Saturday, December 21, 2024
Homeಆರೋಗ್ಯಮಾದಕ ವ್ಯಸನಿಗಳಲ್ಲಿ ಶೇ 10 ರಷ್ಟು ಆತ್ಮಹತ್ಯೆ ಪ್ರಕರಣಗಳೇ ಹೆಚ್ಚು :ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಸಂತೋಷ್...

ಮಾದಕ ವ್ಯಸನಿಗಳಲ್ಲಿ ಶೇ 10 ರಷ್ಟು ಆತ್ಮಹತ್ಯೆ ಪ್ರಕರಣಗಳೇ ಹೆಚ್ಚು :ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಸಂತೋಷ್ ಕುಮಾರ್

ದಾವಣಗೆರೆ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ದಾವಣಗೆರೆ ಜಿಲ್ಲೆ ವತಿಯಿಂದ ಕಿತ್ತೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅನಧಿಕೃತ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯಲ್ಲಿ ಸಂತೋಷ್ ಕುಮಾರ್ ಎಂ ಸೆಕ್ಯಾಟ್ರಿಕ್ ಸೋಶಿಯಲ್ ವರ್ಕರ್ ಎಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರವರು ಪ್ರಸ್ತುತ ದಿನದಲ್ಲಿ 20 ಮಿಲಿಯನ್ ಜನರು ಮಾದಕ ವ್ಯಸನ ಕ್ಕೆ ಅವಲಂಬನೆ ಯಾಗುತ್ತಿದ್ದಾರೆ. ಪ್ರತಿ ವರ್ಷವೂ ಕೂಡ 5.70 ಲಕ್ಷ ವ್ಯಸನಕ್ಕೆ ಗಿಡಾಗಿ ಸಾವನ್ನಪ್ಪುತ್ತಿದ್ದಾರೆ. ಮತ್ತು ಭಾರತದಲ್ಲಿ ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ 7.5 ಕೋಟಿ ಮಾದಕ ವ್ಯಸನಿಗಳಿದ್ದಾರೆ, ಪ್ರತಿ 10 ಜನರು ಮಾದಕ ವಚನಗಳಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ 10 ಜನರಲ್ಲಿ ಇಬ್ಬರು 16 ವರ್ಷಕ್ಕಿಂತ ಕಡಿಮೆ ವಯೋಮಾನದವರೇ ಹಾಗಿದ್ದರೆ ಎನ್ನುವುದೇ ದುರಂತ ಎಂದರು.
ಮತ್ತು ಕಾನೂನಾತ್ಮಕವಾಗಿ ತಂಬಾಕು, ಸಿಗರೇಟು, ಮದ್ಯಪಾನ ಇನ್ನಿತರ, ಮತ್ತು ಅನಧಿಕೃತವಾಗಿ ಸಿಗುವಂತಹ ಗಾಂಜಾ, ಹೆರಾಯಿನ್ಕ್ಕೆ, ಅಫೀಮು, ಚರಾಸ್, ಕೊಕೇನ್, ಬಂಗ್, ನಿಕೋಟಿನ್, ಚುಚ್ಚುಮದ್ದು, ಇವೆಲ್ಲ ಸೇವನೆಯಲ್ಲಿ ನಗರ ಮತ್ತು ಕೊಳಗೇರಿ ಕೇಂದ್ರಗಳಲ್ಲಿ ಯುವಕರೇ ಹೆಚ್ಚು.. ಈ ತರಹದ ಮಾದಕ ವಸ್ತುಗಳನ್ನು ಬಳಸುವುದರಿಂದ ಮೆದುಳಿನ ಮೇಲೆ ಪರಿಣಾಮ ಬೀರಿ ದೈಹಿಕವಾಗಿ ಮಾನಸಿಕವಾಗಿ ದುಷ್ಪರಿಣಾಮಗಳು ಉಂಟಾಗುವುದು ಎಂದರು. ಎಲ್ಲಾದರೂ ಯುವಕರು ವ್ಯಸನಕ್ಕೆ ಒಳಗಾಗುತ್ತಿರುವುದು ಕಂಡು ಬಂದರೆ ಪೋಷಕರು ಎಚ್ಚರಿಸಬೇಕು ಇಲ್ಲದಿದ್ದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುವುದು. ಎಂದರು ಅವರ ಸ್ನೇಹಿತರಲ್ಲಿ ಯಾರಾದರೂ ವ್ಯಸನಿಗಳಿದ್ದರೆ ಅಂತವರಿಂದ ದೂರವಿರುವುದು ಲೇಸು ಎಂದು ಕಿವಿ ಮಾತನ್ನು ಹೇಳಿದರು.
ಹಾಗೂ ಯಾರಾದರೂ ಅನಧಿಕೃತವಾಗಿ ಮಾದಕ ವಸ್ತುಗಳನ್ನ ಉಪಯೋಗಿಸುವುದು ಮಾರುವುದಾಗಲಿ ಇದ್ದರೆ ಅದು ಕಾನೂನು ಬಾಹಿರ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು ಮತ್ತು ಯಾರಾದರೂ ವ್ಯಸನಕ್ಕೆ ಒಳಗಾಗಿದ್ದಾರೆ ಅಂತವರನ್ನು ಗುರುತಿಸಿ ಜಿಲ್ಲಾ ಆಸ್ಪತ್ರೆ ಅಥವಾ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ ಅಥವಾ ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಕರೆದುಕೊಂಡು ಬನ್ನಿ ಅವರಿಗೆ ಆಪ್ತ ಸಮಾಲೋಚನೆ, ಚಿಕಿತ್ಸೆ ಉಚಿತವಾಗಿ ನೀಡುತ್ತೇವೆ ಎಂದರು ಈ ಸಂದರ್ಭದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯ ಅಧಿಕಾರಿಯದ ಪ್ರತಿಭಾ ಮತ್ತು ಪುಷ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು .

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments