ದಾವಣಗೆರೆ, ಜುಲೈ,
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ “ಸೂರಜ್
ಎಜುಕೇಷನ್ ಟ್ರಸ್ಟ್”ನಿಂದ ಪ್ರತೀ ವರ್ಷ ಎಸ್.ಎಸ್.ಎಲ್.ಸಿ.
ಪರೀಕ್ಷೆಯಲ್ಲಿ ಶೇಕಡಾ ೯೦ ರಷ್ಟು ಅಂಕ ಪಡೆದ
ಪ್ರತಿಭಾವಂತ ದೈವಜ್ಞ ಸಮಾಜದ ಮಕ್ಕಳಿಗೆ ಪ್ರಥಮ
ಹಾಗೂ ದ್ವಿತೀಯ ಪಿಯುಸಿ ಶಿಕ್ಷಣಕ್ಕೆ ಉಚಿತ ಪ್ರವೇಶಾವಕಾಶ
ನೀಡಲಾಗುವುದು ಎಂದು ಈ ಶಿಕ್ಷಣ ಸಂಸ್ಥೆಯ
ಸAಸ್ಥಾಪಕರಾದ ಡಾ.ಮಂಜುನಾಥ್ ಶ್ರೀಪಾದ್‌ಕೃಷ್ಣ
ರೇವಣಕರ್‌ರವರು ಇತ್ತೀಚಿಗೆ ದಾವಣಗೆರೆಯ ಶ್ರೀಮತಿ
ಗೌರಮ್ಮ ನರಹರಿಶೇಟ್ ಸಭಾ ಭವನದಲ್ಲಿ ನಡೆದ
ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್
ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ೨೦೨೨-೨೩ನೇ ಸಾಲಿನ
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಶಾರದಾ ಪುರಸ್ಕಾರ” ರಾಜ್ಯ
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ
ಉಪಸ್ಥಿತರಿದ್ದು ಈ ಶೈಕ್ಷಣಿಕ ಕಾಳಜಿಯ ವಿಷಯ
ಘೋಷಿಸಿದರು.
ದೈವಜ್ಞ ಸಮಾಜದ ಪಿ.ಯು.ಸಿ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ
ಪ್ರವೇಶಾವಕಾಶದ ಜತೆಯಲ್ಲಿ ಪಠ್ಯ ಪುಸ್ತಕ, ಶಿಕ್ಷಣ
ಪರಿಕರ, ಸಮವಸ್ತç ಉಚಿತವಾಗಿ ವಿತರಿಸುತ್ತಿದ್ದು ಹೆಸರು
ನೊಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗೆ ೦೮೨೫೫ ೨೬೦೨೭೧,
೯೪೪೮೧೪೯೪೧೯ ಈ ಸನೀಹವಾಣಿಗಳಿಗೆ ಸಂಪರ್ಕಿಸಬಹುದು ಎಂದು
ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರಿನ ಘಟಕದ
ಅಧ್ಯಕ್ಷರೂ, ಈ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ
ಡಾ.ಮAಜುನಾಥ್ ರೇವಣಕರ್ ತಿಳಿಸಿದ್ದಾರೆ