ನಷ್ಟದ ಹಾದಿಯಲ್ಲಿದ್ದ ಸಾರಿಗೆ ಸಂಸ್ಥೆಗಳು ಈಗ ಲಾಭದ ದಾರಿಗೆ ಮರಳಿವೆ. ಪುರುಷ ಪ್ರಯಾಣಿಕರ ಸಂಖ್ಯೆಯೂ ಗಣನಿಯವಾಗಿ ಹೆಚ್ಚಳವಾಗಿ ಸಾರಿಗೆ ಸಂಸ್ಥೆಗಳಿಗೆ ಆದಾಯ ಹರಿದುಬರುತ್ತಿದೆ. ಜೂನ್ ಒಂದರ ಮೊದಲು ನಿತ್ಯದ ಆದಾಯ ಕೆ.ಎಸ್.ಆರ್.ಟಿ.ಸಿ.೯.೯೫,ಕೋಟಿ-ಬಿ.ಎಮ್.ಟಿ.ಸಿ.೪.೧೮,ಕೋಟಿ-ಎನ್.ಡಬ್ಲು.ಕೆ.ಆರ್.ಟಿ.ಸಿ,೪.೭೫,ಕೋಟಿ-ಕೆ.ಕೆ.ಆರ್.ಟಿ.ಸಿ,೪.೯,ಕೋಟಿ ಆಗಿದ್ದರೆ ಜೂನ್ ೧೧,ರಿಂದ ಸಾರಿಗೆ ಸಂಸ್ಥೆಗಳ ನಿತ್ಯದ ಆದಾಯ ಕೆ.ಎಸ್.ಆರ್.ಟಿ.ಸಿ,೧೧.೫೧,ಕೋಟಿ-ಬಿ.ಎಮ್.ಟಿ.ಸಿ.೫.೧೮,ಕೋಟಿ-ಎನ್.ಡಬ್ಲು.ಕೆ.ಆರ್.ಟಿ.ಸಿ,೬.೪೮,ಕೋಟಿ-ಕೆ.ಕೆ.ಆರ್.ಟಿ.ಸಿ,೫.೭೭,ಕೋಟಿ .ಬರುತ್ತಿದೆ. ಬಿಜೆಪಿಯ ಖಾಸಗೀಕರಣದ ಹುನ್ನಾರಕ್ಕೆ ನಷ್ಟದ ಕೂಪಕ್ಕೆ ಜಾರಿದ್ದ ಸಾರಿಗೆ ಸಂಸ್ಥೆಗಳು ಈಗ ತಲೆ ಎತ್ತಿ ಬೀಗುತ್ತಿವೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಮುಳುಗಿಯೇ ಬಿಡುತ್ತವೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಅರ್ಥಶಾಸ್ತ್ರದ ಬೃಹಸ್ಪತಿಗಳು ಈಗ ದ್ರಾಕ್ಷಿ ಸಿಗದ ನರಿಯಂತೆ ಆಗಿದ್ದಾರೆ!ಎಂದು ಹೇಳಲಾಗುತ್ತಿದೆ