೂಪದ ವ್ಯಕ್ತಿತ್ವ ಸಮಾಜಕ್ಕೆ ಒಂದು ದೊಡ್ಡ ಶಕ್ತಿ. ಪ್ರತಿಷ್ಠಿತ ಇನ್ಸೆಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು, ದಾವಣಗೆರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಕನಸು ಹೊತ್ತ ಕನಸುಗಾರರು. ಇಡೀ ಜಿಲ್ಲೆಗೆ ಶಾಶ್ವತ ಸಾಮಾಜಿಕ ಪರಿವರ್ತನೆ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೃಢ ನಿರ್ಧಾರ ಮಾಡಿ ಕಾರ್ಯೋನ್ಮುಖರಾಗಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಅವರ ಪ್ರತಿಷ್ಠಿತ ಸಂಸ್ಥೆಯ ಮುಖಾಂತರ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶಕರಾಗಿದ್ದಾರೆ. ದಾವಣಗೆರೆ ಮತ್ತು ಸುತ್ತಮುತ್ತಲಿನ ಜನತೆಗೆ ಏನಾದರೂ ಕೊಡುಗೆ ನೀಡುವ ಹಂಬಲದಿಂದ ಸಮಾಜ ಸೇವೆಗೆ ಮುಂದಾಗಿದ್ದಾರೆ.
ಇವರಿಗೆ ವಿಕಲಚೇತನರೆಂದರೆ ಎಲ್ಲಿಲ್ಲದ ಪ್ರೀತಿ ಮತ್ತು ಅಭಿಮಾನ. ಅಂಗವೈಕಲ್ಯ ಹೊಂದಿದ್ದರೂ ಅವರುಗಳು ಏನಾದರೂ ಸಾಧನೆ ಮಾಡಿ ಜೀವನದಲ್ಲಿ ಸ್ವಾವಲಂಬಿಯಾಗಬೇಕೆಂಬ ಆಶಯ ಇವರದು. ಆ. 2 ರಂದು ಮಹಾತ್ಮಾ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಜಯಂತಿ ಆಚರಣೆ ಜೊತೆಗೆ ವಿಕಲಚೇತನರಿಗೆ ಅಗತ್ಯವಾದ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ತಮ್ಮಲ್ಲಿರುವ ಮಾನವೀಯ ಗುಣಗಳನ್ನು ಹೊರಹಾಕಿದ್ದಾರೆ. ನಾಡಿನ ವಿವಿಧ ಧರ್ಮಗಳ ಮಠಾಧೀಶರನ್ನು ಅಹ್ವಾನಿಸಿ ಅವರ ದಿವ್ಯ ಸಾನಿಧ್ಯದಲ್ಲಿ ಸುಂದರ ಸಮಾರಂಭದ ಮುಖೇನ ಸಮಾಜ ಸೇವೆ ಮಾಡುವ ಸಂಕಲ್ಪ ಹೊಂದಿದ್ದಾರೆ.
ಈಗಾಗಲೇ ತಮ್ಮ ಸಂಸ್ಥೆಯಿಂದ ಐಎಎಸ್, ಕೆಎಎಸ್ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಬೆಂಗಳೂರು, ಜಮ್ಮು-ಕಾಶ್ಮೀರ, ಲಕ್ಕೋ, ಹೈದ್ರಾಬಾದ್, ಮೈಸೂರು, ಧಾರವಾಡ ಹಾಗೂ ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕು ಬೆಳ್ಳೂಡಿ ಗ್ರಾಮದಲ್ಲಿ ತಮ್ಮ ಇನ್ಸೆಟ್ಸ್ ಸಂಸ್ಥೆಯ ಮೂಲಕ ಜನ ಸೇವೆ ಮಾಡುತ್ತಿದ್ದಾರೆ.
ಇನ್ನು ಗಣಪತಿ ಹಬ್ಬ ಬಂತೆಂದರೆ ಸಾಕು ಹುರುಪಿನಿಂದ ಯುವಕರಿಗೆ ಪ್ರೋತ್ಸಾಹಿಸುತ್ತಾರೆ. ಹತ್ತು ಸಾವಿರ ಟೀ-ಶರ್ಟ್‌ಗಳನ್ನು ಯುವಕರಿಗೆ ವಿತರಿಸಿದ್ದಾರೆ. ಮನೆಯ ಬಾಗಿಲಿಗೆ ಬಂದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹಣ ಸಹಾಯ ಮಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಕೈಲಾದ ಧನಸಹಾಯ ನೀಡಿ ಮಾನವೀಯತೆ ಮೆರೆಯುವ ಮೂಲಕ ಎಲ್ಲರ ಶ್ಲಾಘನೆಗೆ ಒಳಗಾಗಿದ್ದಾರೆ.
ಮಾನವೀಯತೆ ಮೈಗೂಡಿಸಿಕೊಂಡು ಬೆಳೆದಿರುವ ವಿನಯಕುಮಾರ್ .ಜಿ.ಬಿ.ಯವರು ಸಮಾಜಸೇವೆಯ ಜೊತೆಗೆ ರಾಜಕಾರಣದಲ್ಲೂ ಬೆಳೆದು ಜನರಿಗೆ ಹೆಚ್ಚು ಸಹಾಯ ಮಾಡುವ ಗುರಿ ಹೊಂದಿದ್ದಾರೆ. ದಾವಣಗೆರೆ ಜಿಲ್ಲೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇಡೀ ದಾವಣಗೆರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಚಿಂತನೆ ಹೊಂದಿದ ವಿನಯ್ ಕುಮಾರ್ ಜಿ.ಬಿ. ಯವರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಹಾಗೂ ಜನಸೇವೆ ಮಾಡಲು ಎಲ್ಲ ಅರ್ಹಗುಣಗಳು ಅವರಲ್ಲಿವೆ ಎಂದರೆ ತಪ್ಪಾಗಲಾರದು. ಸ್ವಾರ್ಥ ತುಂಬಿದ ಜನಗಳೇ ಸಮಾಜದಲ್ಲಿ ತುಂಬಿರುವಾಗ ವಿನಯ್ ಕುಮಾರ್ ಜಿ.ಬಿ.ಯವರು ದಾವಣಗೆರೆ ಜಿಲ್ಲೆಯ ಜನರಿಗೆ ದೇವರು ಕೊಟ್ಟ ವರವಾಗಿದ್ದಾರೆ. ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ವಿನಯ್ ಕುಮಾರ್ ಜಿ.ಬಿ.ಯವರಿಗೆ ಭಗವಂತ ಸಮಾಜ ಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ಎಂಬುದು ಅಭಿಮಾನಿಗಳ ಹಾರೈಕೆ ಯಾಗಿದೆ .