ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಜೂನ್ 25,ರಂದು ಮಾರ್ಗ ದರ್ಶನ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ದೇಶದ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಬೇಡ ಜಂಗಮ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ ರಚನೆಯಾಯಿತು.
ಬೇಡಜಂಗಮರ ಅಭಿವೃದ್ಧಿಗಾಗಿ ಸಂಘಟಿತರಾಗಿ ರಾಷ್ಟ್ರದಾದ್ಯಂತ ಹೋರಾಡಬೇಕು ಎಂಬ ಕನಸು ಇಂದು ನನಸಾಯಿತು ಎಂದು ಸದಾಶಿವಯ್ಯ ಅರಕೇರಿಮಠ ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.
ಬೇಡಜಂಗಮ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ ರಚನೆಯ ಶುಭಕಾರ್ಯಕ್ರಮದಲ್ಲಿ ರಾಷ್ಟ್ರದಾದ್ಯಂತ ವಿವಿಧ ರಾಜ್ಯಗಳ ಮಠಾಧೀಶ್ವರರು ಭಾಗವಹಿಸಿದ್ದು ಸಂಘಟನೆಗೆ ಹೆಚ್ಚು ಬಲಬಂದಂತಾಗಿದೆಎಂದು ಸಂಘಟಕರು ಸಂತಸ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುವ ನ್ಯಾಯವಾದಿಗಳನ್ನು ಸಂಘಟಿಸಿ ಈ ಕಾರ್ಯಕ್ರಮಕ್ಕೆ ಹೆಚ್ಚು ಶಕ್ತಿ ತುಂಬಿದ ನ್ಯಾಯ ವಾದಿ ಶ್ರೀ ಮಲ್ಲಿಕಾರ್ಜುನ ಭೃಂಗಿ ಮಠ ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು ಮತ್ತು ಕಾರ್ಯ ಕ್ರಮನಡೆಯಲು ಸ್ಥಳಾವಕಾಶ , ಮತ್ತು ಆತಿಥ್ಯ ಮಾಡಿಕೊಟ್ಟ ಮಾರ್ಗ ದರ್ಶನ ಶಿಕ್ಷಣ ಸಂಸ್ಥೆಯವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹೊಸ ಪೇಟೆಯ ವಕೀಲರಾದ ಶ್ರೀಬಸವರಾಜ್ ರವರು,ಶ್ರೀಮತಿ ಸವಿತಾ ಹಿರೇಮಠ, ದಾನಮ್ಮ ತೆಗ್ಗಿ ಹಳ್ಳಿ, ಶಾಂತಮ್ಮ ಹಿರೇಮಠ ಹಾಗೂ ಚಿಂತನಮಂತನ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದು ಸಭೆಗೆ ಮೆರುಗು ನೀಡಿತು ಎಂದು ಹೊನಗನಹಳ್ಳಿಯ ಶ್ರೀಮತಿ ಶಾಂತಾ ಹಿರೇಮಠ ರವರು ತಿಳಿಸಿದ್ದಾರೆ.